Asianet Suvarna News Asianet Suvarna News

'ಕಾವಾಲಯ್ಯ' ಸಾಂಗ್‌ಗೆ ಮುದ್ದು ಪುಟಾಣಿ ಎಷ್ಟು ಕ್ಯೂಟಾಗಿ ಡ್ಯಾನ್ಸ್ ಮಾಡಿದ್ದಾಳೆ ನೋಡಿ

ಜೈಲರ್​ ಚಿತ್ರದ ಕಾವಾಲಯ್ಯ ಹಾಡು ಎಲ್ಲೆಡೆ ಸಖತ್​ ಹಂಗಾಮಾ ಸೃಷ್ಟಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಈ ಸಾಂಗ್‌ಗೆ ಸ್ಟೆಪ್ಸ್ ಹಾಕುತ್ತಿದ್ದಾರೆ. ಹಾಗೇನೆ ಇಲ್ಲೊಂದು ಪುಟ್ಟ ಬಾಲಕಿ ಕಾವಾಲಯ್ಯ ಸಾಂಗ್‌ಗೆ ಡ್ಯಾನ್ಸ್‌ ಮಾಡಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.

Little girl grooves to Tamannaahs Kaavaalaa, viral video steals hearts Vin
Author
First Published Aug 19, 2023, 11:11 AM IST | Last Updated Aug 19, 2023, 11:11 AM IST

ಟಾಲಿವುಡ್​​ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ಜೈಲರ್' ಚಿತ್ರ ಬಹುತೇಕ ಎಲ್ಲಾ ಚಿತ್ರಗಳ ದಾಖಲೆಗಳನ್ನು ಹಿಂದಿಕ್ಕಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುತ್ತಿದೆ. ಟ್ರೇಡ್ ವರದಿಗಳ ಪ್ರಕಾರ, ಈ  ಚಿತ್ರವು ವಿಶ್ವದಾದ್ಯಂತ ಇಲ್ಲಿಯವರೆಗೆ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂಪಾಯಿ ಮೀರಿದೆ. ಭಾರತದಲ್ಲಿ, ಇವತ್ತು ಬೆಳಗ್ಗೆಯವರೆಗೆ  226 ಕೋಟಿ ರೂಪಾಯಿಗಳನ್ನು ಗಳಿಸಿದೆ.  ಜೈಲರ್​ ಚಿತ್ರ ಬಿಡುಗಡೆಯಾಗುವ ಮುನ್ನವೇ ಹವಾ ಸೃಷ್ಟಿಸಿದ್ದು ಅದರ ಕಾವಲಾಯ್ಯ ಹಾಡು. ಮಿಲ್ಕಿ ಬ್ಯೂಟಿ ತಮನ್ನಾ ಸಖತ್ತಾಗಿ ಹೆಜ್ಜೆ ಹಾಕಿರುವ ಈ ಸಾಂಗ್ ಎಲ್ಲೆಡೆ ವೈರಲ್ ಆಗಿದೆ. ಒಂದೆಡೆ ಜನರು ರಜನೀಕಾಂತ್‌ ಅಭಿನಯಕ್ಕೆ ಜೈ ಅಂದರೆ, ಇನ್ನೊಂದೆಡೆ ಕಾವಾಲಯ್ಯ ಹಾಡು ಸಿನಿ ಪ್ರಿಯರಿಗೆ ಅಚ್ಚುಮೆಚ್ಚಾಗಿದೆ.

 ಜುಲೈ 6ರಂದು ಈ ಚಿತ್ರ ಬಿಡುಗಡೆಯಾಗಿತ್ತು.  ಆನ್‌ಲೈನ್‌ನಲ್ಲಿ ಹೊಸ ಪುಳಕ ಉಂಟು ಮಾಡಿದ್ದ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದ ದಿನವೇ 80 ದಶಲಕ್ಷ ವೀಕ್ಷಣೆ ಗಳಿಸಿದ್ದು ಇತಿಹಾಸ. ಈಗಲೂ ಈ ಹಾಡಿನ ಹವಾ ನಿಂತಿಲ್ಲ.  ಸೋಷಿಯಲ್​ ಮೀಡಿಯಾದಲ್ಲಿ ಹಂಗಾಮ ಸೃಷ್ಟಿಸುತ್ತಲೇ ಸಾಗಿದೆ. ಫೇಸ್​ಬುಕ್, ಇನ್‌ಸ್ಟಾಗ್ರಾಮ್​, ವಾಟ್ಸಪ್‌ ಸ್ಟೇಟಸ್‌ನಲ್ಲೂ ಇದೇ ಈಗ ಟ್ರೆಂಡಿಂಗ್‌ನಲ್ಲಿದೆ.

'ಜೈಲರ್'​ ಕಾವಾಲಾ ಹಾಡಿಗೆ ಜಪಾನಿನ ರಾಯಭಾರಿಯಿಂದ ಭರ್ಜರಿ ಡ್ಯಾನ್ಸ್​

'ಕಾವಾಲಯ್ಯ' ಸಾಂಗ್‌ಗೆ ಸೊಂಟ ಬಳುಕಿಸಿದ ಪುಟಾಣಿ
ಮಕ್ಕಳಿಂದ ಹಿಡಿದು ಅಜ್ಜಿಯರವರೆಗೆ, ಕಿರುತೆರೆ ಕಲಾವಿದರಿಂದ ಹಿಡಿದು ಬೇರೆ ಬೇರೆ ನಟಿಯರೂ ಈ ಹಾಡಿಗೆ ಡಾನ್ಸ್​ ಮಾಡಿ ಮೋಡಿ ಮಾಡುತ್ತಿದ್ದಾರೆ. ಈಚೆಗೆ ಕಿರುತೆರೆ ನಟಿ, ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ, ಪುಟ್ಟಕ್ಕನ ಮಕ್ಕಳು ನಾಯಕಿ ಸ್ನೇಹಾ ಮಿನಿ ಸ್ಕರ್ಟ್​ನಲ್ಲಿ ಭರ್ಜರಿ ಸ್ಟೆಪ್ ಹಾಕಿದ್ದರು.  ಸದ್ಯ ಕ್ಯೂಟ್ ಹುಡುಗಿಯೊಬ್ಬಳು ಈ ಹಾಡಿಗೆ ಡ್ಯಾನ್ಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಆರಾಧ್ಯ ಹೆಸರಿನ ಕ್ಯೂಟ್ ಹುಡುಗಿಯೊಬ್ಬಳು ಐಕಾನಿಕ್ ಹಾಡಿನಿಂದ ತಮನ್ನಾ ಅವರ ಕಾವಾಲಯ್ಯದ ಕಷ್ಟಕರವಾದ ಸ್ಟೆಪ್‌ನ್ನು ಮಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ನಗುತ್ತಾ, ಮುಖದಲ್ಲಿ ಸಣ್ಣಪುಟ್ಟ ಎಕ್ಸ್‌ಪ್ರೆಶನ್ ಕೊಡುತ್ತಾ ಬಾಲಕಿ ಮಾಡಿರುವ ವಿಡಿಯೋ ಎಲ್ಲರನ್ನೂ ಮೈ ಮರೆಸಿದೆ. 'ಕ್ಯೂಟ್ ಪೈ ರಿವಾ' (@cutiepie_riva) ಎಂಬ ಬಳಕೆದಾರರು ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಒಂಭತ್ತು ಲಕ್ಷಕ್ಕೂ ಹೆಚ್ಚು ವೀವ್ಸ್ ಗಳಿಸಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಕಾವಾಲಯ್ಯ ಹಾಡಿಗೆ 'ಪುಟ್ಟಕ್ಕನ ಮಕ್ಕಳು' ಸ್ನೇಹಾ ಮಿನಿ ಸ್ಕರ್ಟ್​ನಲ್ಲಿ ಭರ್ಜರಿ ಸ್ಟೆಪ್​: ಉಫ್​ ಎಂದ ಫ್ಯಾನ್ಸ್​!

ಒಬ್ಬ ಬಳಕೆದಾರರು, 'ಓ ಮೈ ಗಾಡ್‌, ಸೋ ಕ್ಯೂಟ್' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಐ ಲವ್ ಯುವರ್ ಮೂವ್ಸ್ ಬೇಟಾ' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಈಕೆ ತುಂಬಾ ಕ್ಯೂಟ್ ಆಗಿದ್ದಾಳೆ. ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾಳೆ. ದೇವರ ಆರ್ಶೀವಾದ ಸದಾ ಈಕೆಯ ಮೇಲಿರಲಿ' ಎಂಉ ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಒಟ್ನಲ್ಲಿ ಮುದ್ದು ಮಗುವಿನ ಮುದ್ದಾದ ಡ್ಯಾನ್ಸ್ ವಿಡಿಯೋ ನೆಟ್ಟಿಗರ ಮನ ಗೆದ್ದಿರೋದಂತೂ ನಿಜ. 

Latest Videos
Follow Us:
Download App:
  • android
  • ios