Asianet Suvarna News Asianet Suvarna News

ಆರು ವರ್ಷಗಳ ಲಿವ್‌ ಇನ್‌ ಸಂಬಂಧಕ್ಕೆ ಬಿತ್ತು ಬ್ರೇಕ್‌? ಮಲೈಕಾ- ಅರ್ಜುನ್‌ ನಡುವೆ ಆಗಿದ್ದೇನು?

ಆರು ವರ್ಷಗಳ ಲಿವ್‌ ಇನ್‌ ಸಂಬಂಧಕ್ಕೆ ಬಿತ್ತು ಬ್ರೇಕ್‌? ಮಲೈಕಾ- ಅರ್ಜುನ್‌ ದೂರ ಆಗ್ತಿದ್ದಾರಾ? ಅಷ್ಟಕ್ಕೂ ಆಗಿದ್ದೇನು?
 

Malaika Arora Arjun Kapoor part ways but may not announce their breakup due to THIS reaso suc
Author
First Published May 31, 2024, 2:18 PM IST

ಬಾಲಿವುಡ್​ ಹಸಿಬಿಸಿ ಲೇಡಿ ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ.  ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್​ ಆಗುತ್ತಲೇ ಇರುತ್ತವೆ. ಮಲೈಕಾ ಏನೋ ಅರ್ಜುನ್​ ಕಪೂರ್​ ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ ಅದೇ ಇನ್ನೊಂದೆಡೆ ಅರ್ಬಾಜ್​ ಖಾನ್ ಕೆಲ ತಿಂಗಳ ಹಿಂದೆ ತಮ್ಮ ಅರ್ಧ ವಯಸ್ಸಿನ ಯುವತಿ ಶುರಾ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.

 ಆದರೆ ಇದರ ಬೆನ್ನಲ್ಲೇ ಇವರಿಬ್ಬರೂ ಬ್ರೇಕಪ್​ ಆಗಿದ್ದಾರೆ ಎಂಬ ಭಾರಿ ಸುದ್ದಿ ಬಿ ಟೌನ್​ನಲ್ಲಿ ಹರಿದಾಡುತ್ತಿದೆ. ಕೆಲ ತಿಂಗಳ ಹಿಂದೆ ಇಂಥದ್ದೇ ಸುದ್ದಿ ಹರಿದಾಡಿತ್ತು.  ಇಷ್ಟು ದಿನ ಮಲೈಕಾ ಜೊತೆ  ಟ್ರಿಪ್​ಗೆ ಹೋಗುತ್ತಿದ್ದ ಅರ್ಜುನ್​ ಈಗ ಒಂಟಿಯಾಗಿ ತಿರುಗಾಡಲು ಶುರು ಮಾಡಿದ್ದೇ ಈ ಗಾಳಿ ಸುದ್ದಿಗೆ ಕಾರಣವಾಗಿತ್ತು. ಆದರೆ ಅದರ ಬಳಿಕ ಇಬ್ಬರೂ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ಬ್ರೇಕ್‌ ಹಾಕಿದ್ದರು. ಆದರೆ ಈಗ ನಿಜವಾಗಿಯೂ ಇಬ್ಬರೂ ಬ್ರೇಕಪ್‌ ಆಗಿದ್ದಾರೆ ಎನ್ನಲಾಗಿದೆ.

ಕಸವನ್ನು ಹೀಗೆಲ್ಲಾ ಹೆಕ್ಕಿ ಹಾಕ್ತಾರಾ? ಪೋಸ್​ ಕೊಡಲು ಹೋಗಿ ಮಲೈಕಾ ಅರೋರಾ ಸಕತ್​ ಟ್ರೋಲ್​!

 ವರದಿಗಳನ್ನು ನಂಬುವುದಾದರೆ, ಈ ಜೋಡಿ ಬೇರೆಯಾಗಲು ನಿರ್ಧರಿಸಿದ್ದಾರೆ. ಮಲೈಕಾ ಮತ್ತು ಅರ್ಜುನ್ ಅವರ ಸಂಬಂಧವು ತುಂಬಾ ವಿಶೇಷವಾಗಿತ್ತು ಮತ್ತು ಇಬ್ಬರೂ ಯಾವಾಗಲೂ ಪರಸ್ಪರರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತಾರೆ. ಆದರೆ ಗೌರವಯುತವಾಗಿಯೇ ಈಗ ಬೇರೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇಬ್ಬರೂ ಮೌನವಾಗಿದ್ದಾರೆ.  ತಮ್ಮ ಸಂಬಂಧವನ್ನು ಪ್ರಚಾರ ಮಾಡಲು ಯಾರಿಗೂ ಅವಕಾಶ ನೀಡಲು ಅವರು ಬಯಸುವುದಿಲ್ಲ. ಅಷ್ಟಕ್ಕೂ ಈ ಜೋಡಿ ಒಬ್ಬರನ್ನೊಬ್ಬರು ತುಂಬಾ ಗೌರವಿಸುತ್ತಾರೆ ಮತ್ತು ಒಬ್ಬರಿಗೊಬ್ಬರು ಬಲವಾದ ಸ್ತಂಭಗಳಂತೆ ನಿಂತಿದ್ದಾರೆ ಎಂದೇ ಹೇಳಲಾಗುತ್ತದೆ. ಆದರೆ ಬ್ರೇಕಪ್‌ಗೆ ನಿಜವಾದ ಕಾರಣ ಇದುವರೆಗೆ ತಿಳಿದು ಬರಲಿಲ್ಲ. ಬ್ರೇಕಪ್‌ ಬಳಿಯೂ  ಪರಸ್ಪರ ಗೌರವಿಸುವುದನ್ನು ಮುಂದುವರಿಸುತ್ತಾರೆ ಎನ್ನಲಾಗಿದೆ. 

ಅರ್ಜುನ್ ಮತ್ತು ಮಲೈಕಾ ಅವರ ಸಂಬಂಧದ ವದಂತಿಗಳು 2018 ರಲ್ಲಿ ಫ್ಯಾಷನ್ ಶೋ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ ಪ್ರಾರಂಭವಾಯಿತು. ಮಲೈಕಾ ಅವರ 45 ನೇ ಹುಟ್ಟುಹಬ್ಬದಂದು, ಅವರು ತಮ್ಮ ಸಂಬಂಧವನ್ನು ಸಾಮಾಜಿಕ ಮಾಧ್ಯಮದಲ್ಲಿ ಖಚಿತಪಡಿಸಿದ್ದರು. ಆದರೆ ಇದೀಗ, ನಟಿ ಕುಶಾ ಕಪಿಲಾ ಅವರ ಹೆಸರು ಅರ್ಜುನ್ ಕಪೂರ್ ಜತೆ ಥಳುಕು ಹಾಕಿಕೊಂಡಿದೆ. ಕುಶಾ ಜೊತೆ ಅರ್ಜುನ್‌ ಕಪೂರ್‌ (Arjun Kapoor) ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನಲಾಗಿದೆ.  ಈಗ ಚಿಕ್ಕ ವಯಸ್ಸಿನ ಕುಶಿ ಜೊತೆ ಹೆಸರು ಕೇಳಿಬರುತ್ತಿದ್ದಂತೆಯೇ ಅವರಿಬ್ಬರ ಸುದ್ದಿ ಸಕತ್‌ ಕೇಳಿಬರುತ್ತಿದೆ. ಅಷ್ಟಕ್ಕೂ ಇವರಿಬ್ಬರ ಹೆಸರು ಥಳಕು ಹಾಕಲು ಕಾರಣ ಏನೆಂದರೆ,   ಈ ಹಿಂದೆ, ಅರ್ಜುನ್ ಕಪೂರ್ ಮತ್ತು ಕುಶಾ ಕಪಿಲಾ ನಿರ್ದೇಶಕ ಕರಣ್ ಜೋಹರ್ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಲ್ಲಿ ಮಲೈಕಾ ಅರೋರಾ ಬಂದಿರಲಿಲ್ಲ. ಅಷ್ಟೇ ಅಲ್ಲದೇ, ಅರ್ಜುನ ಕಪೂರ್‌ ಸೋಲೋ ಟ್ರಿಪ್‌ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಒಂದಕ್ಕೊಂದು ಜೋಡಿಸಿ ಈ ರೂಮರ್ಸ್ ಹರಡಲಾಗುತ್ತಿದೆ. 

ನನ್ನ ಹಿಂಬದಿ ಊಟದ ಟೇಬಲ್​ನಂತೆ ಕಂಡುಬಂದ್ರೆ ಏಳು ಮಂದಿಗೆ ಆಹಾರ ನೀಡ್ತೇನೆ... ನಿಮಗೇನ್ರೀ ಸಮಸ್ಯೆ?

Latest Videos
Follow Us:
Download App:
  • android
  • ios