ಸುಶಾಂತ್ ಸಿಂಗ್ ಸಾವಿನ ಸಂಬಂಧ ಬಾಲಿವುಡ್‌ ನೆಪೊಟಿಸಂನಲ್ಲಿ ಮಹೇಶ್ ಭಟ್, ಆಲಿಯಾ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ಸಂಬಂಧ ಬಾಲಿವುಡ್‌ ನೆಪೊಟಿಸಂನಲ್ಲಿ ಮಹೇಶ್ ಭಟ್, ಆಲಿಯಾ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.

Add Asianetnews Kannada as a Preferred SourcegooglePreferred

ಸಡಕ್ 2 ಸಿನಿಮಾ ಮೂಲಕ ಕಂ ಬ್ಯಾಕ್ ಮಾಡಿರುವ ಮಹೇಶ್ ಭಟ್ ಸಿನಿಮಾದ ರಿಲೀಸಿಂಗ್ ಡೇಟ್‌ನ್ನು ಆಗಸ್ಟ್‌ 6ರಂದು ಬಹಿರಂಗಪಡಿಸಿದ್ದಾರೆ. ಆಲಿಯಾ ಭಟ್ ಅಭಿನಯದ ಸಡಕ್ 2 ಸಿನಿಮಾ ಆಗಸ್ಟ್ 28ರಂದು ಡಿಸ್ನಿ ಮತ್ತು ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಆಗಲಿದೆ.

ಸುಶಾಂತ್ ನಿಂದ ದೂರವಾಗು ಎಂದು ರಿಯಾಗೆ ಮಹೇಶ್‌ ಭಟ್ ಹೇಳಿದ್ರಾ?

ಈ ಹಿನ್ನೆಲೆಯಲ್ಲಿ ಮಹೇಶ್ ಭಟ್ ಬರೆದ ಭಾವುಕ ಪತ್ರವನ್ನು ಮಗಳು ಪೂಜಾ ಭಟ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರೊಂದಿಗೆ ಸಿನಿಮಾ ಚಿತ್ರೀಕರಣ ಸಂದರ್ಭ ಕ್ಲಿಕ್ಕಿಸಿದ ಕೆಲವು ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.

View post on Instagram

ಇಂದು ನಾವು ನಮ್ಮ ಪ್ರಯಾಣದ ಕೊನೆಯ ಹಂತವನ್ನು ಪ್ರಾರಂಭಿಸುತ್ತಿದ್ದೇವೆ. ನಾನು ಅಶಕ್ತನಾಗಿರುತ್ತೇನೆ! ಯಾವುದೇ ಹೊರೆ, ತೂಕವಿಲ್ಲ. ಕಾಪಾಡಿಕೊಳ್ಳಲು ಯಾವುದೇ ಖ್ಯಾತಿ ಇಲ್ಲ. ಸಾಧಿಸಲು ಯಾವುದೇ ಮಿಷನ್ ಇಲ್ಲ. ಯಾರಿಗೂ ಏನನ್ನೂ ಸಾಬೀತುಪಡಿಸಬೇಕಾಗಿಲ್ಲ ಎಂದು ಮಹೇಶ್ ಭಟ್ ಬರೆದಿದ್ದಾರೆ.

ಆಲಿಯಾ ಭಟ್ 'ಸಡಕ್-2' ಪೋಸ್ಟರ್‌ ರಿಲೀಸ್‌; ಬಹಿಷ್ಕರಿಸುವಂತೆ ನೆಟ್ಟಿಗರಿಂದ ಆಕ್ರೋಶ!

ಸಿನಿಮಾ ಹಿಟ್ ಆದರೆ ಅದು ನಿಮಗೆಲ್ಲರಿಗೂ ಸೇರುತ್ತದೆ. ಒಂದು ವೇಳೆ ಸಿನಿಮಾ ಸೋತರೆ ಅದು ನನ್ನದು. ಇದು ಒಬ್ಬ ನಿರ್ದೇಶಕನ ಕರ್ತವ್ಯ ಮತ್ತು ಲಾಭವೂ. ನೀವು ನೀಡಿರುವ ಬೆಂಬಲ ಪ್ರೀತಿಗೆ ನನ್ನ ಧನ್ಯವಾದ. ನಿಮ್ಮಿಂದಾಗಿಯೇ ತಯಾರಾದ ಈ ಸಿನಿಮಾವನ್ನು ನಾನು ಬಹಳ ಪ್ರೀತಿಸುತ್ತೇನೆ. ಈಗ ಸ್ವತಂತ್ರ ಹಕ್ಕಿಯಂತೆ ಭಾಸವಾಗುತ್ತಿದೆ. ಮಹೇಶ್ ಹೊರಡುವಾ ಎಂದು ಕಾಡು ಕರೆಯುತ್ತಿದೆ ಎಂದು ಬರೆದಿದ್ದಾರೆ.

Scroll to load tweet…

ಮಹೇಶ್ ಭಟ್ ಅವರ 1991ರ ಸಡಕ್ ಸಿನಿಮಾದ ಮುಂದುವರಿದ ಭಾಗವೇ ಸಡಕ್ 2. ಇದರಲ್ಲಿ ಆಲಿಯಾ ಭಟ್, ಆದಿತ್ಯಾ ರಾಯ್ ಕಪೂರ್, ಸಂಜಯ್ ದತ್, ಪೂಜಾ ಭಟ್ ಕೂಡಾ ನಟಿಸಿದ್ದಾರೆ.

ಸುಶಾಂತ್‌ನ ಪ್ರೇಯಸಿಯನ್ನು ಲಪಟಾಯಿಸಿದ್ದರಾ ಮಹೇಶ್‌ ಭಟ್‌?

ಈ ಮೊದಲು ಸಡಕ್ ಸಿನಿಮಾವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತಾದರೂ ಕೊರೋನಾ ವೈರಸ್ ನಿಂದಾಗಿ ಡಿಜಿಟಲ್ ರೂಪದಲ್ಲಿ ರಿಲೀಸ್ ಮಾಡಲಾಗುತ್ತಿದೆ ಎಂದು ಮಹೇಶ್ ಭಟ್ ತಿಳಿಸಿದ್ದಾರೆ.