ತೆಲುಗಿನ ಡಾನ್ಸ್ ರಿಯಾಲಿಟಿ ಶೋಗೆ ತೆಲುಗಿನ ಸ್ಟಾರ್ ನಟ, ಸೂಪರ್ ಸ್ಟಾರ್ ಮಹೇಶ್ ಬಾಬು ಎಂಟ್ರಿ ಕೊಟ್ಟಿದ್ದಾರೆ. ಟಾಲಿವುಡ್ ಪ್ರಿನ್ಸ್ ಒಬ್ಬರೆ ಬಂದಿಲ್ಲ ಜೊತೆಗೆ ಪುತ್ರಿ ಸಿತಾರಾ ಜೊತೆ ಶೋಗೆ ಹಾಜರಾಗಿದ್ದಾರೆ. 

ಖ್ಯಾತ ನಿರೂಪಕ ಅಕುಲ್ ಬಾಲಾಜಿ ಸದ್ಯ ತೆಲುಗು ರಿಯಾಲಾಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಅನೇಕ ಕಿರುತೆರೆ ಸ್ಟಾರ್ ಬೇರೆ ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ನಟ-ನಟಿಯರು ತಮಿಳು ಮತ್ತು ತೆಲುಗು ಕಿರುತೆರೆಯ ಮನೆಮಾತಾಗಿದ್ದಾರೆ. ಅದರಲ್ಲಿ ಅಕುಲ್ ಕೂಡ ಹೊರತಾಗಿಲ್ಲ. ಧಾರಾವಾಹಿ ಜೊತೆಗೆ ಅಕುಲ್ ಪರಭಾಷೆಯಲ್ಲಿ ನಿರೂಪಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅಕುಲ್ ಸದ್ಯ ತೆಲುಗಿನಲ್ಲಿ ಡಾನ್ಸ್ ಇಂಡಿಯಾ ಡಾನ್ಸ್ ತೆಲುಗು ಶೋನ ನಡೆಸಿಕೊಡುತ್ತಿದ್ದಾರೆ. ಅಂದಹಾಗೆ ಈ ಶೋ ಈಗಾಗಲೇ ಪ್ರಾರಂಭವಾಗಿದೆ. ವಿಶೇಷ ಎಂದರೆ ಈ ಶೋಗೆ ತೆಲುಗಿನ ಸ್ಟಾರ್ ನಟ, ಸೂಪರ್ ಸ್ಟಾರ್ ಮಹೇಶ್ ಬಾಬು ಎಂಟ್ರಿ ಕೊಟ್ಟಿದ್ದಾರೆ. ಟಾಲಿವುಡ್ ಪ್ರಿನ್ಸ್ ಒಬ್ಬರೆ ಬಂದಿಲ್ಲ ಜೊತೆಗೆ ಪುತ್ರಿ ಸಿತಾರಾ ಜೊತೆ ಶೋಗೆ ಹಾಜರಾಗಿದ್ದಾರೆ. 

ಅಂದಹಾಗೆ ಮಹೇಶ್ ಬಾಬು ಮತ್ತು ಸಿತಾರಾ ಇಬ್ಬರು ವಿಶೇಷ ಅತಿಥಿಯಾಗಿ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಜೀ ವಾಹಿನಿ ಪ್ರೋಮೋ ರಿಲೀಸ್ ಮಾಡಿದ್ದು ಮಹೇಶ್ ಬಾಬು ಎಂಟ್ರಿಯ ವಿಡಿಯೋ ವೈರಲ್ ಆಗಿದೆ. ಟಾಲಿವುಡ್ ಪ್ರಿನ್ಸ್ ಪುತ್ರಿ ಸಿತಾರಾ ಕೈ ಹಿಡಿದು ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಶೋಗೆ ಎಂಟ್ರಿ ಕೊಟ್ಟಿದ್ದಾರೆ. ತಂದೆ ಮಗಳ ಎಂಟ್ರಿ ಶೋನಲ್ಲಿ ಇದ್ದವರು ಎಲ್ಲರೂ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ನಿರೂಪಕ ಅಕುಲ್ ಬಾಲಾಜಿ ಇಬ್ಬರನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. 

ಅಂದಹಾಗೆ ಮಹೇಶ್ ಪುತ್ರಿ ಸಿತಾರಾ ಡಾನ್ಸರ್. ಈಗಾಗಲೇ ಮಹೇಶ್ ಬಾಬು ಜೊತೆ ಒಂದು ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತು ಸಂತಸ ಹೆಚ್ಚಾಗಿದೆ. ಮಹೇಶ್ ಬಾಬು ಸಿತಾರಾ ಡಾನ್ಸರ್, ಸಿಂಗರ್ ಕೂಡ ಹೌದು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಸಿತಾರಾ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಂದಹಾಗೆ ಮಹೇಶ್ ಬಾಬು ಅವರಿಗೂ ಮಗಳು ಓದಿನ ಜೊತೆಗೆ ಸಿನಿಮಾ, ಡಾನ್ಸ್ ಗಳಲ್ಲಿಯೂ ತೊಡಿಕೊಳ್ಳಲಿ ಎಂಬುದು ಅವರ ಆಸೆ. ಅಂದಹಾಗೆ ಅಪ್ಪ-ಮಗಳನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ಸೌತ್ ಸ್ಟಾರ್ ಮಹೇಶ್ ಬಾಬು ಈ ಬಾಲಿವುಡ್ ನಟಿಯನ್ನು ಮದುವೆಯಾಗಲು ಇಟ್ಟ ಷರತ್ತಿದು!

ಈ ಬಗ್ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಅಪ್ಪ-ಮಗಳು ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದನ್ನು ನೋಡಲು ಕಾತರರಾಗಿದ್ದೀನಿ ಎಂದು ಒಬ್ಬ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ತನ್ನ ಮಗಳ ಮೇಲಿನ ಪ್ರೀತಿ ಮಹೇಶ್ ಬಾಬು ಕಣ್ಣಲ್ಲಿ ಕಾಣುತ್ತಿದೆ ಎಂದು ಹೇಳಿದ್ದಾರೆ. ಸಿತಾರಾ ಅಧ್ಭುತ ಡಾನ್ಸರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಪ್ರೋಮೋ ರಿಲೀಸ್ ಆಗಿದೆ. ಸಂಪೂರ್ಣ ಶೋಗಾಗಿ ಅಭಿಮಾನಿಗಳಲ್ಲಿ ಹಾಗೂ ಕಿರುತೆರೆ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

Scroll to load tweet…

ಪ್ರಿನ್ಸ್ ಮಹೇಶ್‌ ಬಾಬುಗೆ ತೆಲುಗು ಓದೋಕೆ ಬರೆಯೋಕೆ ಬರೋಲ್ಲ, ಡೈಲಾಗ್‌ನಲ್ಲಿ ಕಿಂಗ್..!

9 ಕೋಟಿ ರೂ ಪಡೆದ್ರಾ ಮಹೇಶ್ ಬಾಬು?

ಅಂದಹಾಗೆ ಮಹೇಶ್ ಬಾಬು ಕಿರುತೆರೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲು ಭರ್ಜರಿ ಮೊತ್ತ ಪಡೆದಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಮಹೇಶ್ ಬಾಬು 9 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೇ ಮಹೇಶ್ ಬಾಬು ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ತ್ರಿವಿಕ್ರಮ್ ಜೊತೆ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಅತಾಡು, ಖಲೇಜಾ ಸಿನಿಮಾ ಬಳಿಕ ಮಹೇಶ್ ಬಾಬು ಮತ್ತೆ ತ್ರಿವಿಕ್ರಮ್ ಜೊತೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಎಸ್ ಥಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮಹೇಶ್ ಬಾಬು ಕೊನೆಯದಾಗಿ ಸರ್ಕಾರಿ ವಾರಿ ಪಾಠ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.