Asianet Suvarna News Asianet Suvarna News

ತಂದೆ-ತಾಯಿ ಕಳೆದುಕೊಂಡ ನೋವಿನಲ್ಲೇ ಮತ್ತೆ ಕೆಲಸಕ್ಕೆ ಮರಳಿದ ಮಹೇಶ್ ಬಾಬು; ಹೊಸ ಲುಕ್ ವೈರಲ್

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಇತ್ತೀಚಿಗಷ್ಟೆ ತನ್ನ ತಾಯಿ ಮತ್ತು ತಂದೆ ಇಬ್ಬರನ್ನೂ ಕಳೆದುಕೊಂಡರು. ನೋವಿನ ನಡುವೆಯೂ ಮಹೇಶ್ ಬಾಬು ಮತ್ತೆ ಕೆಲಸಕ್ಕೆ ಮರಳಿದ್ದಾರೆ. 

Mahesh Babu returns back to work as he drops new photo sgk
Author
First Published Dec 4, 2022, 11:07 AM IST

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಇತ್ತೀಚಿಗಷ್ಟೆ ತನ್ನ ತಾಯಿ ಮತ್ತು ತಂದೆ ಇಬ್ಬರನ್ನೂ ಕಳೆದುಕೊಂಡರು. ಒಂದೂವರೆ ತಿಂಗಳ ಅಂತರದಲ್ಲಿ ಮಹೇಶ್ ಬಾಬು ತಾಯಿ ಹಾಗೂ ತಂದೆ ಇಬ್ಬರೂ ಸಹ ಇಹಲೋಕ ತ್ಯಜಿಸಿದರು. ಇಬ್ಬರನ್ನೂ ಕಳೆದುಕೊಂಡ ನೋವಿನಲ್ಲಿ ಮತ್ತೆ ಕಲಸಕ್ಕೆ ಮರಳಿದ್ದಾರೆ. ಹೊಸ ಪೋಸ್ಟರ್ ಶೇರ್ ಮಾಡುವ ಮೂಲಕ ಮಹೇಶ್ ಬಾಬು ಮತ್ತೆ ಶೂಟಿಂಗ್‌ಗೆ ಮರಳಿರುವ ಬಗ್ಗೆ ಬಹಿರಂಗ ಪಡಿಸಿದರು. ಡೆಸೆಂಬರ್ 3ರಿಂದ ಮಹೇಶ್ ಬಾಬು ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಸೂಪರ್‌ಸ್ಟಾರ್ ಮೌಂಟೇನ್ ಡ್ಯೂ ಜಾಕೆಟ್ ಧರಿಸಿ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಈ ಲುಕ್ ನೋಡಿದರೆ ಯಾವುದೋ ಜಾಹೀರಾತಿನ ಚಿತ್ರೀಕರಣ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. 

ಮಹೇಶ್ ಬಾಬು ಹೊಸ ಫೋಟೋ ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ಲೈಕ್ಸ್ ಒತ್ತಿ ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಫ್ಯಾನ್ಸ್ ಮಾತ್ರವಲ್ಲದೇ ಅನೇಕ ಸಿನಿ ಗಣ್ಯರು ಸಹ ಮಹೇಶ್ ಬಾಬು ಹೊಸ ಲುಕ್‌ಗೆ ಫಿದಾ ಆಗಿದ್ದಾರೆ. ಪತ್ನಿ ನಮ್ರತಾ ಶಿರೋಡ್ಕರ್ ಕೂಡ ಪತಿಯ ಸ್ಟೈಲಿಶ್ ಲುಕ್‌ಗೆ ಫಿದಾ ಆಗಿದ್ದಾರೆ. ಬೆಂಕಿ ಇಮೋಜಿ ಹಾಕಿದ್ದಾರೆ. ಇನ್ನು ನಮತ್ರಾ ಶಿರೋಡ್ಕರ್ ಸಹೋದರಿ ಶಿಲ್ಪಾ ಕೂಡ ಕಾಮೆಂಟ್ ಮಾಡಿ ಓ ಮೈ ಗಾಡ್ ನ ಮಹೇಶ್...ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

Mahesh Babu: ತಂದೆ ಸೂಪರ್ ಸ್ಟಾರ್ ಕೃಷ್ಣ ಬಗ್ಗೆ ಭಾವುಕ ಸಾಲು ಹಂಚಿಕೊಂಡ ನಟ ಮಹೇಶ್ ಬಾಬು

ಸಿನಿಮಾದ ಬಗ್ಗೆ ಹೇಳುವುದಾದರೆ  ಮಹೇಶ್ ಬಾಬು ಈ ವರ್ಷದ ಮೇ ತಿಂಗಳಲ್ಲಿ ಸರ್ಕಾರಿ ವಾರು ಪಾಟ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿಲ್ಲ, ಆದರೆ ಮಹೇಶ್ ಬಾಬು ಅಭಿಮಾನಿಗಳಿಗೆ ಹಬ್ಬವಾಗಿತ್ತು. ಈ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ  ಕೀರ್ತಿ ಸುರೇಶ್ ಮತ್ತು ಮಹೇಶ್ ಬಾಬು ಒಟ್ಟಿಗೆ ಕಾಣಿಸಿಕೊಂಡಿದ್ದರು. ಸದ್ಯ ಮಹೇಶ್ ಬಾಬು ತ್ರಿವಿಕ್ರಮ್ ಅವರ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಬಾಬುಗೆ ಜೋಡಿಯಾಗಿ ಪೂಜೆ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಸಿನಿಮಾಗೆ SSMB28 ಎಂದು ಕರೆಯಲಾಗುತ್ತಿದೆ. ಈಗಾಗಲೇ ಪೂಜಾ ಹೆಗ್ಡೆ ಮಹೇಶ್ ಬಾಬು ಜೊತೆ ತೆರೆಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಮಹೇಶ್ ಜೊತೆ ನಟಿಸುತ್ತಿದ್ದಾರೆ.

Mahesh Babu: ಪ್ರಿನ್ಸ್ ಮಹೇಶ್ ಬಾಬು ಮನೆಯಲ್ಲಿ ಆಸ್ತಿ ಲಡಾಯಿ: ನರೇಶ್‌ಗೂ ಬರುತ್ತಾ ಪಾಲು?

ಈ ಸಿನಿಮಾ ಬಳಿಕ ಮಹೇಶ್ ಬಾಬು ಬಹುನಿರೀಕ್ಷೆಯ ರಾಜಮೌಳಿ ಜೊತೆ ಸಿನಿಮಾ ಮಾಡಲಿದ್ದಾರೆ. ಈಗಾಗಲೇ ಇಬ್ಬರ ಸಿನಿಮಾದ ಬಗ್ಗೆ ಸುದ್ದಿಗಳು ವೈರಲ್ ಆಗಿದ್ದು ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ಅವರನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದ್ದು ರಾಜಮೌಳಿ ಆರ್ ಆರ್ ಆರ್ ಸಿನಿಮಾ ಬಳಿಕ ಮತ್ತೊಂದು ಸೂಪರ್ ಹಿಟ್ ಸಿನಿಮಾ ನೀಡಲು ಸಜ್ಜಾಗಿದ್ದಾರೆ.  

Follow Us:
Download App:
  • android
  • ios