Asianet Suvarna News Asianet Suvarna News

ಸಲ್ಮಾನ್​ ಖಾನ್​ಗೆ ಜೀವ ಬೆದರಿಕೆ ಬೆನ್ನಲ್ಲೇ ಆಪ್ತನ ಮೇಲೆ ರಾಡ್​ನಿಂದ ಹಲ್ಲೆ: ಆತಂಕದಲ್ಲಿ ಸಲ್ಲು ಫ್ಯಾನ್ಸ್​!

ಸಲ್ಮಾನ್​ ಖಾನ್​ ಅವರಿಗೆ ಇದಾಗಲೇ ಹಲವು ಬಾರಿ ಜೀವ ಬೆದರಿಕೆ ಬೆನ್ನಲ್ಲೇ ಆಪ್ತನ ಮೇಲೆ ರಾಡ್​ನಿಂದ ಹಲ್ಲೆ ನಡೆದಿದೆ. ಆಗಿದ್ದೇನು?
 

Makeup artist working in Salman Khans production house assaulted fans worrying suc
Author
First Published Dec 14, 2023, 4:02 PM IST

ಬಾಲಿವುಡ್​ ನಟ ಸಲ್ಮಾನ್​ ಖಾನ್​ಗೆ ಇದಾಗಲೇ ಹಲವಾರು ಬಾರಿ ಕೊಲೆ ಬೆದರಿಕೆ ಬರುತ್ತಲೇ ಇದೆ. ಗ್ಯಾಂಗ್​ಸ್ಟರ್​  ಲಾರೆನ್ಸ್​ ಬಿಷ್ಣೋಯ್​ ನಟ ಸಲ್ಮಾನ್ ಖಾನ್ (Salman Khan) ಅವರನ್ನು ಕೊಲ್ಲುವುದಾಗಿ ಇದಾಗಲೇ ಹಲವಾರು ಬಾರಿ ಬೆದರಿಕೆ ಹಾಕಿದ್ದಾನೆ.  ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ (Blackbuck poaching case) ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದೇ ಈ ಬೆದರಿಕೆಗೆ ಕಾರಣ. ಈ ಪ್ರಕರಣದಲ್ಲಿ ಸಲ್ಮಾನ್​ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾನೆ. ಏಕೆಂದರೆ,  ಕೃಷ್ಣಮೃಗಗಳನ್ನು ಬಿಷ್ಣೋಯ್ ಸಮುದಾಯವು ಪವಿತ್ರವೆಂದು ಪರಿಗಣಿಸುತ್ತದೆ. ಅದಕ್ಕಾಗಿಯೇ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿದ್ದಾನೆ.  ಕೊಲೆ ಬೆದರಿಕೆ ಒಡ್ಡಿರುವ ಆರೋಪ ಹೊತ್ತ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿ ಇದ್ದು, ಈಗ ಪದೇ ಪದೇ  ಮತ್ತೆ ಬೆದರಿಕೆ ಹಾಕುತ್ತಲೇ ಇದ್ದಾನೆ.  ಅಷ್ಟಕ್ಕೂ ಆತನ ಬೇಡಿಕೆ ಎಂದರೆ ಕೃಷ್ಣಮೃಗವನ್ನು ಕೊಂದಿರುವುದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎನ್ನುವುದು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಇದಾಗಲೇ ಹೇಳಿದ್ದಾನೆ.  ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದ. ಇದರ ಹೊರತಾಗಿಯೂ ಸಲ್ಮಾನ್​ ಖಾನ್​ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ  ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್​ ಎಚ್ಚರಿಕೆ ನೀಡುತ್ತಲೇ ಇದೆ.  ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದಾನೆ.  

ಇದರ ಬೆನ್ನಲ್ಲೇ ಇದೀಗ ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಮನೆಯ ಮೇಲೆ ಗುಂಡಿನ ದಾಳಿ ನಡೆದಿತ್ತು.  ಬಾಲಿವುಡ್​ ನಟ ಸಲ್ಮಾನ್ ಖಾನ್ ಜೊತೆ ಗಿಪ್ಪಿ ನಿಕಟ ಸಂಬಂಧ ಹೊಂದಿದ್ದರಿಂದ ಈ ರೀತಿ ಮಾಡಲಾಗಿದೆ ಎಂದು  ಬಿಷ್ಣೋಯ್ ಹೇಳಿದ್ದ. ಇದೀಗ ಇನ್ನೊಂದು ಆತಂಕಕಾರಿ ವಿಷಯದಲ್ಲಿ, ಸಲ್ಮಾನ್​ ಖಾನ್​ ಅವರ ಪ್ರೊಡಕ್ಷನ್​ ಹೌಸ್​ನಲ್ಲಿ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿರುವ ಪಾಲೇಶ್ವರ್ ಚೌಹಾಣ್ ಅವರ ಮೇಲೆ ರಾಡ್​ನಲ್ಲಿ ಹಲ್ಲೆ ನಡೆದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಮದ್ವೆ ಗುಟ್ಟಾಗಿ ನಡೆದೋಯ್ತಾ? ವೈರಲ್​ ವಿಡಿಯೋ ನೋಡಿ ಭಾರಿ ಚರ್ಚೆ

ಈ ಘಟನೆಯಿಂದ ಸಲ್ಲು ಭಾಯಿ ಫ್ಯಾನ್ಸ್​ ಸಕತ್​ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಸಲ್ಮಾನ್​ ಖಾನ್​ ಕೊಲೆ ಬೆದರಿಕೆಗೂ, ಈ ಹಲ್ಲೆಗೂ ಸಂಬಂಧವಿಲ್ಲ ಎಂದು ಹೇಳಲಾಗುತ್ತಿದೆ. ಸಾಲದ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ.  ಅಷ್ಟಕ್ಕೂ ಆಗಿದ್ದೇನೆಂದರೆ,  ಪಾಲೇಶ್ವರ್ ಚೌಹಾಣ್ ಬಾರ್ ಮ್ಯಾನೇಜರ್‌ ಸತೀಶ್​ ಎನ್ನುವವರಿಗೆ  ಸಾಲ ನೀಡಿದ್ದರು. ಅವರು ಪಾಲೇಶ್ವರ್​ಗೆ ಅರ್ಧ ಹಣವನ್ನು ಹಿಂದಿರುಗಿಸಿದ್ದರು. ಉಳಿದ ಹಣವನ್ನು ಹಿಂದಿರಿಗಿಸಿ ಎಂದು ಕೇಳಲು ಪಾಲೇಶ್ವರ್​ ಬಾರ್‌ಗೆ ತೆರಳಿದರು. ಆದರೆ ಮಧ್ಯರಾತ್ರಿಯವರೆಗೆ ಕಾದರೂ ಅವರು ಬರಲಿಲ್ಲ.  

ಮಧ್ಯರಾತ್ರಿ 1 ಗಂಟೆಗೆ ಸತೀಶ್ ಆಗಮಿಸಿದರು. ‘ಇದು ಬಾರ್ ಮುಚ್ಚುವ ಸಮಯ. ನಾಳೆ ಮಾತನಾಡೋಣ’ ಎಂದು ಹೇಳಿ ಹೊರಟೇ ಬಿಟ್ಟರು ಸತೀಶ್. ಇದು ಪಾಲೇಶ್ವರ್ ಕೋಪಕ್ಕೆ ಕಾರಣವಾಯಿತು. ಅವರು ಬಾರ್ ಹೊರಗೆ ಸತೀಶ್​ನ ಪ್ರಶ್ನೆ ಮಾಡಿದರು. ಈ ವೇಳೆ ಪಾಲೇಶ್ವರ್​ ಮೇಲೆ ಸತೀಶ್ ಹಾಗೂ ಅವರ ಸಹಚರರು ಹಲ್ಲೆ ಮಾಡಿದ್ದಾರೆ. ಪಾಲೇಶ್ವರ್ ಚೌಹಾಣ್ ಗಂಭೀರವಾಗಿ ಗಾಯಗೊಂಡಿದ್ದಾರೆ.  ಪೊಲೀಸರು  ಪಾಲೇಶ್ವರ್ ಅವರನ್ನು  ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.  ಇದರ ಹೊರತಾಗಿಯೂ ಸಲ್ಮಾನ್​ ಖಾನ್​ ಫ್ಯಾನ್ಸ್​ ಆತಮಕದಿಂದ ಇದ್ದಾರೆ. 

ಯಶ್​ ಫ್ಯಾನ್ಸ್​ಗೆ ಕೊನೆಗೂ ಸಿಕ್ತು ಮತ್ತೊಂದು ಗುಡ್​ನ್ಯೂಸ್​: ರಾವಣನ ಆರ್ಭಟದಲ್ಲಿ ಮಿಂಚಲಿದ್ದಾರೆ ನಟ?

Follow Us:
Download App:
  • android
  • ios