ನಟ ಸುಶಾಂತ್ ಸಿಂಗ್ ಮೃತದೇಹ ಪತ್ತೆಯಾದ ಕೋಣೆ ಬಾಗಿಲು ಬೀಗ ಒಡೆದ ರಫಿ ಶೇಖ್‌ ವಿಚಾರಣೆಯಲ್ಲಿ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ.

ಬಾಲಿವುಡ್‌ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನೇ ದಿನೇ ಊಹಿಸಲಾಗದ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇತ್ತೀಚಿಗೆ ಇಡಿ ಕಛೇರಿಯಲ್ಲಿ ವಿಚಾರಣೆಗೆ ಹಾಜರಾದ ಬೀಗ ರಿಪೇರಿ ಮಾಡುವ ರಫಿ ಶೇಖ್‌ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.

ಸುಶಾಂತ್ ಮನೆಯಿಂದ ಬಂದು ಈಗ ರಿಲೀಫ್ ಎಂದ ರಿಯಾ: ಮಹೇಶ್ ಭಟ್ ಜೊತೆಗಿನ ವಾಟ್ಸಾಪ್ ಚಾಟ್ ವೈರಲ್ 

ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಕೋಣೆಗೆ ಕಂಪ್ಯೂಟರ್‌ ಲಾಕ್‌ ಅಳವಡಿಸಲಾಗಿದೆ. ಒಮ್ಮೆ ಓಪನ್ ಮಾಡಿ ಪ್ರವೇಶಿಸಿದ ನಂತರ ಹೊರ ಬರಲು ಓಪನ್ ಮಾಡುವುದಕ್ಕೆ ಪಾಸ್‌ವರ್ಡ್‌ ತಿಳಿದುಕೊಂಡಿರಬೇಕು ಅದರಲ್ಲೂ ಆಪ್ತರಿಗೆ ಒಂದು ಪಾಸ್‌ವರ್ಡ್‌ ಹಾಗೆ ಕೆಲ ಫ್ರೆಂಡ್ಸ್‌ಗೆ ಒಂದು ಪಾಸ್‌ವರ್ಡ್ ನೀಡಲಾಗಿರುತ್ತದೆ. ಹೀಗೆ ಮಾಡಲು ಕಾರಣವೇ ಯಾರ್ಯಾರೂ ಎಂಟರ್‌ ಆಗ್ತಿದ್ದಾರೆ ಎಂದು ತಿಳಿದುಕೊಳ್ಳಲು.

ಸುಶಾಂತ್ ಇದ್ದ ಕೋಣೆ ಓಪನ್ ಮಾಡಲು ನಾಲ್ವರು ಬೀಗ ರಿಪೇರಿ ಮಾಡುವವನನ್ನು ಕರೆಸಿದ್ದರು ಎನ್ನಲಾಗಿದೆ. ಆತನ ಹೆಸರು ರಫಿ ಶೇಖ್. 'ಅಂದು ಬೀಗ ಓಪನ್ ಮಾಡಲು ನನಗೆ ಕರೆಸಿದರು ಅಲ್ಲಿ ನಾಲ್ಕು ಜನ ಇದ್ದರು ಆದರೆ ಪೊಲೀಸ್‌ ಇರಲಿಲ್ಲ. ಕಂಪ್ಯೂಟರ್ ಲಾಕ್‌ ಅಳವಡಿಸಿದ ಕಾರಣ ನಾನು ಅದನ್ನು ಒಡೆದು ಓಪನ್ ಮಾಡಬೇಕಾಯ್ತು. ಬೀಗ ಓಪನ್ ಆಗುತ್ತಿದ್ದಂತೆ ಅವರು ನನ್ನನು ಕಳುಹಿಸಿದರು. ಒಳಗೆ ಯಾರಿದ್ದಾರೆ ಏನು ನಡೆಯುತ್ತಿದೆ ಎಂದು ನೋಡಲು ಬಿಡಲಿಲ್ಲ. ಕಂಪ್ಯೂಟರ್‌ ಲಾಕ್‌ ಅಲ್ವಾ ಎಂದು ನಾನು 1,500-2000 ಹಣ ಡಿಮ್ಯಾಂಡ್ ಮಾಡಿದೆ. ಅವರು ಕೊಡಲು ಒಪ್ಪಿಕೊಂಡರು. ಈ ಘಟನೆ ನಡೆದದ್ದು ಮಧ್ಯಾಹ್ನ ಸುಮಾರು 1.30-1.45ಕ್ಕೆ. ಆ ನಂತರ ಕರೆಕ್ಟ್‌ ಒಂದು ಗಂಟೆಗೆ ಪೊಲೀಸರು ನನಗೆ ಕರೆ ಮಾಡಿ ಬೀಗ ಓಪನ್ ಮಾಡಿದರ ಬಗ್ಗೆ ಮಾಹಿತಿ ಪಡೆದುಕೊಂಡರು' ಎಂದು ರಫಿ ಹೇಳಿಕೆ ನೀಡಿದ್ದಾರೆ.

ಇದೀಗ ರಫಿಗೆ ಬೀಗ ಓಪನ್ ಮಾಡಲು ಹೇಳಿದ ಆ ನಾಲ್ವರು ಯಾರು? ಕಂಪ್ಯೂಟರ್‌ ಪಾಸ್‌ವರ್ಡ್‌ ಏನೆಂದು ಅಳವಡಿಸಲಾಗಿತ್ತು ಎಂದು ಮಾಹಿತಿ ಪಡೆಯಲು ತನಿಖೆ ನಡೆಯುತ್ತಿದೆ.