ಮಗಳ ಕುಚಿಪುಡಿ ನೃತ್ಯದ ವಿಡಿಯೋ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ ಮಹೇಶ್ ಬಾಬು
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು(Mahesh Babu) ಪುತ್ರಿ ಸಿತಾರಾ ಕುಚಿಪುಡಿ(Kuchipudi dance) ಮಾಡಿರುವ ನೃತ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸಿತಾರಾ ಅದ್ಭುತ ನೃತ್ಯ ಮಹೇಶ್ ಅಭಿಮಾನಿಗಳ ಗಮನ ಸೆಳೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು(Mahesh Babu) ಪುತ್ರಿ ಸಿತಾರಾ ಕುಚಿಪುಡಿ(Kuchipudi dance)ನೃತ್ಯವನ್ನು ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸಿತಾರಾ ಅದ್ಭುತ ನೃತ್ಯ ಮಹೇಶ್ ಅಭಿಮಾನಿಗಳ ಗಮನ ಸೆಳೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಮ ನವಮಿ ದಿನ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಪುತ್ರಿ ಸಿತಾರಾ ರಾಮಾನ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋವನ್ನು ಮಹೇಶ್ ಬಾಬು ಶೇರ್ ಮಾಡಿ ರಾಮ ನವಮಿಯ ವಿಶ್ ಮಾಡಿದ್ದಾರೆ.
ಸಾಂಪ್ರದಾಯಿಕ ಉಡುಗೆತೊಟ್ಟು ಸಿತಾರಾ ರಾಮ ನವಮಿ ದಿನ ರಾಮನನ್ನು ಸ್ಮರಿಸುವ ಹಾಗೂ ಗುಣಗಾನ ಮಾಡುವ ಹಾಡಿಗೆ ಕುಚಿಪುರಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಹಂಚಿಕೊಳ್ಳುವ ಮೂಲಕ ಮಹೇಶ್ ಬಾಬು ಸಂತಸ ವ್ಯಕ್ತಪಡಿಸಿದ್ದಾರೆ. ಸಿತಾರಾಗೆ ಕುಚಿಪುಡಿ ಕಲಿಸಿಕೊಟ್ಟ ಗುರುಗಳನ್ನು ಹಾಡಿಹೊಗಳಿದ್ದಾರೆ. ಭಾರತೀಯ ಶಾಸ್ತ್ರೀಯ ನೃತ್ಯಗಳಲ್ಲಿ ಒಂದಾಗಿರುವ ಕುಚಿಪುಡಿ ನೃತ್ಯವನ್ನು ಸಿತಾರಾ ಅದ್ಭುತವಾಗಿ ಮಾಡಿದ್ದಾರೆ. ಈ ಬಗ್ಗೆ ಮಹೇಶ್ ಬಾಬು, 'ಸಿತಾರಾ ಅವರ ಮೊದಲ ಕುಚಿಪುಡಿ ನೃತ್ಯ. ಶ್ರೀ ರಾಮನವಮಿಯ ಶುಭ ದಿನದಂದು ಮಗಳ ನೃತ್ಯವನ್ನು ಪ್ರಸ್ತುತಪಡಿಸಲು ತುಂಬಾ ಸಂತೋಷವಾಗುತ್ತದೆ. ಈ ಶ್ಲೋಕ ಭಗವಾನ್ ರಾಮನ ಶ್ರೇಷ್ಠತೆಯನ್ನು ಹೇಳುತ್ತಿದೆ' ಎಂದಿದ್ದಾರೆ.
Sarkaru Vaari Paata; ಮಹೇಶ್ ಬಾಬು ಸಿನಿಮಾದಲ್ಲಿ ಮಗಳು ಸಿತಾರಾ ಮಸ್ತ್ ಸ್ಟೆಪ್
'ಸೀತಾ ಪಾಪಾ ನಿನ್ನ ಬಗ್ಗೆ ನನಗೆ ತುಂಬ ತುಂಬಾ ಹೆಮ್ಮೆ ಆಗುತ್ತಿದೆ. ನನ್ನ ಪುಟ್ಟ ನಿನಗೆ ಅಪಾರವಾದ ಪ್ರೀತಿ ಮತ್ತು ಗೌರವ. ಈ ಸುಂದರ ನೃತ್ಯ ಹೇಳಿಕೊಟ್ಟ ಗುರುಗಳಿಗೆ ಧನ್ಯವಾದಗಳು' ಎಂದಿದ್ದಾರೆ. ಅಂದಹಾಗೆ ಮಹೇಶ್ ಬಾಬು ಪುತ್ರಿ ಸಿತಾರಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ತನ್ನದೆ ಯೂಟ್ಯೂಬ್ ಚಾನೆಲ್ ಹೊಂದಿರುವ ಸಿತಾರಾ ಅನೇಕ ಕಲಾವಿದರನ್ನು ಸಂದರ್ಶನ ಮಾಡಿದ್ದಾರೆ. ಪುಟ್ಟ ಪೋರಿ ಸಿತಾರಾ ಕೆಲಸ ಎಲ್ಲರ ಗಮನ ಸೆಳೆದಿದ್ದಾರೆ. ಆಗಾಗ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಿಂಚು ಹರಿಸುವ ಸಿತಾರಾ ಅಪ್ಪನ ಸಿನಿಮಾ ಮೂಲಕ ದೊಡ್ಡ ಪರದೆಯಲ್ಲಿ ಮಿಂಚಲು ತಯಾರಾಗಿದ್ದಾರೆ.
Upendra: ಮಹೇಶ್ ಬಾಬು ಅಣ್ಣನಾಗ್ತಾರಾ ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್?
ಹೌದು, ಸಿತಾರಾ ಅಪ್ಪ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅಪ್ಪನ ಸಿನಿಮಾದಲ್ಲಿ ಮಿಂಚಿದ್ದಾರೆ. ಸಿತಾರಾ ಕಾಣಿಸಿಕೊಂಡಿರುವ ಹಾಡು ಈಗಾಗಲೇ ಬಿಡುಗಡೆಯಾಗಿದ್ದು ಸಿತಾರಾ ಮಸ್ತ್ ನೃತ್ಯ ವೈರಲ್ ಆಗಿದೆ. ಇದೀಗ ಕುಚಿಪುಡಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.