ನಿರ್ದೇಶಕ ಮಹೇಶ್‌ ಭಟ್ ಹಾಗೂ ನಟಿ ರಿಯಾ ಚಕ್ರವರ್ತಿ ನಡುವಿನ ವಾಟ್ಸಾಪ್ ಚಾಟ್ ವೈರಲ್ ಆಗಿದೆ. ಸುಶಾಂತ್ ಮನೆಯಿಂದ ಬಂದಿದ್ದ ನಟಿ ನಾನೀಗ ರಿಲೀಫ್ ಎಂದು ಮಹೇಶ್ ಭಟ್‌ಗೆ ಮೆಸೇಜ್ ಕಳುಹಿಸಿದ್ದಳು.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಜೂನ್ 14ರಂದು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರದಲ್ಲಿ ಸುಶಾಂತ್ ನಟಿ ರಿಯಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿದೆ.

ಸುಶಾಂತ್ ಸಾವಿನ ತನಿಖೆ ವೇಗ ಹೆಚ್ಚಿಸಲು 5 ವಿಶೇಷ ತಂಡ ರಚಿಸಿದ CBI

ನಟ ಆತ್ಮಹತ್ಯೆ ಮಾಡುವ ಒಂದು ವಾರದ ಮೊದಲಷ್ಟೇ ನಟಿ ಸುಶಾಂತ್ ಮನೆಯಿಂದ ಬಂದಿದ್ದರು. ಅಲ್ಲಿಯವರೆಗೂ ರಿಯಾ ಸುಶಾಂತ್ ಜೊತೆಗೇ ಇದ್ದಳು. ಸುಶಾಂತ್ ಮನೆಯಿಂದ ಹಿಂದಿರುಗಿದ ದಿನ ರಿಯಾ ಹಾಗೂ ಮಹೇಶ್ ಭಟ್ ನಡುವಿನ ವಾಟ್ಸಾಪ್ ಚಾಟ್ ವೈರಲ್ ಆಗುತ್ತಿದೆ.

ಆಯಿಷಾ ಮೂವ್ ಆನ್ ಆಗಿದ್ದಾಳೆ ಸರ್. ಈಗ ರಿಲೀಫ್ ಇದೆ. ನಮ್ಮ ಕೊನೆಯ ಕಾಲ್ ವೇಕ್‌ಅಪ್ ಕಾಲ್ ಆಗಿತ್ತು ಎಂದು ರಿಯಾ ಮೆಸೇಜ್ ಮಾಡಿದ್ದು, ನೀನು ಅಂದೂ, ಇಂದೂ ನನ್ನ ಏಜೆಂಲ್ ಎಂದು ಪ್ರತಿಕ್ರಿಯಿಸಿದ್ದಾರೆ.

ಸುಶಾಂತ್ ಕೇಸ್ ಸಿಬಿಐಗೆ: ನಟಿ ರಿಯಾಳನ್ನು ಫಿಲ್ಮ್‌ನಿಂದ ಕೈಬಿಟ್ಟ ನಿರ್ದೇಶಕ

ಹಿಂದಿರುಗಿ ನೋಡಬೇಡ. ಮುಂದೆ ಸಾಗು. ನಿನ್ನ ತಂದೆ ಖುಷಿಯಾಗಿರಬಹುದು ಎಂದು ಉತ್ತರಿಸಿದ ಭಟ್‌ಗೆ, ಈಗ ಧೈರ್ಯ ಬಂದಿದೆ. ಇಷ್ಟೊಂದು ಸ್ಪೆಷಲ್ ಆಗಿರುವುದಕ್ಕೆ ಥ್ಯಾಂಕ್ಸ್ ಎಂದಿದ್ದಾಳೆ ರಿಯಾ.

ನೀನೇನು ಮಾಡಿದ್ದೀಯೋ ಅದನ್ನು ಮಾಡಲು ಗಟ್ಸ್ ಬೇಕು ಎಂದು ಮಹೇಶ್ ಭಟ್ ಪ್ರತಿಕ್ರಿಯಿಸಿದ್ದಾರೆ. ನಟನ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಈಗಾಗಲೇ ಅಧಿಕಾರಿಗಳು ಮುಂಬೈ ತಲುಪಿದ್ದಾರೆ.