ರಿಲೀಸ್​ಗೂ ಮುನ್ನವೇ ದಾಖಲೆ ನಿಖಿಲ್ ನಟನೆಯ SPY: ಬಾಚಿತು 40 ಕೋಟಿ ರೂ!

ಕಾರ್ತಿಕೇಯ-2 ಬ್ಲಾಕ್ ಬಸ್ಟರ್ ಹಿಟ್ ಬಳಿಕ ನಿಖಿಲ್ ಸಿದ್ಧಾರ್ಥ್  ನಟಿಸಿರುವ ಸ್ಪೈ   ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆ ಬರೆದಿದೆ. ಏನದು?
 

Nikhil Siddharthas Pan India Film Spy Bags An All Time Highest Amount

ಕಾರ್ತಿಕೇಯ-2 ಬ್ಲಾಕ್ ಬಸ್ಟರ್ ಹಿಟ್ ಬಳಿಕ ನಿಖಿಲ್ ಸಿದ್ಧಾರ್ಥ್ (Nikhil Siddharth) ನಟಿಸಿರುವ ಸ್ಪೈ (Spy) ಸಿನಿಮಾ ಇದೀಗ ಸದ್ದು ಮಾಡುತ್ತಿದೆ. ಟಾಲಿವುಡ್‌ ನಟ ನಿಖಿಲ್ ಸಿದ್ಧಾರ್ಥ್ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ನಿಖಿಲ್ ಸಿದ್ಧಾರ್ಥ್ ಟಾಲಿವುಡ್‌ ಎಂಟ್ರಿ ಕೊಟ್ಟಾಗಲೇ ಸಕ್ಸಸ್‌ಫುಲ್ ಸಿನಿಮಾಗಳನ್ನು ಕೊಟ್ಟಿದ್ದರು. ಆದರೆ, ನಂತರ ಆಯ್ಕೆ ಮಾಡಿಕೊಂಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದ್ದವು. ಇನ್ನೇನು ನಿಖಿಲ್ ಸಿದ್ಧಾರ್ಥ್ ಕೆರಿಯರ್ ಮುಗೀತು ಅನ್ನುವಾಗಲೇ 'ಕಾರ್ತಿಕೇಯ 2' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದಷ್ಟೇ ಅಲ್ಲ. ಬಾಕ್ಸಾಫೀಸ್‌ ದೋಚಿತ್ತು. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ‌ ಮೂಡಿ ಬರ್ತಿರುವ ಸ್ಪೈ ಚಿತ್ರ  ಬಹುನಿರೀಕ್ಷಿತ ಪ್ಯಾನ್ ಇಂಡಿಯಾ  ಬಿಡುಗಡೆಗೆ ಸಜ್ಜಾಗುತ್ತಿದೆ. ಇದೀಗ ಅವರು 'ಸ್ಪೈ' ಚಿತ್ರೀಕರಣ ಮುಗಿಸಿದ್ದಾರೆ. ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್‌ ಆಗಲಿದೆ. ಸ್ಪೈ ಸಿನಿಮಾ ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಪೋಸ್ಟ್ ಪ್ರೊಡಕ್ಷನ್ (Post prodiction) ಹಂತದಲ್ಲಿರುವ ಈ ಚಿತ್ರ ಪ್ರೀ ರಿಲೀಸ್ ಬ್ಯುಸಿನೆಸ್​ನಲ್ಲಿ ಈಗ ದಾಖಲೆ ಬರೆದಿದೆ. ಸ್ಪೈ ಸಿನಿಮಾದ ಪೋಸ್ಟರ್ ಹಾಗೂ ಗ್ಲಿಂಪ್ಸ್ ನಿರೀಕ್ಷೆ ಹೆಚ್ಚಿಸಿದ್ದು, ನಿಖಿಲ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರರು ಆಗಿರುವ ಗ್ಯಾರಿ ಬಿ ಹೆಚ್ (Gary BH) ಸ್ಪೈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.  ಗ್ಯಾರಿ ಬಿ.ಹೆಚ್. ನಿರ್ದೇಶನದ ಜೊತೆಗೆ ಸಂಕಲನದ ಹೊಣೆ ಹೊತ್ತಿದ್ದಾರೆ. ಇವರು ಈಗಾಗಲೇ 'ಗೂಢಾಚಾರಿ', 'ಎವರು', 'ಹಿಟ್', 'ಪಾಗಲ್' ಹಾಗೂ 'ಹಿಟ್ 2' (Hit 2) ಅಂತಹ ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಆಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಸಿನಿಮಾದಲ್ಲಿ‌ ನಿಖಿಲ್‌ಗೆ ಜೋಡಿಯಾಗಿ ಐಶ್ವರ್ಯ ಮೆನನ್ ನಾಯಕಿಯಾಗಿ ನಟಿಸಲಿದ್ದಾರೆ. ಹೈ ಬಜೆಟ್‌ನಲ್ಲಿ ತಯಾರಾಗುತ್ತಿರುವ ಸ್ಪೈ ಸಿನಿಮಾಗೆ ಹಾಲಿವುಡ್ ತಂತ್ರಜ್ಞರ ಮೆರುಗು ಸಿಕ್ಕಿದೆ. ಎವರು ಮತ್ತು ಹಿಟ್ ಸಿನಿಮಾಗಳ ನಿರ್ಮಾಪಕ ಕೆ. ರಾಜಶೇಖರ್ ರೆಡ್ಡಿ ಇಡಿ ಎಂಟರ್‌ನ್ಮೈಂಟ್‌ ಬ್ಯಾನರ್‌ ಅಡಿ ಚರಣ್ ರಾಜ್ ಉಪ್ಪಲಪತಿ ಜೊತೆ ಗೂಡಿ ಅದ್ಧೂರಿಯಾಗಿ ನಿರ್ಮಿಸಿರುವ ಈ ಸಿನಿಮಾ, ಥಿಯೇಟರ್ ಹಕ್ಕು ಹೊರತುಡಪಡಿಸಿ ಉಳಿದೆಲ್ಲಾ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. 

ಬಾಲಿವುಡ್​ ಇಂಡಸ್ಟ್ರಿಯಲ್ಲಿ ತಲ್ಲಣ ಸೃಷ್ಟಿಸಿದ ಶ್ರೀದೇವಿಯ ನಿಗೂಢ 'ತಂಗಿ'! ಯಾರೀಕೆ?

ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಬರೋಬ್ಬರಿ 40 ಕೋಟಿ ರೂ. ವೆಚ್ಚದಲ್ಲಿ  ಅಮೇಜಾನ್ ಪ್ರೈಂ (Amazon Prime) ವಿಡಿಯೋ ಹಾಗೂ ಸ್ಟಾರ್ ನೆಟ್‌ವರ್ಕ್ ಜಂಟಿಯಾಗಿ ಖರೀದಿ ಮಾಡಿದೆ. ಇದು ನಿಖಿಲ್ ಸಿದ್ಧಾರ್ಥ್ ಕೆರಿಯರ್‌ನಲ್ಲೇ ದಾಖಲೆ ಮೊತ್ತಕ್ಕೆ ಮಾರಾಟವಾದ ಸಿನಿಮಾ. ನಿಖಿಲ್ ಸಿದ್ಧಾರ್ಥ್ 'ಕಾರ್ತಿಕೇಯ 2' ಕೇವಲ 15 ಕೋಟಿ ರೂ.ಯಲ್ಲಿ ನಿರ್ಮಾಣ ಆಗಿತ್ತು. ಆದರೆ, ಈ ಸಿನಿಮಾ ಗಳಿಸಿದ್ದು, ಬರೋಬ್ಬರಿ 121 ಕೋಟಿ ರೂ. ಹೀಗಾಗಿ 'ಸ್ಪೈ' ಸಿನಿಮಾ 'ಕಾರ್ತಿಕೇಯ 2'ಗಿಂತ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳು ಭಾರೀ ಮೊತ್ತಕ್ಕೆ ಸೇಲ್ ಆಗಿದ್ದು ಟೀಂಗೆ ಹೊಸ ಹುರುಪು ಸಿಕ್ಕಂತಾಗಿದೆ.

ಜ್ಯೂನಿಯನ್ ಅಮರು ಸೂರಿಸೆಟ್ಟಿ ಛಾಯಾಗ್ರಹಣ, ಶ್ರೀಚರಣ್ ಪಕಳ ಸಂಗೀತ, ಅರ್ಜುನ್ ಸೂರಿಸೆಟ್ಟಿ ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ. ಈ ಸಿನಿಮಾ ಜೊತೆಗೆ ಇಡಿ ಎಂಟರ್‌ನ್ಮೈಂಟ್‌ ಬ್ಯಾನರ್‌ ಅಡಿ ಮತ್ತೆರಡು ಹೊಸ ಪ್ರಾಜೆಕ್ಟ್ ತಯಾರಾಗಲಿದ್ದು, ಡಿಜೆ ಟಿಲ್ಲು ಖ್ಯಾತಿಯ ನಿರ್ದೇಶಕ ವಿಮಲ್ ಕೃಷ್ಣ (Vimal Krishna) ನಿರ್ದೇಶನಲ್ಲೊಂದು ಸಿನಿಮಾ ಬರಲಿದೆ.

Liplock Scene: ಹಸಿಬಿಸಿ ದೃಶ್ಯ ಮಾಡಿ ಪಡಬಾರದ ಕಷ್ಟಪಟ್ಟ ನಟಿಯರಿವರು!

Latest Videos
Follow Us:
Download App:
  • android
  • ios