Asianet Suvarna News Asianet Suvarna News

ಸುಶಾಂತ್ ಸಿಂಗ್ ನಿಧನದ ನಂತರ ಹೆಚ್ಚಾಯ್ತಾ ಬಾಲಿವುಡ್​ನಲ್ಲಿ ಬೈಕಾಟ್​ ಟ್ರೆಂಡ್?

ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತರ ಬಾಲಿವುಡ್​ ಬೈಕಾಟ್​ ಟ್ರೆಂಡ್​ ಹೆಚ್ಚಾಗಿದೆ. ನಿರ್ದೇಶಕ ಮಧು ಭಂಡಾರ್ಕರ್​ ಹೇಳಿದ್ದೇನು? 
 

Madhur Bhandarkar opens up on Bollywood ignoring Sushant Singh Rajput and boycott trend
Author
First Published May 11, 2023, 3:11 PM IST

 ಫ್ಯಾಷನ್, ಚಾಂದಿನಿ ಬಾರ್ (Chandini Bar) ಮತ್ತು ಪೇಜ್ 3 ನಂತಹ ಚಲನಚಿತ್ರಗಳಿಗಾಗಿ ಬಹಳ ಖ್ಯಾತಿ ಗಳಿಸಿರುವವರು ನಿರ್ದೇಶಕ ಮಧುರ್​ ಭಂಡಾರ್ಕರ್. ಅವರು ಇತ್ತೀಚೆಗೆ  ಬಾಲಿವುಡ್ ಬಹಿಷ್ಕಾರದ ಪ್ರವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಪಠಾಣ್​ ಮತ್ತು ಲಾಲ್ ಸಿಂಗ್ ಚಡ್ಡಾದಂತಹ ಚಲನಚಿತ್ರಗಳು ಈ ಪ್ರವೃತ್ತಿಗೆ ಬಲಿಯಾದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ನೈಜ ಘಟನೆ ಆಧರಿತ ದಿ ಕಾಶ್ಮೀರಿ ಫೈಲ್ಸ್​, ದಿ ಕೇರಳ ಸ್ಟೋರಿ (The Kerala Story) ಚಿತ್ರಗಳ ಬ್ಯಾನ್​ ಕೂಡ ಬಹಳ ಸದ್ದು ಮಾಡಿದ್ದವು. ಪಠಾಣ್​ ಬೈಕಾಟ್​ಬಿಸಿಯ ನಡುವೆಯೇ ಭರ್ಜರಿ ಹಿಟ್​ ಗಳಿಸಿ ಹಲವು ದಾಖಲೆಗಳನ್ನು ಮುರಿದರೆ, ಆಮೀರ್​ ಖಾನ್​ರ ಲಾಲ್ ಸಿಂಗ್ ಚಡ್ಡಾ ಬಾಕ್ಸ್​ ಆಫೀಸ್​ನಲ್ಲಿ ಸೋಲು ಕಂಡಿತು. ದಿ ಕಾಶ್ಮೀರಿ ಫೈಲ್ಸ್​ ಯಶಸ್ಸು ಗಳಿಸಿದ್ದರೆ, ದಿ ಕೇರಳ ಸ್ಟೋರಿ ಹಲವು ರಾಜ್ಯಗಳಲ್ಲಿ ಬ್ಯಾನ್​ ಮಾಡಿದರೂ ಭರ್ಜರಿ ಯಶಸ್ಸಿನತ್ತ ಸಾಗುತ್ತಿದೆ. 

ಆದರೆ ಇದರ ಹೊರತಾಗಿಯೂ ಈ ಬೈಕಾಟ್​ (Boycott) ಪ್ರವೃತ್ತಿ ಕಳೆದ ಕೆಲವು ವರ್ಷಗಳಿಂದ, ಬಾಲಿವುಡ್​ನಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದಿದ್ದಾರೆ. ಮಧುರ್​ ಭಂಡಾರ್ಕರ್. ಚಿತ್ರನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಗೂಢ ಸಾವಿನ ಬಳಿಕ ಈ ಬೈಕಾಟ್​ ಪ್ರವೃತ್ತಿ ಹೆಚ್ಚುತ್ತಿದ್ದು, ಇದು ಚಿತ್ರರಂಗಕ್ಕೆ ಕೆಟ್ಟ ಪ್ರವೃತ್ತಿಯನ್ನು ಹೆಚ್ಚಿಸುತ್ತಿರುವುದು ಶೋಚನೀಯ ಎಂದಿದ್ದಾರೆ.   ಮಧುರ್ ಅವರು ತಮ್ಮ ಪಾಡ್‌ಕ್ಯಾಸ್ಟ್‌ನಲ್ಲಿ ಮನೀಶ್ ಪಾಲ್‌ ಅವರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದರು.

ಡಿವೋರ್ಸ್ ಬೆನ್ನಲ್ಲೇ ಬೆಡ್​ ಮೇಲೆ ರೋಷನ್ ಬೇಕೆಂದ ನಟಿ Niharika Konidela, ಸಂಚಲನ!

'ಸುಶಾಂತ್ ಸಿಂಗ್ ರಜಪೂತ್ (Sushanth Singh Rajput) ಅವರ ನಿಧನದ ನಂತರ ಇದು (ಬಹಿಷ್ಕಾರ) ಹೆಚ್ಚಾಗಿ ಸಂಭವಿಸಿದೆ ಎಂದು ನಾನು ಗಮನಿಸಿದ್ದೇನೆ. ಬಹುಶಃ ಉದ್ಯಮವು ಸುಶಾಂತ್​ ಅವರನ್ನು ನಿರ್ಲಕ್ಷಿಸಿದೆ ಎನ್ನಿಸುತ್ತಿದೆ. ಅವರು ಚಲನಚಿತ್ರೇತರ ಹಿನ್ನೆಲೆಯಿಂದ ಬಂದವರು ಮತ್ತು ಅವರು ಬಂದು ಅವರು ಕಷ್ಟಪಟ್ಟರು. ಆದರೆ ಅವರ ಸಾವಿನ ನಂತರ ಈ ಕೆಟ್ಟ ಸಂಪ್ರದಾಯ ಮುಂದುವರೆದಿರುವುದು ಅತ್ಯಂತ ದುರದೃಷ್ಟಕರ ಎಂದಿದ್ದಾರೆ. ಸುಶಾಂತ್​ ಅವರ ಅಕಾಲಿಕ ಮರಣದಿಂದಾಗಿ ಸಾರ್ವಜನಿಕರ ನಡುವೆ ಕೋಪವು ಉಲ್ಬಣಗೊಂಡಿರುವುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
' ನಟಿ ಆಲಿಯಾ ಭಟ್​ (Alia Bhatt) ಅಭಿನಯದ ಗಂಗೂಬಾಯಿ ಕಾಠಿವಾಡಿಯನ್ನೂ ಕೆಲವರು ಬಹಿಷ್ಕರಿಸಿದ್ದರು. ಆದರೆ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಬಹಿಷ್ಕಾರದ ಹೊರತಾಗಿಯೂ ಜನರು ವೀಕ್ಷಿಸಿದರು ಮತ್ತು ಅದು ಚೆನ್ನಾಗಿತ್ತು.  ಚಿತ್ರ ಚೆನ್ನಾಗಿದ್ದು ಕಂಟೆಂಟ್ ಸ್ಟ್ರಾಂಗ್ ಆಗಿದ್ದರೆ ಜನ ಹೋಗಿ ನೋಡುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಮಧುರ್​ ಹೇಳಿದರು. ಜನರು ಕಾಂತಾರ, ದಿ ಕಾಶ್ಮೀರ್ ಫೈಲ್ಸ್, ಭೂಲ್ ಭುಲೈಯಾ 2 ಅನ್ನು ವೀಕ್ಷಿಸಿ, ಅಭೂತಪೂರ್ವ ಪ್ರತಿಕ್ರಿಯೆ ತೋರಿಸುವುದು ಕೂಡ ಉತ್ತಮ ಉದಾಹರಣೆ ಎಂದರು.

ಅಮಿತಾಭ್​ ರೇಖಾ ಪ್ರೇಮಕ್ಕೆ ಸಾಕ್ಷಿಯಾದ ಎರಡು ಉಂಗುರ: ರಹಸ್ಯ ಬಿಚ್ಚಿಟ್ಟ ನಟಿ
 
ಅಂದಹಾಗೆ, ಸುಶಾಂತ್ ಸಿಂಗ್ ರಜಪೂತ್ ಜೂನ್ 2020 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅವರ ಸಾವಿನ ನಂತರ, ಅವರ ಅಭಿಮಾನಿಗಳು ಮತ್ತು ಉದ್ಯಮದ ಹಲವಾರು ಗಣ್ಯರು ಬಾಲಿವುಡ್ ಇಂಡಸ್ಟ್ರಿಯಲ್ಲಿ  ನಟನನ್ನು ನಿರ್ಲಕ್ಷಿಸಿದ್ದರು ಎಂದು ಹೇಳಿದ್ದರು.   

Follow Us:
Download App:
  • android
  • ios