ನೋಡನೋಡುತ್ತಿದ್ದಂತೆಯೇ ಕರೀನಾ ಕೈಯಲ್ಲಿದ್ದ ವಸ್ತು ಮಾಯ: ಬೆಚ್ಚಿಬಿದ್ದ ಸೈಫ್ ದಂಪತಿ!
ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಜೊತೆಯಾಗಿದ್ದಾಗ ಅವರ ಕೈಗೆ ಇಸ್ಪಿಟ್ ಎಲೆ ಕೊಟ್ಟು ಎಲ್ಲವನ್ನೂ ಜಾದೂ ಮೂಲಕ ಕಾಣೆಮಾಡಿದ್ದಾನೆ ಜಾದೂಗಾರ. ಆಗಿದ್ದೇನು?

ಮಾಯಾ ಜಾದೂಲೋಕ ಎನ್ನುವುದೇ ವಿಚಿತ್ರ. ಇದ್ದ ವಸ್ತುಗಳು ದಿಢೀರ್ ಕಣ್ಣೆದುರೇ ಮಾಯವಾಗುವುದು ಯಾರಿಗೂ ನಂಬಲು ಅಸಾಧ್ಯವೇ. ಜಾದೂಗಾರಿಕೆ ಕಲೆಯೇ ವಿಶೇಷತೆಯುಳ್ಳದ್ದು. ಇದಾಗಲೇ ಅಸಂಖ್ಯ ಜಾದೂಗಾರರು ತಮ್ಮ ಜಾದೂ ಕೌಶಲದಿಂದ ಘಟಾನುಘಟಿಗಳನ್ನೂ ಬೆಚ್ಚಿಬೀಳಿಸಿದ್ದು ಇದೆ. ಈಗ ಅಂಥದ್ದೇ ಒಂದು ಜಾದೂವನ್ನು ಎದುರಿಸಿದವರು ಬಾಲಿವುಡ್ನ ತಾರಾ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಂಪತಿ. ಬಾಲಿವುಡ್ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಜೋಡಿ. ಇವರಿಬ್ಬರೂ ಅದರಲ್ಲಿಯೂ ಕರೀನಾ ಕಪೂರ್ ಅದೆಷ್ಟೋ ಫ್ಯಾನ್ಸ್ಗಳನ್ನು ಮೋಡಿ ಮಾಡಿದ್ದಾರೆ. ಇವರ ಜಾದೂ ನೋಟಕ್ಕೆ ಬೆಕ್ಕಸಬೆರಗಾದವರು ಹಲವರು. ಇದೀಗ ಖುದ್ದು ಅವರೇ ಜಾದೂಗಾರನ ಮಾಯಾಲೋಕದ ಮೋಡಿಗೆ ಒಳಗಾದರು.
ಪಟೌಡಿ ಪ್ಯಾಲೇಸ್ನಲ್ಲಿ ಸೈಫ್ ಅಲಿ, ಕರೀನಾ ದಂಪತಿ ತಮ್ಮ ಮಕ್ಕಳೊಂದಿಗೆ ಇರುವುದನ್ನು ನೋಡಬಹುದು. ಈ ಸಮಯದಲ್ಲಿ ಜಾದೂಗಾರನೊಬ್ಬ ಅಲ್ಲಿಗೆ ಬಂದಿದ್ದಾನೆ. ಜಾದೂಗಾರರು ಹೆಚ್ಚಾಗಿ ಇಸ್ಪಿಟ್ ಎಲೆಗಳ ಜೊತೆ ತಮ್ಮ ಕೈಚಳಕ ತೋರಿಸುವುದು ಮಾಮೂಲು. ಇದು ಜಾದೂಗಾರರ ಬೇಸಿಕ್ ಆಟ. ಆದರೆ ಇದರಲ್ಲಿಯೇ ಅವರು ಮೋಡಿ ಮಾಡುವುದು ಇದೆ. ಅದೇ ರೀತಿಯ ಕೈಚಳಕವನ್ನು ಈ ಜಾದೂರಾಗ ನಟ ದಂಪತಿಗೆ ತೋರಿಸಿದ್ದಾರೆ. ಮೊದಲಿಗೆ ಕರೀನಾ ಅವರ ಕೈಮೇಲೆ ಸೈಫ್ ಕೈಯನ್ನು ಇಟ್ಟಿದ್ದಾನೆ. ಕರೀನಾ ಕೈಯಲ್ಲಿ ಒಂದಿಷ್ಟು ಇಸ್ಪಿಟ್ ಎಲೆಗಳನ್ನು ಜಾದೂಗಾರ ಇಟ್ಟಿದ್ದಾನೆ. ನಂತರ ದಂಪತಿ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಾಗಲೇ ಜಾದೂಗಾರ ಸ್ವಲ್ಪವೂ ಕೈಯನ್ನು ಅಲ್ಲಾಡಿಸದೇ ಕರೀನಾ ಅವರ ಕೈಯಲ್ಲಿದ್ದ ಎರಡು ಇಸ್ಪಿಟ್ ಎಲೆಗಳನ್ನು ತೆಗೆದುಕೊಂಡಿದ್ದಾನೆ. ನಂತರ ಉಳಿದ ಎಲೆಗಳನ್ನು ಪಾರದರ್ಶಕ ಮಾಡುವೆ ಎಂದಿದ್ದಾನೆ.
ನಾಲ್ಕು ಮಕ್ಕಳ ಜೊತೆ ಸೈಫ್ ಅಲಿ ಫೋಟೋ ಶೇರ್ ಮಾಡಿದ್ರೆ ಹೀಗೆಲ್ಲಾ ಕಮೆಂಟ್ ಹಾಕೋದಾ?
ಇದು ಸಾಧ್ಯವೇ ಇಲ್ಲ ಎಂದಿದ್ದಾರೆ ಕರೀನಾ. ನಂತರ ಕಣ್ಣುಮುಚ್ಚುವಂತೆ ಹೇಳಿದ ಜಾದೂಗಾರ ಕರೀನಾ ಅವರ ಕೈಯಲ್ಲಿದ್ದ ಉಳಿದ ಇಸ್ಪಿಟ್ ಎಲೆಗಳನ್ನು ಪಾರದರ್ಶಕ ಮಾಡಿ ಎಲ್ಲರನ್ನೂ ಚಕಿತಗೊಳಿಸಿದ್ದಾನೆ. ಇದನ್ನು ನೋಡಿ ಕರೀನಾ, ಸೈಫ್ ದಂಪತಿ ಜೊತೆ ಅಲ್ಲಿದ್ದವರೂ ಬೆಚ್ಚಿಬಿದ್ದಿದ್ದಾರೆ. ಜಾದೂಗಾರನ ಕೌಶಲವನ್ನು ಕೊಂಡಾಡಿದ್ದಾರೆ.
ಇನ್ನು ಕರೀನಾ ಮತ್ತು ಸೈಫ್ ಕುರಿತು ಹೇಳುವುದಾದರೆ, ಇದು ಸೈಫ್ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.
Viral Photo: ಸ್ಮಾಲ್, ಮೀಡಿಯಮ್ ಮತ್ತು ಲಾರ್ಜ್ ಸೈಜ್ನಲ್ಲಿ ಸೈಫ್ ಅಲಿ ಖಾನ್ ಲಭ್ಯ!