'ಬ್ರಾಹ್ಮಣ' ಶಬ್ದ ಹುಟ್ಟಿದ್ದು ಹೇಗೆ ಎಂದು ಬರೆದು ಭಾರಿ ಟೀಕೆಗೆ ಒಳಗಾಗಿದ್ದ ಗಾಯಕ ಲಕ್ಕಿ ಅಲಿ ಈಗ ಪೋಸ್ಟ್​ ಡಿಲೀಟ್​ ಮಾಡಿ ಕ್ಷಮೆ ಕೋರಿದ್ದಾರೆ. ಅವರು ಹೇಳಿದ್ದೇನು?  

ಗಾಯಕ, ಗೀತರಚನೆಕಾರ ಮತ್ತು ನಟನಾಗಿ ಸಾಕಷ್ಟು ಹೆಸರು ಮಾಡಿದವರು ಮಕ್ಸೂದ್ ಮಹಮೂದ್ ಅಲಿ. ಇವರು ಲಕ್ಕಿ ಅಲಿ (Lucky Ali) ಎಂದೇ ಪ್ರಸಿದ್ಧರಾಗಿದ್ದಾರೆ. ಹಲವಾರು ಜನಪ್ರಿಯ ಸಿಂಗಲ್ಸ್ ಮತ್ತು ಆಲ್ಬಮ್‌ಗಳೊಂದಿಗೆ, ಅವರು 1990 ರ ದಶಕದಲ್ಲಿ ಇಂಡಿಪಾಪ್‌ನ ಗಮನಾರ್ಹ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಹೆಚ್ಚು ಹಾಡುಗಳನ್ನು ಹಾಡದಿದ್ದರೂ, ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಸದಾ ಒಂದಿಲ್ಲೊಂದು ಪೋಸ್ಟ್‌ ಹಂಚಿಕೊಂಡು ಸುದ್ದಿಯಲ್ಲಿರುತ್ತಾರೆ. ಲಕ್ಕಿ ಅಲಿ ನಟನಾಗಿ, ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ‘ತಮಾಶಾ’ (Tamasha) ಮೊದಲಾದ ಸಿನಿಮಾಗಳ ಹಾಡಿಗೆ ಅವರು ಧ್ವನಿ ಆಗಿದ್ದಾರೆ. ಇತ್ತೀಚೆಗೆ ಅವರ ಫೇಸ್‌ಬುಕ್‌ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿದೆಯಲ್ಲದೇ, ಲಕ್ಕಿ ಅಲಿ ಭಾರಿ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಅವರು ನೀಡಿರುವ ಹೇಳಿಕೆ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. 

ಅಷ್ಟಕ್ಕೂ ಲಕ್ಕಿ ಅಲಿ ಅವರು ಹೇಳಿರುವುದು ಬ್ರಾಹ್ಮಣದ ಶಬ್ದದ ಕುರಿತು. ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ, ‘ಬ್ರಾಹ್ಮಣ್ (Brahman)​ ಹೆಸರು ಅಬ್ರಾಹಂ ಶಬ್ದದಿಂದ ಹುಟ್ಟಿದೆ ಎಂದು ಬರೆದುಕೊಂಡಿದ್ದರು. ‘ಬ್ರಾಹ್ಮಣ​ ಎಂಬ ಶಬ್ದ ಬ್ರಹ್ಮನಿಂದ (Brahma) ಹುಟ್ಟಿದೆ. ಬ್ರಹ್ಮ ಶಬ್ದ ಹುಟ್ಟಿದ್ದು ಅಬ್ರಾಮ್​ನಿಂದ​ (Abram). ಅಬ್ರಾಮ್ ಹುಟ್ಟಿದ್ದು ಅಬ್ರಾಹಂ (Abraham)​ ಅಥವಾ ಇಬ್ರಾಹಿಮ್​ನಿಂದ (Ibrahim). ಅಲ್ಲಾಹಿ ಸಲಾಂ, ಎಲ್ಲಾ ರಾಷ್ಟ್ರಗಳ ಪಿತಾಮಹ. ಎಲ್ಲರೂ ತಮ್ಮ ತಮ್ಮೊಳಗೆ ತರ್ಕಿಸದೆ ಸುಮ್ಮನೆ ಜಗಳವಾಡುತ್ತಿರುವುದೇಕೆ?’ ಎಂದು ಲಕ್ಕಿ ಅಲಿ ಬರೆದುಕೊಂಡಿದ್ದರು. ಬ್ರಾಹ್ಮಣ ಪದವು ಎಲ್ಲಾ ರಾಷ್ಟ್ರಗಳ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಇಬ್ರಾಹಿಂ ಅವರಿಂದ ಬಂದಿರುವುದು. ಹಾಗಾಗಿ ಬ್ರಾಹ್ಮಣರು ಇಬ್ರಾಹಿಂನ ವಂಶಸ್ಥರು. ಇಷ್ಟಿದ್ದರೂ ಎಲ್ಲರೂ ವಿನಾಕಾರಣ ಜಗಳವಾಡುತ್ತಾರೆ ಎಂದು ಅವರ ಈ ಬರಹ ತಿಳಿಸಿತ್ತು.

ಅನುಷ್ಕಾ ಕರಿಯರ್​ ಹಾಳು ಮಾಡಲು ಹೊರಟಿದ್ದ ಕರಣ್​ ಜೋಹರ್! ಶಾಕಿಂಗ್​ ವಿಡಿಯೋ ವೈರಲ್​

ಇದಾದ ಬಳಿಕ ಈ ಪೋಸ್ಟ್​ (Post) ದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ. ಅನೇಕರಿಂದ ಟೀಕೆ ವ್ಯಕ್ತವಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಲಕ್ಕಿ ಅಲಿ ಅವರು ಇದೀಗ ಕ್ಷಮೆ ಕೇಳಿದ್ದಾರೆ. ಈ ಪೋಸ್ಟ್​ ವೈರಲ್ ಆದ ಬೆನ್ನಲ್ಲೇ ಲಕ್ಕಿ ಅಲಿ ಅವರು ಸಾಕಷ್ಟು ಟೀಕೆ ಎದುರಿಸಿದ್ದರು. ಅವರು ಕ್ಷಮೆ ಕೇಳಬೇಕು ಎನ್ನುವ ಒತ್ತಾಯ ಜೋರಾಯಿತು. ಈ ಪೋಸ್ಟ್​ ಡಿಲೀಟ್ ಮಾಡಿ ಅವರು ಕ್ಷಮೆ ಕೇಳಿದ್ದಾರೆ. ಪೋಸ್ಟ್​ ಡಿಲೀಟ್​ (Delete) ಮಾಡಿದ ಅವರು, ‘ನನ್ನ ಕೊನೆಯ ಪೋಸ್ಟ್‌ ವಿವಾದ ಹುಟ್ಟುಹಾಕಿದೆ. ನನ್ನ ಉದ್ದೇಶ ಯಾರಿಗೂ ಕೋಪವನ್ನು ಉಂಟುಮಾಡುವುದಲ್ಲ. ಎಲ್ಲರನ್ನೂ ಒಂದು ಮಾಡಬೇಕು ಅನ್ನೋದು ನನ್ನ ಉದ್ದೇಶ ಆಗಿತ್ತು. ಆದರೆ, ನಾನಂದುಕೊಂಡ ರೀತಿಯಲ್ಲಿ ಜನರು ಅದನ್ನು ಅರ್ಥಮಾಡಿಕೊಂಡಿಲ್ಲ. ಇದು ನನ್ನ ಹಿಂದೂ ಗೆಳೆಯರ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಅದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಕ್ಷಮೆ ಕೇಳುತ್ತೇನೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂದು ಅವರು ಕ್ಷಮೆ ಕೇಳಿ ಪೋಸ್ಟ್ ಮಾಡಿದ್ದಾರೆ.

"ಸಮಾಜದ ವಿವಿಧ ವರ್ಗಗಳ ಜನರನ್ನು ಒಗ್ಗೂಡಿಸುವುದು ನನ್ನ ಉದ್ದೇಶವಾಗಿತ್ತು. ಆದರೆ ಇದು ಸರಿಯಲ್ಲ ಎಂದು ನಾನು ಅರಿತುಕೊಂಡೆ. ನಾನು ಹೇಳಲು ಉದ್ದೇಶಿಸಿದ್ದನ್ನು ತಪ್ಪಾಗಿ ನಿರೂಪಿಸಲಾಗಿದೆ. ನನ್ನ ಮಾತುಗಳಿಂದ ನನ್ನ ಅನೇಕ ಹಿಂದೂ ಸ್ನೇಹಿತರಿಗೆ ತೊಂದರೆಯಾಗಿದೆ. ಇದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ" ಎಂದಿದ್ದಾರೆ. ಈಗ ಅವರು ವಿವಾದದ ಮೂಲಕ ಸುದ್ದಿ ಆಗಿದ್ದಾರೆ. ಅವರು ಕ್ಷಮೆ ಕೇಳಿದ ಹೊರತಾಗಿಯೂ ಅವರ ಬಗ್ಗೆ ಟೀಕೆಗಳು ನಿಂತಿಲ್ಲ.

ರಿಲೀಸ್​ಗೂ ಮುನ್ನವೇ ದಾಖಲೆ ನಿಖಿಲ್ ನಟನೆಯ SPY: ಬಾಚಿತು 40 ಕೋಟಿ ರೂ!