Asianet Suvarna News Asianet Suvarna News

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಮದ್ವೆ ಗುಟ್ಟಾಗಿ ನಡೆದೋಯ್ತಾ? ವೈರಲ್​ ವಿಡಿಯೋ ನೋಡಿ ಭಾರಿ ಚರ್ಚೆ

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಮದ್ವೆ ಗುಟ್ಟಾಗಿ ನಡೆದೋಯ್ತಾ? ವೈರಲ್​ ವಿಡಿಯೋ ನೋಡಿ ಹೀಗೊಂದು ಭಾರಿ ಚರ್ಚೆ ಶುರುವಾಗಿದೆ. 
 

Jahnvi Kapoor with Shikhar Pahariya at Ujjain Mahakaleshwar performing Pooja together Temple suc
Author
First Published Dec 14, 2023, 11:22 AM IST

ಒಂದು ಕಾಲದಲ್ಲಿ ಬಾಲಿವುಡ್​ ಆಳಿದ್ದ ಸುಂದರಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್​ (Janhvi Kapoor) ಸದಾ ಸುದ್ದಿಯಲ್ಲಿ ಇರುತ್ತಾರೆ. ಹೆಚ್ಚಾಗಿ ಬಿಕಿನಿ ತೊಟ್ಟು ಇಲ್ಲವೇ ಚಿಕ್ಕ ಉಡುಗೆ ಹಾಕಿಕೊಂಡು ಇವರು ಟ್ರೋಲ್​  ಆಗುತ್ತಿರುವುದೇ ಹೆಚ್ಚು. ಶ್ರೀದೇವಿಯಂಥ ನಟಿಯ ಮಗಳು ಈ ರೀತಿಯ ಡ್ರೆಸ್​ ಧರಿಸುವುದು ಸರಿಯಲ್ಲ ಎಂದು ನೆಟ್ಟಿಗರು ಪಾಠ ಮಾಡುತ್ತಲೇ   ಇರುತ್ತಾರೆ.  ಆದರೆ ಇದ್ಯಾವುದಕ್ಕೂ ಕೇರೇ ಅನ್ನದ ನಟಿ, ಸದಾ ಡೇಟಿಂಗ್​, ಪಾರ್ಟಿ, ಟೂರ್​ ಎನ್ನುತ್ತಲೇ ಇರುತ್ತಾರೆ.  ಈಗಾಗಲೇ ಜಾಹ್ನವಿ ಕಪೂರ್​ ಹೆಸರು ಹಲವಾರು ಮಂದಿಯ ಜೊತೆ ಥಳಕು ಹಾಕಿಕೊಂಡಿದೆ. ಸಾರಾ ಆಲಿ ಖಾನ್ ಮತ್ತು ಜಾಹ್ನವಿ ಕಪೂರ್ ಅವರು ಕಾಫಿ ವಿತ್​ ಕರಣ್​ನಲ್ಲಿ ಕಾಣಿಸಿಕೊಂಡಾಗ ಈ ವಿಷಯ ಬಹಿರಂಗಗೊಂಡಿತ್ತು. ಕರಣ್ ಯಾರ ಹೆಸರನ್ನೂ ಹೇಳದೇ ಇಬ್ಬರು ಸಹೋದರರ ನಡುವೆ ನೀವಿಬ್ಬರೂ ಈ ಹಿಂದೆ ಡೇಟಿಂಗ್‌ ಮಾಡ್ತಿದ್ರಿ, ಆ ಡೇಟಿಂಗ್‌ ಬಗ್ಗೆ ಒಂಚೂರು ಇಲ್ಲಿ ಹೇಳ್ತೀರಾ? ಅನ್ನೋ ಪ್ರಶ್ನೆ ಕೇಳಿದರು. ಆಗ ಸಾರಾ ಮತ್ತು ಜಾಹ್ನವಿ ಇಬ್ಬರೂ ಶಾಕ್‌ಗೆ ಒಳಗಾದವರಂತೆ ಕಂಡರು. ಟಾಪಿಕ್‌ ಚೇಂಜ್ ಮಾಡಿ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದರು. ಅಂತೂ ಕೊನೆಗೆ ಅವರು ಯಾರು ಎಂದು ನೆಟ್ಟಿಗರು ಪತ್ತೆ ಮಾಡಿದ್ದರು.

ಅಷ್ಟಕ್ಕೂ ಸದ್ಯ ಈಕೆಯ ಸುದ್ದಿ ಇರೋದು  ಉದ್ಯಮಿ ಶಿಖರ್​ ಪಹರಿಯಾ (Shikhar Pahariya) ಜೊತೆ. ಅಂದಹಾಗೆ, ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಶಿಂಧೆ (Sushil Kumar Shindhe) ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಸ್ಮೃತಿ ಶಿಂಧೆ ಅವರ ಪುತ್ರ. ಶಿಖರ್​ ಪಹರಿಯಾ ಜೊತೆ ಜಾಹ್ನವಿ ಡೇಟಿಂಗ್​  ಮಾಡ್ತಿರೋ ವಿಷಯ ತುಂಬಾ ಹಳೆಯದು. ಇದಾಗಲೇ ಹಲವು ಕಡೆಗಳಲ್ಲಿ ಇವರು ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಫೋಟೋ ಶೂಟ್​ ಕೂಡ ಮಾಡಿಸಿಕೊಂಡಿದ್ದಾರೆ.  ಬಾಲಿವುಡ್​ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ನಡುವೆಯೇ ಹೀಗೆಲ್ಲಾ ಸುದ್ದಿಯಾಗುತ್ತಲೇ ಇರುವ ಜಾಹ್ನವಿ ಈಗ ಬಾಯ್​ ಫ್ರೆಂಡ್​ (Boy Friend) ಜೊತೆ ಟ್ರಿಪ್​ಗೆ ಹೋಗಿರುವ ಫೋಟೋಗಳು ವೈರಲ್​ ಆಗಿದ್ದವು. ಆದರೆ ಶಿಖರ್​ಗೂ ಮುನ್ನ ಜಾಹ್ನವಿ ಅವರ ಹೆಸರು ಹಲವರ ಜೊತೆ ಥಳಕು ಹಾಕಿಕೊಂಡಿದ್ದಾರೆ.

ತ್ರಿಷಾ ಜೊತೆ ರೇಪ್​, ಬೆಡ್​ರೂಂ ದೃಶ್ಯಗಳ ಮಾತನಾಡಿ ಹೈಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡ ನಟ ಖಾನ್​!

ಇದೀಗ ಹೊಸ ಸುದ್ದಿ ಏನಪ್ಪಾ  ಎಂದರೆ, ಕದ್ದುಮುಚ್ಚಿ ಜಾಹ್ನವಿ ಮತ್ತು ಶಿಖರ್​ ಅವರ ಮದ್ವೆಯಾಗೋಯ್ತಾ ಎನ್ನುವುದು. ಏಕೆಂದರೆ, ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಈ ಜೋಡಿ ಭೇಟಿ ನೀಡಿದ್ದ ಜೋಡಿ ಅಲ್ಲಿ ಒಟ್ಟಿಗೆ ಕುಳಿತು ದಂಪತಿಯಂತೆ ವಿಶೇಷ ಪೂಜೆ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇಬ್ಬರು ಒಟ್ಟಿಗೆ ಪೂಜೆ ಸಲ್ಲಿಸಿದ ಫೋಟೋಗಳಿ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಮದುವೆ ಆಗೋಯ್ತಾ ಅಥವಾ ಶೀಘ್ರವೇ ಮದ್ವೆ ಆಗಲಿದ್ದಾರೆ ಎನ್ನುವ ಚರ್ಚೆ ಬಿ-ಟೌನ್​ನಲ್ಲಿ ಶುರುವಾಗಿದೆ. ಈ ಬಗ್ಗೆ ನಟಿಯಾಗಲೀ ಶಿಖರ್​ ಆಗಲೀ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.  

ಇದರ ನಡುವೆಯೇ,  ಜಾಹ್ನವಿಗೆ ತೆಲುಗಿನಲ್ಲಿ ಆಫರ್ ಮೇಲೆ ಆಫರ್​ ಬರುತ್ತಿದೆ. ಮೆಗಾಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಜಾನ್ವಿ ಕಪೂರ್ ಅವರನ್ನು ಅಂತಿಮಗೊಳಿಸಲಾಗಿದೆಯಂತೆ. ಅನೇಕ ಹೆಸರುಗಳನ್ನು ಪರಿಶೀಲಿಸಿದ ತಂಡವು ಅಂತಿಮವಾಗಿ ಜಾಹ್ನವಿಯನ್ನು ಆರಿಸಿದೆಯಂತೆ.

ಅರೆನಗ್ನ ನಟಿಯರನ್ನೆಲ್ಲಾ ಹಿಂದಿಕ್ಕಿದ 'ಅನಿಮಲ್' ಬೆತ್ತಲೆ ರಾಣಿ ತೃಪ್ತಿಗೆ ಸಿಕ್ತು ಇನ್ನೊಂದು ಪ್ರತಿಷ್ಠಿತ ಸ್ಥಾನ!

Follow Us:
Download App:
  • android
  • ios