ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ ಭಟ್ ತಮ್ಮ ಮಗಳ ಚಿತ್ರ ನಿರ್ದೇಶನ ಮಾಡುವ ಮೂಲಕ ಮತ್ತೊಮ್ಮ ಬಿ-ಟೌನ್‌ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಜೂನ್‌ 29ರಂದು 'ಸಡಕ್-2' ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ನಟಿಯರ ಹೆಸರನ್ನು ಬಹಿರಂಗ ಮಾಡಿದ್ದಾರೆ. ಚಿತ್ರದ ಹೆಸರು ಕೇಳಿ ಸುಮ್ಮನಿದ್ದ ನೆಟ್ಟಿಗರು ನಟಿಯರು ಯಾರೆಂದು ತಿಳಿದ ನಂತರ ಸಿನಿಮಾವನ್ನು ಬಾಯ್ಕಾಟ್ ಮಾಡಲು ಮುಂದಾಗಿದ್ದಾರೆ.

ಹೌದು! ಮಹೇಶ್ ಭಟ್ ಕಮ್ ಬ್ಯಾಕ್ ಮಾಡುತ್ತಿರುವ ಈ ಚಿತ್ರದಲ್ಲಿ  ತಮ್ಮ ಇಬ್ಬರು ಹೆಣ್ಣು ಮಕ್ಕಳು - ಆಲಿಯಾ ಭಟ್ ಹಾಗೂ ಪೂಜಾ ಭಟ್‌ ನಾಯಕಿಯರು. 'ನೀವು ಅಂತ್ಯಕ್ಕೆ ಬಂದಾಗ, ಯಾವುದೇ END ಇಲ್ಲ ಎಂದು ನೀವು ಕಂಡುಕೊಳ್ಳುತ್ತೀರಿ' ಎಂದು ಬರೆದು ಪೋಸ್ಟರ್‌ ರಿವೀಲ್ ಮಾಡಿದ್ದಾರೆ.

ಆಲಿಯಾ ಭಟ್ ಮದುವೆ: ಮಹೇಶ್ ಭಟ್ ಒಪ್ಪಿಗೆಗೆ ಕಣ್ಣೀರಿಟ್ಟ ರಣಬೀರ್ ಕಪೂರ್

1991ರ ಸೂಪರ್ ಹಿಟ್ ಬಾಲಿವುಡ್‌ ರೋಮ್ಯಾಂಟಿಕ್ ಸಿನಿಮಾದ ಮುಂದಿನ ಭಾಗವಾಗಿ ಸಡಕ್-2 ತೆರೆ ಕಾಣಲಿದೆ. ಈ ಚಿತ್ರವನ್ನು  ಸಹೋದರ ಮುಕೇಶ್ ಭಟ್‌ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ.

ಇದು ಫ್ಯಾಮಿಲಿ ಪ್ಲಾನ್:

ಬಾಲಿವುಡ್‌ ಚಾರ್ಮ್‌ ಸುಶಾಂತ್ ಸಿಂಗ್ ಅಗಲಿ ದಿನಗಳೇ ಕಳೆದರು ಬಿ-ಟೌನ್‌ ಮಾಫಿಯಾ ಕಡಿಮೆಯಾಗಿಲ್ಲ ನೋಡಿ.  ಮಹೇಶ್‌ ಭಟ್ , ಮುಕೇಶ್ ಭಟ್ ಹಾಗೂ ಆಲಿಯಾ ಭಟ್‌ ಬಗ್ಗೆ ಸಾಕಷ್ಟು ಆಪಾದನೆಗಳು ಕೇಳಿ ಬಂದರೂ ತೆಲೆ ಕೆಡಿಸಿಕೊಳ್ಳದೆ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

 

'ನೀವೇ ಸಿನಿಮಾ ನಿರ್ಮಾಣ ಮಾಡಿ, ನಿಮ್ಮ ಸಹೋದರನೇ  ನಿರ್ದೇಶನ ಮಾಡುತ್ತಾರೆ ಅವರ ಮಕ್ಕಳು ಅಭಿನಯಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಗಾಡ್‌ ಫಾದರ್‌ ಇಲ್ಲದೇ ಎಂಟ್ರಿ ಕೊಡುವ ಸುಶಾಂತ್ ರೀತಿಯ ನಟರು ಏನು ಮಾಡಬೇಕು?' ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಕಾರಣ ಹೇಳದೆ ಸಿನಿಮಾ ನಿರಾಕರಿಸಿದ ಆಲಿಯಾ; ಸುಶಾಂತ್ ಕೊಟ್ಟ ಟಾಂಗ್ ಹೀಗಿತ್ತು!

ಭಟ್‌ ಸಹೋದರ ಮೇಲೆ ಆಕ್ರೋಶ:

ಹಿಂದಿ ಚಿತ್ರರಂಗಕ್ಕೆ ಮಹೇಶ್‌ ಭಟ್‌ ಮತ್ತು ಮುಕೇಶ್‌ ಭಟ್‌ ಅವರ ಕೊಡುಗೆ ಅಪಾರ ಎಂದು ತಿಳಿದಿದ್ದರೂ ಅಷ್ಟೇ ತಪ್ಪುಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಟ್ಟಿಟರ್‌ನಲ್ಲಿ ಕ್ಲಾಸ್‌ ತೆಗೆದುಕೊಂಡ ನೆಟ್ಟಿಗರ ಟ್ಟೀಟ್‌ಗಳು ವೈರಲ್ ಆಗುತ್ತಿದೆ.

 

'ಈ ವ್ಯಕ್ತಿ 26/11ನನ್ನು RSS ki Sazish ಎಂದು ಹೇಳಿದವನ ಮಗನೇ ಭಯೋತ್ಪಾದಕರಿಗೆ ಸಹಾಯ ಮಾಡಿದ, ಸುಶಾಂತ್ ಸಾವಿಗೆ ಖಿನ್ನತೆ ಕಾರಣ ಎಂದು ಆರೋಪ ಮಾಡಿದ,  ತನ್ನ ಮಗಳ ವಯಸ್ಸಿಗಿಂತ ಕಿರಿಯ ಹೆಣ್ಣುಮಗಳ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ, ಚಿತ್ರರಂಗದಲ್ಲಿ ಉಳಿಯಲು ಅದೆಷ್ಟು ಕರ್ಮಗಳನ್ನು ಮಾಡಬೇಕೋ ಅವೆಲ್ಲವೂ ಮಾಡಿದ್ದಾನೆ. ಈತ ಜೈಲಿಗೆ ಹೋಗದೆ ಇಲ್ಲಿಯೇ ಇರುವುದಕ್ಕೆ ಕಾರಣವೇನು? ಅಥವಾ ಇದರ ಹಿಂದೆಯೂ ಯಾರದೋ ಕೈವಾಡ ಇದ್ಯಾ?' ಎಂದು ನೆಟ್ಟಿಗನೊಬ್ಬ ಸತ್ಯ ತೆರೆದಿಟ್ಟಿದ್ದಾನೆ.