Sarkaru Vaari Paata; ಮಹೇಶ್ ಬಾಬು ಸಿನಿಮಾದಲ್ಲಿ ಮಗಳು ಸಿತಾರಾ ಮಸ್ತ್ ಸ್ಟೆಪ್
ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾದ ಎರಡನೇ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ. ಮಗಳು ಸಿತಾರಾ ಮಸ್ತ್ ಸ್ಟೆಪ್ ಹಾಕಿದ್ದು ಎಲ್ಲರ ಗಮನ ಸೆಳೆದಿದ್ದಾರೆ.
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು(Mahesh Babu) ಸದ್ಯ ಸರ್ಕಾರು ವಾರಿ ಪಾಟ(Sarkaru Vaari Paata) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮತ್ತು ಹಾಡಿನ ಮೂಲಕ ಸದ್ದು ಮಾಡುತ್ತಿರುವ ಸರ್ಕಾರು ವಾರಿ ಪಾಟ ಸಿನಿಮಾದಿಂದ ಮತ್ತೊಂದು ಹಾಡಿನ ಪ್ರೋಮೋ ಬಿಡುಗಡೆಯಾಗಿದೆ. ಚಿತ್ರದಿಂದ ಬಂದ ಎರಡನೇ ಹಾಡಿನಲ್ಲಿ ಮಹೇಶ್ ಬಾಬು ಪುತ್ರಿ ಸಿತಾರಾ(Sitara) ಎಲ್ಲರ ಗಮನ ಸೆಳೆದಿದ್ದಾರೆ.
ಸರ್ಕಾರು ವಾರಿ ಪಾಟ ಸಿನಿಮಾದಿಂದ ಬಿಡುಗಡೆಯಾದ ಮೊದಲ ಹಾಡಿನಲ್ಲಿ ಮಹೇಶ್ ಬಾಬು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ಸುರೇಶ್(Keerthy Suresh) ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಕೀರ್ತಿ, ಮಹೇಶ್ ಬಾಬು ಜೊತೆ ತೆರೆಹಂಚಿಕೊಂಡಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಹಾಡು ಅಭಿಮಾನಿಗಳ ಹೃದಯ ಗೆದ್ದಿತ್ತು. ಇದೀಗ ಬಂದ ಎರಡನೇ ಹಾಡಿನಲ್ಲಿ ಮಹೇಶ್ ಬಾಬು ಪುತ್ರಿ ಸಿತಾರಾ ಹೈಲೆಟ್ ಆಗಿದ್ದಾರೆ. ಪೆನ್ನಿ ಎನ್ನುವ ಹಾಡಿನ ಪ್ರೋಮೋ ಸದ್ಯ ಬಿಡುಗಡೆಯಾಗಿದ್ದು ಸಿತಾರಾ ಮಸ್ತ್ ಸ್ಟೆಪ್ ಹಾಕಿದ್ದಾರೆ.
ಮಹೇಶ್ ಬಾಬು ಮೊದಲ ಬಾರಿಗೆ ತಂದೆಯ ಜೊತೆ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ರ್ಯಾಪ್ ಶೈಲಿಯಲ್ಲಿರುವ ಹಾಡು ಇದಾಗಿದ್ದು, ಸಿತಾರಾ ಜಬರ್ದಸ್ತ್ ಡಾನ್ಸ್ ಮಾಡಿದ್ದಾರೆ. ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಸಿತಾರಾ ಅಭಿಮಾನಿಗಳ ಮನಗೆದ್ದಿದ್ದಾರೆ. ಹಾಡಿನ ಪ್ರೋಮೋದಲ್ಲಿ ಮಹೇಶ್ ಬಾಬು ಬೈಕ್ ಏರಿ ಬಂದಿದ್ದಾರೆ. ಸದ್ಯ ಹಾಡಿನ ಚಿಕ್ಕ ವಿಡಿಯೋ ಬಿಡುಗಡೆಯಾಗಿದ್ದು ಸಂಪೂರ್ಣ ಹಾಡು ಮಾರ್ಚ್ 20ರಂದು ಬಿಡುಗಡೆಯಾಗುತ್ತಿದೆ. ಈ ಹಾಡನ್ನು ನೋಡಲು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಚಿತ್ರಕ್ಕೆ ಎಸ್ ಥಮನ್ ಧ್ವನಿ ನೀಡಿದ್ದಾರೆ. ಮೊದಲ ಹಾಡು ಕಲಾವತಿ.. ಸೂಪರ್ ಹಿಟ್ ಆಗಿದ್ದು, ದಾಖಲೆಯ ವೀಕ್ಷಣೆ ಕಂಡಿದೆ. ಈಗಾಗಲೇ 90 ಮಿಲಿಯನ್ ವೀಕ್ಷಣೆ ಕಂಡಿದ್ದು, ಸದ್ಯದಲ್ಲೇ 100 ಮಿಲಿಯನ್ ಗಡಿದಾಟಲಿದೆ. ಆಗಲೇ ಎರಡನೇ ಹಾಡು ಬಿಡುಗಡೆಯಾಗಿದ್ದು, ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಸಿನಿಮಾ ಮೇ 12ರಂದು ತೆರೆಗೆ ಬರುತ್ತಿದೆ. ಮಹೇಶ್ ಬಾಬು ಕೊನೆಯದಾಗಿ ಸರಿಲೇರು ನೀಕೆವ್ವರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಸರಿಲೇರು ನೀಕೆವ್ವರು ಮೂಲಕ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ.
ಇನ್ನು ನಟ ಮಹೇಶ್ ಬಾಬು ಪುತ್ರಿ ಸಿತಾರಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ತನ್ನದೆ ಆದ ಯೂಟ್ಯೂಬ್ ಚಾನಲ್ ಹೊಂದಿರುವ ಸಿತಾರಾ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಾರೆ. ಪುಟ್ಟ ಪೋರಿ ಸಿತಾರಾ ಕೆಲಸ ಎಲ್ಲರ ಗಮನ ಸೆಳೆದಿದ್ದಾರೆ. ಆಗಾಗ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಿಂಚು ಹರಿಸುವ ಸಿತಾರಾ ಇದೀಗ ಅಪ್ಪನ ಸಿನಿಮಾ ಮೂಲಕ ದೊಡ್ಡ ಪರದೆಯಲ್ಲಿ ಮಿಂಚಲು ತಯಾರಾಗಿದ್ದಾರೆ.
ಇನ್ನು ನಟಿ ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೋಲು ಕಂಡಿರುವ ಕೀರ್ತಿ ಸುರೇಶ್ ದೊಡ್ಡ ಮಟ್ಟದ ಹಿಟ್ ಗೆ ಎದುರು ನೋಡುತ್ತಿದ್ದಾರೆ. ಕೀರ್ತಿ ಕೊನೆಯದಾಗಿ ಗುಡ್ ಲಕ್ ಸಖಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಮಹೇಶ್ ಬಾಬು ಸಿನಿಮಾ ಜೊತೆಗೆ ಭೋಲ ಶಂಕರ್, ವಾಶಿ, ದಸರ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.