ದಾಂಪತ್ಯ ಮುರೀತು, ಪ್ರೀತಿ ಇರುತ್ತೆ: ನೋಟ್ ಬರೆದು ನಟಿ ಚಾರುಗೆ ಡಿವೋರ್ಸ್ ಕೊಟ್ಟ ಸುಷ್ಮಿತಾ ಸೇನ್ ತಮ್ಮ
ಕೆಲ ತಿಂಗಳಿನಿಂದ ಬೀದಿ ರಂಪಾಟವಾಗಿದ್ದ ಸುಷ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಮತ್ತು ಕಿರುತೆರೆ ನಟಿ ಚಾರು ಅಸೋಪಾ ಅವರ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಂಡಿದೆ.
ಕೆಲ ತಿಂಗಳುಗಳಿಂದ ಬೀದಿಗೆ ಬಂದಿದ್ದ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ (Sushmitha Sen) ಸಹೋದರ ರಾಜೀವ್ ಸೇನ್ ಹಾಗೂ ನಟಿ ಚಾರು ಅಸೋಪಾ ಅವರ ದಾಂಪತ್ಯ ಜೀವನ ಕೊನೆಗೂ ಮುರಿದು ಹೋಗಿದೆ. ರಾಜೀವ್ ವಿರುದ್ಧ ಪತ್ನಿ ಚಾರು ಅಸೋಪಾ ಸಾಲು ಸಾಲು ಆರೋಪಗಳನ್ನು ಮಾಡಿದ್ದರೆ, ತಮ್ಮ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ರಾಜೀವ್ ಆರೋಪಿಸಿದ್ದರು. ಕಿರುತೆರೆಯ ಖ್ಯಾತ ನಟ ಕರಣ್ ಮೆಹ್ರಾ ಜೊತೆ ಪತ್ನಿಗೆ ಸಂಬಂಧವಿದೆ ಎನ್ನುವುದು ಅವರ ಆರೋಪವಾಗಿತ್ತು. ಚಾರು ಅವರು ತಮ್ಮ ಮೊದಲ ಮದುವೆಯ ವಿಷಯವನ್ನು ಮುಚ್ಚಿಟ್ಟು ಮದುವೆಯಾದರು ಎಂದು ರಾಜೀವ್ ಸೇನ್ (Rajeev Sen) ಹೇಳಿದ್ದರು. ಸೆಪ್ಟೆಂಬರ್ 2022 ರಲ್ಲಿ, ಇಬ್ಬರೂ ತಮ್ಮ ಮಗಳಿಗಾಗಿ ಮತ್ತೆ ಒಟ್ಟಿಗೆ ವಾಸಿಸಲು ನಿರ್ಧರಿಸಿದರು. ಆದರೆ, ಕೆಲವೇ ತಿಂಗಳುಗಳಲ್ಲಿ ಇಬ್ಬರೂ ಮತ್ತೆ ಬೇರ್ಪಟ್ಟು ವಿಚ್ಛೇದನಕ್ಕೆ ಮುಂದಾದರು. ಹೀಗೆ ಈ ಜೋಡಿಯ ಗಲಾಟೆ ಜಗಜ್ಜಾಹೀರವಾಗಿತ್ತು. ಈಗ ಈ ದಾಂಪತ್ಯ ಜೀವನ ಮುರಿದು ಬಿದ್ದಿದ್ದು, ಖುದ್ದು ದಂಪತಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ತಾವು ವಿಚ್ಛೇದನ ನೀಡಿರುವುದಾಗಿ ಹೇಳಿದ್ದಾರೆ. ಆದರೆ ಮಗಳಿಗಾಗಿ ಅಪ್ಪ-ಅಮ್ಮ ಆಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ರಾಜೀವ್ ಅವರು, ಕಿರುತೆರೆ ನಟಿ ಚಾರು ಅಸೋಪಾ (Charu Asopa) ಅವರನ್ನು 2019 ರಲ್ಲಿ ವಿವಾಹವಾಗಿದ್ದರು. ಅವರಿಬ್ಬರಿಗೂ ಜಿಯಾನಾ ಎಂಬ ಮಗಳಿದ್ದಾಳೆ. ಆದರೆ ಜಿಯಾನಾ ಹುಟ್ಟುವ ಮೊದಲೇ ರಾಜೀವ್ ಮತ್ತು ಚಾರು ನಡುವೆ ಜಗಳ ಪ್ರಾರಂಭವಾಗಿತ್ತು. ಕೆಲವೊಮ್ಮೆ ಇಬ್ಬರೂ ಒಟ್ಟಿಗೆ ಇದ್ದರೆ, ಹಲವು ಬಾರಿ ಪ್ರತ್ಯೇಕವಾಗಿ ಇರುತ್ತಿದ್ದರು. ಇದರಿಂದಾಗಿ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗುಸುಗುಸು ಶುರುವಾಗಿತ್ತು. ಅದಕ್ಕೀಗ ಅಂತ್ಯ ಹಾಡಲಾಗಿದೆ.
ರಾಜೀವ್ ಸೇನ್ ಮತ್ತು ಚಾರು ಅಸೋಪಾ ವಿಚ್ಛೇದನ ಪಡೆದಿದ್ದಾರೆ, ಇದನ್ನು ಸ್ವತಃ ರಾಜೀವ್ ಸೇನ್ ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ರಾಜೀವ್ ತಿಳಿಸಿದ್ದಾರೆ. ಚಾರು ಅಸೋಪಾ ಅವರೊಂದಿಗಿನ ವಿಚ್ಛೇದನ ಮತ್ತು ನಾಲ್ಕು ವರ್ಷಗಳ ವಿವಾಹದ ಅಂತ್ಯಪಡಿಸುತ್ತಿರುವುದಾಗಿ ಹೇಳಿದ್ದಾರೆ. 'ಯಾವುದೇ ಗುಡ್ ಬೈ ಇಲ್ಲ. ನಾವು ಒಬ್ಬರಿಗೊಬ್ಬರು ಇರಲು ಸಾಧ್ಯವಾಗದ ಇಬ್ಬರು ವ್ಯಕ್ತಿಗಳು. ಆದರೆ, ಪ್ರೀತಿ ಉಳಿಯುತ್ತದೆ. ನಾವು ಯಾವಾಗಲೂ ನಮ್ಮ ಮಗಳಿಗೆ ತಾಯಿ ಮತ್ತು ತಂದೆಯಾಗಿರುತ್ತೇವೆ' ಎಂದು ಪೋಸ್ಟ್ ಹಾಕಿರುವ ರಾಜೀವ್ ಅವರು, ಪೋಸ್ಟ್ ಜೊತೆಗೆ, ರಾಜೀವ್ ಚಾರು ಅವರೊಂದಿಗಿನ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.
Shilpa Shetty Birthday: ಶಿಲ್ಪಾ ಜತೆ ಸಂಬಂಧ, ಟ್ವಿಂಕಲ್ ಜತೆ ಮದ್ವೆ, ಅಕ್ಷಯ್ ಮಹಾಮೋಸ ಬಯಲು!
ಈ ಹಿಂದೆ ಚಾರು ಮತ್ತು ರಾಜೀವ್‌ಗೆ ನ್ಯಾಯಾಲಯ ಆರು ತಿಂಗಳ ಕೂಲಿಂಗ್ ಅವಧಿಯನ್ನು (Cooling period) ನೀಡಿತ್ತು. ರಾಜೀವ್ ಮತ್ತು ಚಾರು ತಮ್ಮ ಸಂಬಂಧವನ್ನು ಸರಿಪಡಿಸಲು ಕೌನ್ಸೆಲಿಂಗ್ ಸೆಷನ್‌ಗಳಿಗೆ ಹಾಜರಾಗಿದ್ದರು ಎಂದು ವರದಿಯಾಗಿದೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಆದ್ದರಿಂದ ನಿನ್ನೆ ವಿಚ್ಛೇದನಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.
ಇವರ ಗಲಾಟೆ ಇನ್ನಷ್ಟು ಬಿಗಡಾಯಿಸಲು ಕಾರಣ, ಪತ್ನಿ ಚಾರುಗೆ ಟಿವಿ ನಟ ಕರಣ್ ಮೆಹ್ರಾ ಜೊತೆ ಸಂಬಂಧವಿದೆ ಎಂದು ರಾಜೀವ್ ಗಂಭೀರ ಆರೋಪ ಮಾಡಿದ್ದರು. ನಾನು ಆಕೆಯ ವಾಯ್ಸ್ ನೋಟ್ (Voice Note) ಗಮನಿಸಿದೆ. ಇದರಿಂದ ವಿಷಯ ತಿಳಿಯಿತು ಎಂದಿದ್ದರು. ಈ ವಿಚಾರವನ್ನು ಆಕೆಯ ತಾಯಿಯೇ ಬಹಿರಂಗ ಪಡಿಸಿದ್ದರು. ಅವಳು ಕರಣ್ ಮೆಹ್ರಾ ಜೊತೆ ರೊಮ್ಯಾಂಟಿಕ್ ರೀಲ್ ಮಾಡಿದ್ದಾಳೆ. ನನಗೆ ಮೋಸ ಮಾಡಿದ್ದಾಳೆ. ಅವಳಿಗೆ ಈ ವಿಷಯ ಕೇಳಿದ್ದಕ್ಕೆ ನನ್ನ ಮೇಲಿಯೇ ದೂಷಿಸುತ್ತಿದ್ದಾಳೆ ಎಂದು ರಾಜೀವ್ ಆರೋಪಿಸಿದ್ದರು.
ಈ ಆರೋಪವನ್ನು ಕರಣ್ ಮೆಹ್ರಾ ತಳ್ಳಿ ಹಾಕಿದ್ದರು. ಬದಲಿಗೆ ಚಾರು ಕೂಡ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 'ದಾಂಪತ್ಯಕ್ಕೆ ದ್ರೋಹ ಮಾಡಿದರು. ನಾನು ಮನೆಯಲ್ಲಿ ಇಲ್ಲದಿದ್ದಾಗ ಸಿಸಿಟಿವಿ (CCTV) ಸ್ವಿಚ್ ಆಫ್ ಮಾಡಿ ಇಡುತ್ತಿದ್ದರು. ಯಾಕೆ ಎಂದು ಕೇಳಿದ್ದಕ್ಕೆ ಇದೇನು ಬಿಗ್ ಬಾಸ್ ಹೌಸಾ ಎಂದು ಕೇಳುತ್ತಿದ್ದರು. ಇದೊಂದು ದೊಡ್ಡ ವಿಚಾರಾ ಎಂದು ಗಲಾಟೆ ಮಾಡುತ್ತಿದ್ದರು. ಜಿಮ್ ಹೆಸರಲ್ಲಿ ಯಾವಾಗಲೂ ಹೊರಗಡೆ ಇರುತ್ತಿದ್ದರು' ಎಂದು ಹೇಳಿದ್ದರು. ಇವರಿಬ್ಬರ ಈ ಜಗಳ ಈಗ ವಿಚ್ಛೇದನದ ತನಕ ಹೋಗಿದೆ.
Dimple Kapadia Birthday: 16ಕ್ಕೆ ಮದ್ವೆ, 17ಕ್ಕೆ ಮಗು: ಡಿಂಪಲ್, ರಾಜೇಶ್ ಖನ್ನಾ ದಾಂಪತ್ಯದ ಕಥೆ-ವ್ಯಥೆ!