ರಣಬೀರ್ ಕಪೂರ್ ಜೊತೆಗಿನ ಚಿತ್ರ ವೈರಲ್ ಆದ ಬಳಿಕ ತಮ್ಮ ವೃತ್ತಿಜೀವನ ಮುಗಿದಂತಾಯಿತೆಂದು ಮಹಿರಾ ಖಾನ್ ಭಾವಿಸಿದ್ದರು. ವಿಚ್ಛೇದನ, ಒಂಟಿ ತಾಯ್ತನದ ಹೋರಾಟದ ನಡುವೆ ಈ ಘಟನೆ ತೀವ್ರ ಒತ್ತಡ ತಂದೊಡ್ಡಿತು. ಬಿಬಿಸಿ ಲೇಖನವೊಂದು ತಮ್ಮ ವೃತ್ತಿಜೀವನದ ಅಂತ್ಯವನ್ನು ಸೂಚಿಸಿತ್ತೆಂದು ಮಹಿರಾ ಬಹಿರಂಗಪಡಿಸಿದ್ದಾರೆ. 

ಮಹಿರಾ ಖಾನ್ ಪಾಕಿಸ್ತಾನಿ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಭಾರತದಲ್ಲಿ ಕೂಡ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚೇ ಇದೆ. ಮಹಿರಾ ಅವರ ವೃತ್ತಿಪರ ಜೀವನವು ಸ್ಫೂರ್ತಿದಾಯಕವಾಗಿದ್ದರೂ, ವಿವಾದ ಅವರ ಬೆನ್ನು ಬಿಡಲಿಲ್ಲ. ಆಕೆಯ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಯಾವಾಗಲೂ ಸದ್ದು ಮಾಡುತ್ತಲೇ ಇರುತ್ತದೆ. ಇತ್ತೀಚೆಗೆ, ಮಹಿರಾ ವಿಚ್ಛೇದಿತ ಒಂಟಿ ತಾಯಿಯಾಗಿ ತನ್ನ ಹೋರಾಟದ ಬಗ್ಗೆ ಮತ್ತು ಹಿಂದಿ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ನಟರನ್ನು ಭಾರತ ಬ್ಯಾನ್​ ಮಾಡಿರುವ ಹಿನ್ನೆಲೆಯಲ್ಲಿ, ತಾವು ಎದುರಿಸುತ್ತಿದ್ದ ಸವಾಲುಗಳ ಬಗ್ಗೆ ತೆರೆದಿಟ್ಟಿದ್ದರು. ಆದರೆ ಇದೀಗ ರಣಬೀರ್​ ಕಪೂರ್​ ಅವರ ಜೊತೆಯಲ್ಲಿ, ಬೀದಿಯಲ್ಲಿಯೇ ನಡೆದ ಆ ಒಂದು ಘಟನೆ ಹೇಗೆ ತಮ್ಮ ಜೀವನವನ್ನು ತಲ್ಲಣಗೊಳಿಸಿತು ಎಂದು ತಿಳಿಸಿದ್ದಾರೆ. 

ಬಿಬಿಸಿ ಏಷ್ಯನ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ಹೇಳಿದ್ದಾರೆ. ಅದೊಮ್ಮೆ ನಾನು ನಟ ರಣಬೀರ್​ ಕಪೂರ್​ ಜೊತೆ ಬೀದಿಯಲ್ಲಿಯೇ ನಿಂತು ಧೂಮಪಾನ ಮಾಡುತ್ತಿದೆ. ಅದರ ಫೋಟೋಗಳು ಕ್ಷಣ ಮಾತ್ರದಲ್ಲಿ ವೈರಲ್​ ಆಗಿ ಹೋದವು. ಅದು ನನ್ನ ಸಿನಿಮಾ ಪ್ರಯಾಣಕ್ಕೇ ಧಕ್ಕೆ ತಂದಿತು. ನನ್ನನ್ನು ಹುಚ್ಚಳನ್ನಾಗಿಸಿತು. ಅದೆಷ್ಟೋ ರಾತ್ರಿ ನಿದ್ದೆಯಿಲ್ಲದೇ ಕಳೆದೆ ಎಂದಿದ್ದಾರೆ. ಈ ಫೋಟೋ ವೈರಲ್​ ಆದ ಬಳಿಕ ನನ್ನ ವೃತ್ತಿಜೀವನ ಮುಗಿದೇ ಹೋಯ್ತು ಎಂದು ಭಾವಿಸಿದೆ. ಇದು ವೈರಲ್​ ಆಗುತ್ತಿದ್ದಂತೆಯೇ ಸಾಕಷ್ಟು ಟೀಕೆಗಳು ಕೇಳಿಬಂದವು. ಇದು ನನಗೆ ದೊಡ್ಡ ಯಬಹುದು ಭಾವನಾತ್ಮಕ ಹೊಡೆತ ನೀಡಿತು. ಪಾಕಿಸ್ತಾನದಲ್ಲಿ ಇಷ್ಟೆಲ್ಲಾ ಸಾಧಿಸಿದ ನಂತರವೂ ಈ ಒಂದು ಫೋಟೋದಿಂದ ಎಲ್ಲವೂ ಮುಗಿದು ಹೋಯಿತು ಎಂದೇ ಭಾವಿಸಿದೆ ಎಂದಿದ್ದಾರೆ ಮಹಿರಾ.

ಖಾಸಗಿ ಫೋಟೋ ಇಟ್ಕೊಂಡು ಆಡಿಸ್ತಿದ್ದ, ಪೊಲೀಸ್‌ ಠಾಣೆಗೆ ಆಕೆ ಬಂದಾಗ... ಅಂದಿನ ಘಟನೆ ವಿವರಿಸಿದ ಡಿವೈಎಸ್ಪಿ ರಾಜೇಶ್‌

'ಫೋಟೋಗಳು ಹೊರಬಂದಾಗ ಬಿಬಿಸಿಯಲ್ಲಿ 'ದಿ ಲಿಟಲ್ ವೈಟ್ ಡ್ರೆಸ್' ಎಂಬ ಲೇಖನ ಪ್ರಕಟವಾಗಿತ್ತು. ಅದರಲ್ಲಿ ಈ ಚಿತ್ರವಿತ್ತು. ಮತ್ತು ಅದರಲ್ಲಿ ನಟಿಯ ವೃತ್ತಿಜೀವನ ಮುಗಿದಿದೆಯೇ ಎಂದು ಬರೆಯಲಾಗಿತ್ತು. ಪಾಕಿಸ್ತಾನದಲ್ಲಿ ಯಾರೂ ಸಾಧಿಸದ ರೀತಿಯ ಯಶಸ್ಸನ್ನು ಸಾಧಿಸಿದ ಮಹಿಳೆ, ಈಗ ವೃತ್ತಿ ಜೀವನ ಮುಗಿಸುವ ಹಂತದಲ್ಲಿ ಇದ್ದಾರೆ ಎಂದು ಬರೆಯಲಾಗಿತ್ತು. ಇದನ್ನು ನೋಡಿ ಆಕಾಶವೇ ತಲೆಯ ಮೇಲೆ ಬಿದ್ದಂತೆಯೇ ಭಾಸವಾಯಿತು. ಎಲ್ಲವೂ ಮುಗಿದೇ ಹೋಯ್ತು ಎಂದುಕೊಂಡೆ. ಆದರೆ ಹಾಗಾಗಲಿಲ್ಲ' ಎಂದಿದ್ದಾರೆ. 


ಇದೇ ಸಂದರ್ಶನಲ್ಲಿ ನಟಿ, ತಮ್ಮ ಸಿನಿಮಾ ಪ್ರಯಾಣವು ಹೇಗೆ ಹುಚ್ಚು ಹಿಡಿದಿದೆ ಎಂಬುದನ್ನು ಬಹಿರಂಗಪಡಿಸಿದರು. ರಣಬೀರ್​ ಕಪೂರ್​ ಜೊತೆಗಿನ ಆ ಘಟನೆ ಹುಚ್ಚುತನದ ಸವಾರಿಯಾಗಿತ್ತು.ಆ ಫೋಟೋ ವೈರಲ್​ ಆದ ಸಂದರ್ಭದಲ್ಲಿ ವಿಚ್ಛೇದನವಾಗಿತ್ತು. ಮಗು ನನ್ನ ಜೊತೆ ಇತ್ತು. ಆ ಸಂದರ್ಭದಲ್ಲಿ ಏನಾದರೂ ಬ್ಯಾನ್​ ಆಗಿಬಿಟ್ಟರೆ ಎನ್ನುವ ಭಯವಿತ್ತು. ಎಲ್ಲವೂ ನನ್ನನ್ನು ಬಾಧಿಸಿದವು. ಆದರೆ ನನ್ನ ಪ್ರೇಕ್ಷಕರು ನನ್ನೊಂದಿಗೆ ಸದಾ ಇರುವುದು ಖಚಿತವಾಗಿದೆ ಎಂದಿದ್ದಾರೆ. 

ನನಗೂ ದರ್ಶನ್​ ಅಂಥ ಗಂಡನೇ ಸಿಗ್ಬೇಕು ಎನ್ನೋ ಆಸೆ ತುಂಬಾ ಇತ್ತು: ನಟಿ ಅನಿಕಾ