Asianet Suvarna News Asianet Suvarna News

ಹ್ಯಾಂಡ್‌ಸಮ್ ಹಂಕ್ ಮಹೇಶ್ ಬಾಬು ವಿಗ್ ರಹಸ್ಯ ಬಿಚ್ಚಿಟ್ಟ ಮೇಕಪ್ ಮ್ಯಾನ್

ತೆಲುಗು ಸ್ಟಾರ್ ಮಹೇಶ್ ಬಾಬು ವಿಗ್ ರಹಸ್ಯವನ್ನು ಪ್ರಸಿದ್ಧ ಮೇಕಪ್ ಮ್ಯಾನ್ ರಿವೀಲ್ ಮಾಡಿದ್ದಾರೆ. 

Mahesh Babu wig secret revealed by makeup man sgk
Author
First Published Nov 24, 2022, 5:52 PM IST

ಟಾಲಿವುಡ್ ಸ್ಟೈಲಿಶ್ ಸ್ಟಾರ್, ಹ್ಯಾಂಡ್ ಸಮ್ ಹಂಕ್ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ ಮಹೇಶ್ ಬಾಬು ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ತಂದೆಯನ್ನು ಕಳೆದು ಕೊಂಡು ಮಹೇಶ್ ಬಾಬು ದುಃಖದಲ್ಲಿದ್ದಾರೆ. ಒಂದೂವರೆ ತಿಂಗಳ ಅಂತರದಲ್ಲಿ ಮಹೇಶ್ ಬಾಬು ತಾಯಿ ಮತ್ತು ತಂದೆ ಇಬ್ಬರನ್ನೂ ಕಳೆದುಕೊಂಡರು. ಬ್ಯಾಕ್ ಟು ಬ್ಯಾಕ್ ಆಘಾತದಿಂದ ಮಹೇಶ್ ಬಾಬು ಕುಸಿದು ಹೋಗಿದ್ದಾರೆ. ಈ ನಡುವೆ ಮಹೇಶ್ ಬಾಬು ಅವರ ವಿಗ್ ವಿಚಾರ ಮತ್ತೆ ಸುದ್ದಿಯಾಗಿದೆ. ಮಹೇಶ್ ಬಾಬು ಅವರ ತಲೆಯಲ್ಲಿ ಕೂದಲಿಲ್ಲ ಹಾಗಾಗಿ ವಿಗ್ ಧರಿಸುತ್ತಾರೆ ಎನ್ನುವ ಚರ್ಚೆ ಆಗಾಗ ನಡೆಯುತ್ತಿರುತ್ತದೆ. ಅಲ್ಲದೇ ಕೂದಲು ಉದುರಿ ಹೋಗಿರುವ ಮಹೇಶ್ ಬಾಬು ಅವರ ಹಳೆಯ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವರೈಲ್ ಆಗುತ್ತಿರುತ್ತವೆ. 

ಸ್ಟೈಲಿಶ್ ಆಗಿ ಹೇರ್ ಸ್ಟೈಲ್ ಮಾಡಿಸಿ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ ಮಹೇಶ್ ಬಾಬು ವಿಗ್ ಧರಿಸುತ್ತಾರೆ ಎನ್ನುವುದು ಕೆಲವರ ವಾದ. ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರಿಗೂ ಕೂದಲು ಇರಲಿಲ್ಲ. ಅವರೂ ಕೂಡ ವಿಗ್ ಧರಿಸುತ್ತಿದ್ದರು. ತಂದೆಯಂತೆ ಮಗ ಕೂಡ ವಿಗ್ ಧರಿಸುತ್ತಾರೆ ಎನ್ನುವ ಸುದ್ದಿ ಆಗಾಗ ಕೇಳಿಬರುತ್ತಿರುತ್ತದೆ. ಇದೀಗ ಮಹೇಶ್ ಬಾಬು ಅವರ ವಿಗ್ ರಹಸ್ಯವನ್ನು ಮೇಕಪ್ ಮ್ಯಾನ್ ಚೆಬ್ರೋಲು ಮಾಧವ್ ರಾವ್ ಬಿಚ್ಚಿಟಿದ್ದಾರೆ. 

ಮೇಕಪ್ ಮ್ಯಾನ್ ಚೆಬ್ರೊಲು ಅನೇಕ ವರ್ಷಗಳಿಂದ ಸೂಪರ್ ಸ್ಟಾರ್ ಕೃಷ್ಣ ಅವರ ಜೊತೆ ಇದ್ದಾರೆ. ಕೃಷ್ಣ ಅವರು ಸಿನಿಮಾರಂಗಕ್ಕೆ ಬಂದಾಗಿನಿಂದಲೂ ಜೊತೆಯಲ್ಲೇ ಇದ್ದಾರೆ. ಕೃಷ್ಣ ಅವರ ಸಾಕಷ್ಟು ಸಿನಿಮಾಗಳಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಕೃಷ್ಣ ಅವರ ಬಗ್ಗೆ ಮಾತನಾಡಿದ ಚೆಬ್ರೊಲು ಕೃಷ್ಣ ಅವರಿಗೆ ಮೊದಲು ಉದ್ದವಾದ ಕೂದಲು ಇತ್ತು. ಜುಟ್ಟು ಬಿಟ್ಟುಕೊಂಡೆ ನಟಿಸುತ್ತಿದ್ದರು. ಬಳಿಕ ತಲೆ ಕೂದಲು ಉದುರಲು ಪ್ರಾರಂಭವಾಯಿತು. ಕೂದಲು ತುಂಬಾ ತೆಳ್ಳಗಾದಾಗ ವಿಧಿ ಇಲ್ಲದೇ ವಿಗ್ ಮೊರೆ ಹೋದರು' ಎಂದು ಹೇಳಿದರು. ಕೃಷ್ಣ ಅವರ ಬಗ್ಗೆ ಮಾತ್ರವಲ್ಲದೆ ಪುತ್ರ ಮಹೇಶ್ ಬಾಬು ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ. 

Krishna Death; ದುಃಖದಲ್ಲಿರುವ ಮಹೇಶ್ ಬಾಬುನ ತಬ್ಬಿ ಧೈರ್ಯ ತುಂಬಿದ ರಾಮ್, ಅಲ್ಲು, ಚಿರು ಮತ್ತು Jr.NTR

ಮಹೇಶ್ ಬಾಬು ಕೂಡ ವಿಗ್ ಧರಿಸುತ್ತಾರೆ ಎಂದು ಮೇಕಪ್ ಮ್ಯಾನ್ ಬಹರಂಗ ಪಡಿಸಿದ್ದಾರೆ. 'ಮಹೇಶ್ ಬಾಲನಟನಾಗಿದ್ದಾಗ ನಾನು ಆತನಿಗೆ ಮೇಕಪ್ ಮಾಡಿದ್ದೀನಿ. ನಂತರ ನನ್ನ ಸೋದರಳಿಯ ಪಟ್ಟಾಬಿ ಮೇಕಪ್ ಹಾಕಲು ಆರಂಭಿಸಿದ. ಮಹೇಶ್ ಆರಂಭದಲ್ಲಿ ವಿಗ್ ಧರಿಸುತ್ತಿರಲಿಲ್ಲ. ಆದರೆ ಕೂದಲು ತೀರ ಉದುರಿ ತೆಳ್ಳಗಾದ ಮೇಲೆ ವಿಗ್ ಧರಿಸಲು ಪ್ರಾರಂಭಿಸಿದರು. ಅನೇಕ ಸಿನಿಮಾಗಳಲ್ಲಿ ವಿಗ್ ಬಳಸಿದ್ದಾರೆ' ಎಂದು ಹೇಳಿದ್ದಾರೆ. ಮಹೇಶ್ ಬಾಬು ವಿಗ್ ಧರಿಸುತ್ತಾರೆ ಎನ್ನುವುದನ್ನು ಅಭಿಮಾನಿಗಳು ತಳ್ಳಿ ಹಾಕಿದ್ದಾರೆ. 

'ಬಾಂಡ್ ಆಫ್ ತೆಲುಗು ಸಿನಿಮಾ': ದಾಖಲೆಗಳ ಸರದಾರ ಕೃಷ್ಣ

ಮಹೇಶ್ ಬಾಬು ಹೇರ್ ಟ್ರಾನ್ಸ್‌ಪ್ಲೆಂಟ್ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಅವರ ಕೂದಲು ಒರಿಜಿನಲ್ ಕೂದಲ ಹಾಗೆ ಇದೆ ಎನ್ನುತ್ತಿದ್ದಾರೆ ಫ್ಯಾನ್ಸ್. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕೂದಲು ಇಲ್ಲದ ಮಹೇಶ್ ಬಾಬು ಪೋಟೋ ಫೇಕ್ ಎನ್ನುತ್ತಿದ್ದಾರೆ ಫ್ಯಾನ್ಸ್. ಆದರೆ ಈ ಬಗ್ಗೆ ಮಹೇಶ್ ಬಾಬು ಯಾವತ್ತು ಮಾತನಾಡಿಲ್ಲ. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತ್ರಿವಿಕ್ರಮ್ ನಿರ್ದೇಶನದ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ. ಈ ಸಿನಿಮಾ ಬಳಿಕ ಮಹೇಶ್ ಬಾಬು ಖ್ಯಾತ ನಿರ್ದೇಶಕ ರಾಜಮೌಳಿ ಅವರ ಜೊತೆ ಕೆಲಸ ಮಾಡಲಿದ್ದಾರೆ. ಈಗಾಗಲೇ ಮಹೇಶ್ ಮತ್ತು ರಾಜಮೌಳಿ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದು ಯಾವಾಗ ಸೆಟ್ಟೇರಲಿದೆ ಎಂದು ಕಾಯುತ್ತಿದ್ದಾರೆ. 


 

Follow Us:
Download App:
  • android
  • ios