ಕೆಜಿಎಫ್‌ ಚಿತ್ರದ ನಂತರ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ದಾಖಲೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ಟಾಲಿವುಡ್‌ ಹ್ಯಾಂಡ್ಸಮ್ ಪ್ರಭಾಸ್‌ಗೆ ಆಕ್ಷನ್‌ ಕಟ್ ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಚಿತ್ರ ಮುಹೂರ್ತ ನಡೆದಿದ್ದು ಇದೀಗ ಚಿತ್ರೀಕರಣಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.

ಸಲಾರ್‌ಗೆ ಶ್ರುತಿ ಹಾಸನ್‌ ಬರ ಮಾಡಿಕೊಂಡ ಪ್ರಭಾಸ್, ಪ್ರಶಾಂತ ನೀಲ್! 

ಕನ್ನಡದ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿರುವ ಕಾರಣ ನಾಯಕಿ ಹಾಗೂ ವಿಲನ್ ಪಾತ್ರಧಾರಿಗಳ ಬಗ್ಗೆ ಹೆಚ್ಚಿನ ಕುತೂಹಲವಿತ್ತು. ಕಮಲ್ ಹಾಸನ್ ಪುತ್ರಿ ಶ್ರುತಿ ನಾಯಕಿ ಎಂದು ತಿಳಿದ ತಕ್ಷಣ ಕನ್ನಡಿಗರ ಕೊಂಚ ಬೇಸರ ವ್ಯಕ್ತಪಡಿಸಿದರು. ಆದರೆ ವಿಲನ್ ಯಾರೆಂದು ತಿಳಿಯುತ್ತಿದ್ದಂತೆ ಸಂತಸ ಮನೆ ಮಾಡಿದೆ. 

ಹೌದು! ಇದೀಗ ಪ್ರಭಾಸ್ ಎದುರು ಅಬ್ಬರಿಸಲು ಮಧು ಗುರುಸ್ವಾಮಿ  ಎಂಟ್ರಿ ಕೊಟ್ಟಿದ್ದಾರೆ. ಭಜರಂಗಿ, ವಜ್ರಕಾಯ, ಮಫ್ತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಧು ಅಭಿನಯಿಸಿದ್ದಾರೆ.  ಮೊದಲ ಬಾರಿ ಫ್ಯಾನ್ ಇಂಡಿಯಾ ಚಿತ್ರದಲ್ಲಿ ಅಭಿನಯಿಸುತ್ತಿರುವುದ ಬಗ್ಗೆ ಮಧು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  'ಹಾಯ್ ಸ್ನೇಹಿತರೆ. ನನ್ನ ಮುಂದಿನ ಸಿನಿಮಾ ಸಲಾರ್ ಎಂದು ಘೋಷಿಸಲು ತುಂಬಾ ಸಂತೋಷವಾಗುತ್ತಿದೆ. ಪ್ರಶಾಂತ್ ನೀಲ್ ಸರ್ ಹಾಗೂ ಹೊಂಬಾಲೆ ಫಿಲ್ಮ್ಸ್‌ಗೆ ಧನ್ಯವಾದಗಳು. ಹೀಗೆ ಪ್ರೋತ್ಸಾಹ ನೀಡಿ' ಎಂದು ಮಧು ಬರೆದುಕೊಂಡಿದ್ದಾರೆ.

ಪ್ರಭಾಸ್‌ ಹಾಕಿದ್ದ ಈ ಎರಡು ಫೋಟೋದಲ್ಲಿ ನಟ ಯಶ್‌ ಇಲ್ಲ; ಅಭಿಮಾನಿಗಳ ಆಕ್ರೋಶ!