ಸೈಫ್​ ಅಲಿ ಖಾನ್​ ಅವರ ಮೂವರು ಪುತ್ರರಾದ ಇಬ್ರಾಹಿಂ ಅಲಿ ಖಾನ್​, ತೈಮೂರು ಅಲಿ ಖಾನ್​ ಹಾಗೂ ಜೆಹ್​  ಅಲಿ ಖಾನ್​ ಅವರ ಫೋಟೋ ವೈರಲ್​ ಆದ್ರೆ ಕಮೆಂಟಿಗರು ಹೇಳಿದ್ದೇನು?  

ಬಾಲಿವುಡ್​ನ ಕ್ಯೂಟ್​ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ (Kareena Kapoor) ಅವರ ಜೋಡಿ. ಆದರೆ ಈ ಜೋಡಿ ಸಕತ್​ ಟ್ರೋಲ್​ಗೆ ಒಳಗಾಗುತ್ತಲೂ ಇರುತ್ತದೆ. ಏಕೆಂದರೆ ಸೈಫ್​ ಅಲಿ ಅವರು ತಮ್ಮ ಮೊದಲ ಪತ್ನಿ ಅಮೃತಾ ಸಿಂಗ್​ ಜೊತೆ ಮದುವೆಯಾದಾಗ ಕರೀನಾ ಕಪೂರ್​ ಇನ್ನೂ ಚಿಕ್ಕ ಬಾಲೆ. ಸೈಫ್​ ಅಲಿ ಮದುವೆಗೆ ಬಂದಿದ್ದ ಕರೀನಾ ಅವರನ್ನು ಸೈಫ್​ ಮಗಳೇ ಎಂದು ಕರೆದಿದ್ದರು. ಆದರೆ ಮುಂದೆ ಅವರೇ ಆಕೆಯನ್ನು ಮದುವೆಯಾದುದಕ್ಕೆ ಸಕತ್​ ಟ್ರೋಲ್​ಗೆ ಒಳಗಾಗಿದ್ದಾರೆ. ಅದೇನೇ ಇದ್ದರೂ ಈ ಜೋಡಿ ಈಗ ಸುಖವಾಗಿ ಸಂಸಾರ ನಡೆಸುತ್ತಿದೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್​ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್​ ಸುದ್ದಿ ಮಾಡಿದವರು. ಸೈಫ್​ ಅಲಿ ಖಾನ್​ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು. 

ಅಮೃತಾ ಸಿಂಗ್​ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್‌ ಅವರಿಗೆ 32 ವರ್ಷ ವಯಸ್ಸಾಗಿತ್ತು! ಈ ಜೋಡಿ 13 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆಯಿತು. 2004ರಲ್ಲಿ ಸೈಫ್‌ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಇದೀಗ 53 ವರ್ಷದ ಸೈಫ್​ ಅಲಿ ಖಾನ್​ ಅವರಿಗೆ ಅಮೃತಾ ಸಿಂಗ್​ ಮತ್ತು ಕರೀನಾ ಕಪೂರ್​ ಈ ಇಬ್ಬರು ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್​ (Sara Ali Khan), ಇಬ್ರಾಹಿಂ ಅಲಿ ಖಾನ್​, ತೈಮೂರು ಅಲಿ ಖಾನ್​ ಹಾಗೂ ಜೆಹ್​ ಅಲಿ ಖಾನ್​. 

ನಾಲ್ಕು ಮಕ್ಕಳ ಜೊತೆ ಸೈಫ್​ ಅಲಿ ಫೋಟೋ ಶೇರ್​ ಮಾಡಿದ್ರೆ ಹೀಗೆಲ್ಲಾ ಕಮೆಂಟ್​ ಹಾಕೋದಾ?

ಇಬ್ರಾಹಿಂ ಅಲಿ ಖಾನ್​, ತೈಮೂರು ಅಲಿ ಖಾನ್​ ಹಾಗೂ ಜೆಹ್​ ಅಲಿ ಖಾನ್​ ಫೋಟೋ ವೈರಲ್​ ಆಗಿದೆ. ಇಬ್ರಾಹಿಂ ಅಲಿ ಖಾನ್​ ಅಮೃತಾ ಸಿಂಗ್ ಅವರ ಪುತ್ರ. ಈತನಿಗೆ ಈಗ 22 ವರ್ಷ ವಯಸ್ಸು. ತೈಮೂರು ಅಲಿ ಖಾನ್​ ಹಾಗೂ ಜೆಹ್​ ಅಲಿ ಖಾನ್​ ಕರೀನಾ ಕಪೂರ್​ ಅವರ ಪುತ್ರರಾಗಿದ್ದು, ಇವರ ವಯಸ್ಸು ಕ್ರಮವಾಗಿ ಆರು ಮತ್ತು ಎರಡು ವರ್ಷ. ಈ ಮೂವರು ಒಂದೇ ರೀತಿ ಕ್ಯೂಟ್​ ಆಗಿ ಚಿತ್ರದಲ್ಲಿ ಕಾಣಿಸುತ್ತಿದ್ದಾರೆ. ಆದರೆ ಫೋಟೋ ಸಕತ್​ ಟ್ರೋಲ್​ಗೂ ಒಳಗಾಗಿದೆ. ಸೈಫ್​ ಅಲಿ ಖಾನ್​ ಅವರು ಸ್ಮಾಲ್​, ಮೀಡಿಯಮ್​ ಮತ್ತು ಲಾರ್ಜ್​ ಸೈಜ್​ನಲ್ಲಿ ಲಭ್ಯ ಇರುವುದಾಗಿ ಹೇಳಲಾಗುತ್ತಿದೆ. ಅಂದಹಾಗೆ ಸೈಫ್​ ಅವರು ತಮ್ಮ ಮೊದಲ ಪತ್ನಿಯ ಜೊತೆ ಸಂಪರ್ಕದಲ್ಲಿ ಇಲ್ಲದಿದ್ದರೂ ಅವರ ಮಕ್ಕಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಈ ಪೈಕಿ ಸಾರಾ ಅಲಿ ಖಾನ್​ ಇತ್ತೀಚಿಗೆ ತುಂಬಾ ಸುದ್ದಿಯಲ್ಲಿರುವ ನಟಿ. ಅಮ್ಮನಂತೆ ಅಪ್ಪಟ ಹಿಂದೂ ಧರ್ಮ ಪಾಲಿಸುತ್ತಿದ್ದಾರೆ. ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಭಾರಿ ಟೀಕೆ-ಗಲಾಟೆಗಳ ನಡುವೆಯೇ ಕೇದಾರನಾಥ, ಅಮರನಾಥ ಯಾತ್ರೆಯನ್ನೂ ಮುಗಿಸಿ ಪೂಜೆ ಸಲ್ಲಿಸಿ ಬಂದಿದ್ದಾರೆ.

ಮೊನ್ನೆಯಷ್ಟೇ ರಕ್ಷಾ ಬಂಧನದ ಸಮಯದಲ್ಲಿ, ಸೈಫ್​ ಅಲಿ ಖಾನ್​ ಕರೀನಾ ಕಪೂರ್​, ನಾಲ್ವರು ಮಕ್ಕಳು ಹಾಗೂ ಸೈಫ್​ ಅಲಿಯ ಸಹೋದರರಿಯರ ಜೊತೆ ಫೋಟೋ ತೆಗೆಸಿಕೊಂಡಿದ್ದರು. ಇದಕ್ಕೆ ಟ್ರೋಲ್​​ಗೂ ಒಳಗಾಗಿದ್ದರು. ನಾಲ್ವರು ಖಾನ್​ ಮಕ್ಕಳು ಸಾಕಾಗಿದ್ಯೋ ಅಥವಾ ಇನ್ನೂ ಬರುವುದು ಇದೆಯೋ ಎಂದು ಒಬ್ಬಾತ ಪ್ರಶ್ನೆ ಮಾಡಿದರೆ, ಲವ್​ ಜಿಹಾದ್​ನ ಪ್ರತಿರೂಪ ಈ ಫೋಟೋ ಎನ್ನುತ್ತಿದ್ದಾರೆ. ಸಾರಾ ಅಲಿಯ ಅಮ್ಮ ಅಮೃತಾ ಸಿಂಗ್​ ಇದ್ದರೆ ಈ ಫೋಟೋ ಕಂಪ್ಲೀಟ್​ ಎನಿಸುತ್ತಿತ್ತು ಎಂದು ಇನ್ನೋರ್ವ ಕಮೆಂಟ್​ ಮಾಡಿದ್ದಾರೆ. 

ಅಮೃತಾ ಸಿಂಗ್​ರನ್ನು ಗುಟ್ಟಾಗಿ ಮದ್ವೆಯಾಗಿದ್ರಾ ಕರೀನಾ ಕಪೂರ್ ಪತಿ ಸೈಫ್​?