Asianet Suvarna News Asianet Suvarna News

ಸೂಪರ್​ಸ್ಟಾರ್​ ಬಾಲಕೃಷ್ಣ ವಿರುದ್ಧ ನಟಿ ವಿಚಿತ್ರಾ ಬಳಿಕ ರಾಧಿಕಾ ಆಪ್ಟೆ ಲೈಂಗಿಕ ದೌರ್ಜನ್ಯ ಆರೋಪ?

ಸೂಪರ್​ಸ್ಟಾರ್​ ಬಾಲಕೃಷ್ಣ ವಿರುದ್ಧ ನಟಿ ವಿಚಿತ್ರಾ ಬಳಿಕ ರಾಧಿಕಾ ಆಪ್ಟೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ.  ಏನದು?
 

Like Vichithra Radhika  Apte also speaks about bitter experience in Tollywood suc
Author
First Published Nov 23, 2023, 6:04 PM IST

ತಮಿಳು ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ವಿಚಿತ್ರಾ ತಮ್ಮ ಜೀವನದಲ್ಲಿ ನಡೆದ ಕಹಿ ಅನುಭವವನ್ನು ಹಂಚಿಕೊಂಡಿದ್ದರು. 20 ವರ್ಷಗಳ ಹಿಂದೆ ಸಿನಿಮಾದಲ್ಲಿ ನಟಿಸುತ್ತಿದ್ದಾಗ ಟಾಪ್ ಹೀರೋ ರೂಮ್ ಗೆ ಕರೆಸಿಕೊಂಡ್ರು, ಶೂಟಿಂಗ್ ಸ್ಪಾಟ್ ನಲ್ಲಿ ತನಗೆ ಆದ ಲೈಂಗಿಕ ದೌರ್ಜನ್ಯ ಯಾರ ಗಮನಕ್ಕೂ ಬಂದಿಲ್ಲ ಎಂದು ಕಣ್ಣೀರಿಟ್ಟಿದ್ದರು. ಆ ಘಟನೆಯ ನಂತರ ಚಿತ್ರರಂಗ ತೊರೆದೆ ಎಂದು ವಿಚಿತ್ರಾ ಹೇಳಿದ್ದರು. ವಿಚಿತ್ರಾ ಹೇಳಿದ ಘಟನೆಯ ಬಗ್ಗೆ ನೆಟಿಜನ್ ಗಳು ರಿಸರ್ಚ್ ಮಾಡೋಕೆ ಶುರುಮಾಡಿದ್ದು, ಆ ಟಾಪ್ ಹೀರೋ ಯಾರು ಅಂತ. ಅವರು ಬೇರೆ ಯಾರೂ ಅಲ್ಲ, ಈಗ ತೆಲುಗು ಚಿತ್ರರಂಗದಲ್ಲಿ ಮಾಸ್ ಹೀರೋ ಆಗಿರುವ ಬಾಲಕೃಷ್ಣ ಎನ್ನುವುದು ತಿಳಿದು ಬಂದಿದೆ.  ವಿಚಿತ್ರಾ ಅವರು ಚಿತ್ರೀಕರಣ ಮಾಡುತ್ತಿರುವ ಚಿತ್ರದ ಭಾಷೆಯನ್ನು ಬಹಿರಂಗಪಡಿಸದಿದ್ದರೂ, ಅವರು ದೃಶ್ಯಗಳ ವಿವರಣೆಯ ಆಧಾರದ ಮೇಲೆ ಬಾಲಕೃಷ್ಣ ಅವರ ತೆಲುಗು ಚಿತ್ರ ಭಲೇವಾದಿವಿ ಬಸು ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಲಾಗಿದೆ. ವಿಚಿತ್ರಾ  ಈ ಚಿತ್ರದಲ್ಲಿ ನಟಿಸಿದಾಗಲೇ ಹೀಗಾಯಿತು ಎಂಬುದಕ್ಕೆ ನೆಟ್ಟಿಗರು ಸಾಕ್ಷಿ ಪ್ರಕಟಿಸುತ್ತಿದ್ದಂತೆ ಬಾಲಕೃಷ್ಣ ಅವರ ಬಗೆಗಿನ ನಾನಾ ಮಾಹಿತಿಗಳು ಹೊರಬಿದ್ದಿವೆ.

ವಿಚಿತ್ರಾ ಅವರಿಗಿಂತಲೂ ಮೊದಲು ನಟಿ ರಾಧಿಕಾ ಆಪ್ಟೆ ಕೂಡ ಸಂದರ್ಶನವೊಂದರಲ್ಲಿ ಬಾಲಕೃಷ್ಣ ಜೊತೆ ನಟಿಸುವಾಗ ತಮಗಾದ ಕಹಿ ಅನುಭವದ ಬಗ್ಗೆ ಮಾತನಾಡಿದ್ದರು.  ಮೊದಲ ದಿನ ನಾನು ಚಿತ್ರೀಕರಣಕ್ಕೆ ಹೋದಾಗ ಟಾಪ್ ಹೀರೋ ನನ್ನನ್ನು ನೋಡಿ ಕಾಲು ತಟ್ಟಿದ್ದರು. ನನಗೆ ಅದನ್ನು ಒಪ್ಪಿಕೊಳ್ಳಲಾಗಲಿಲ್ಲ. ತಕ್ಷಣ ಎದ್ದು ಬಂದು ಸ್ಥಳದಲ್ಲೇ ಗದರಿಸಿದೆ. ಇನ್ನು ಮುಂದೆ ಈ ರೀತಿ ಮಾಡಬಾರದು ಎಂದು ಎಲ್ಲ ಜೂನಿಯರ್ ಆರ್ಟಿಸ್ಟ್‌ಗಳಿಗೆ ಎಚ್ಚರಿಕೆ ನೀಡಿದ್ದೆ ಎಂದಿದ್ದರು. ಅದರ ಹೊರತಾಗಿಯೂ ತೆಲುಗು ಚಿತ್ರರಂಗದಲ್ಲಿ ಪಿತೃಪ್ರಭುತ್ವ ತುಂಬಿದೆ. ಒಮ್ಮೆ ಅವರು ನನಗೆ ಕರೆ ಮಾಡಿ ಬೆನ್ನು ಉಜ್ಜಬೇಕಾದರೆ ನಿನ್ನನ್ನು ರೂಮಿಗೆ ಕರೆಯುತ್ತೇನೆ ಎಂದರು. ನನಗೆ ತುಂಬಾ ವಿಚಿತ್ರ ಎನಿಸಿತ್ತು ಎಂದಿದ್ದ ನಟಿ, ಇದೇ ಸಂದರ್ಭದಲ್ಲಿ ನಟ ರಜನೀಕಾಂತ್​ ಅವರ ವ್ಯಕ್ತಿತ್ವದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು.  ರಜನಿಕಾಂತ್ ಜೊತೆ ನಟಿಸುವಾಗಿ ತುಂಬಾ ಕಂಫರ್ಟ್​ ಎನಿಸುತ್ತಿತ್ತು. ಅವರಿಗಿಂತಲೂ  ಉತ್ತಮ ವ್ಯಕ್ತಿ ಎಂದಿಗೂ ಇರಲು ಸಾಧ್ಯವೇ ಇಲ್ಲ ಎಂದಿದ್ದಾರೆ. 

ಆ ಹೀರೋ ಅಂದು ಮಲಗಲು ಕರೆದ, ಮುಂದಾದದ್ದು ಭಯಾನಕ! ಬಿಗ್​ಬಾಸ್​ ಸ್ಪರ್ಧಿ, ನಟಿ ಬಿಚ್ಚಿಟ್ಟ ಕರಾಳ ನೆನಪು

ಸಿನಿಮಾ ಒಂದರಲ್ಲಿ ಯಾವುದಾದರೂ ಪಾತ್ರ ಹಿಟ್ ಆದರೆ ಸಾಕು ಹೀರೋ ಹೀರೋಯಿನ್‌ಗೆ ಅಂತಹ ಪಾತ್ರಗಳೇ ಹೆಚ್ಚಾಗಿ ಹುಡುಕಿಕೊಂಡು ಬರುತ್ತಿರುತ್ತವೆ. ಆ ರೀತಿ ತಾನು ನಟಿಸಿದ ಎರಡು ಸಿನಿಮಾಗಳಲ್ಲಿ ಸೆಕ್ಸ್​ ಸನ್ನಿವೇಶಗಳು ಇರುವ ಪಾತ್ರಗಳಲ್ಲಿ ನಟಿಸಿದ ಕಾರಣ ಈಗ ಸೆಕ್ಸ್​ ಕಾಮಿಡಿ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಮಾತ್ರ ನೀಡುತ್ತಿದ್ದರು ಎಂದಿದ್ದರು ನಟಿ ರಾಧಿಕಾ.  ಇತ್ತೀಚೆಗೆ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ನೀಡುವ ಯಾವುದೇ ಪಾತ್ರದಲ್ಲಿ ರಾಧಿಕಾ ಬೋಲ್ಡ್ ಆಗಿ ನಟಿಸುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ಕೆಲವು ಚಿತ್ರಗಳಲ್ಲಿ ಬೆತ್ತಲೆಯಾಗಿಯೂ ನಟಿಸಿದ್ದಾರೆ. ಅಂತೆಯೇ ಅವರ ಎಲ್ಲ ಇಂಟಿಮೇಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿ ಭಾರೀ ವಿವಾದವನ್ನು ಸೃಷ್ಟಿಸಿದ್ದವು. ಇದರ ಜೊತೆಗೆ ಅವರು ಆಗಾಗ ತೆಗೆಯುವ ಫೋಟೋ, ವಿಡಿಯೋಗಳೆಲ್ಲ ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.


ಅಂದಹಾಗೆ ನಟಿ ರಾಧಿಕಾ ಅಪ್ಟೇ  ವೆಲ್ಲೂರು ಜಿಲ್ಲೆಯವರು. ವಾವ್​​! ಲೈಫ್ ಹೋ ತೋ ಐಸಿ! ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆಗೆ ರಾಧಿಕಾ ಪದಾರ್ಪಣೆ ಮಾಡಿದರು. 2012 ರಲ್ಲಿ ಪ್ರಕಾಶ್​ ರಾಜ್​ ಅಭಿನಯದ ಧೋನಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ 2013ರಲ್ಲಿ ಕಾರ್ತಿ, ಕಾಜಲ್ ಅಗರ್ವಾಲ್, ಸಂತಾನಂ, ಪ್ರಭು ಮತ್ತು ಶರಣ್ಯ ಅಭಿನಯದ ಆಲ್ ಇನ್ ಆಲ್ ಆಖೋ ರಾಜ ಚಿತ್ರದಲ್ಲಿ ನಟಿಸಿದರು. ಬಳಿಕ ಸೂಪರ್​ ಸ್ಟಾರ್​ ರಜನಿಕಾಂತ್ ಅಭಿನಯದ 2014 ರಲ್ಲಿ ಬಿಡುಗಡೆಯಾದ ವೆಟ್ರಿ ಸೆಲ್ವನ್ ಅವರ ಕಬಾಲಿಯಲ್ಲಿ ನಟಿಸಿದರು. ಕಬಾಲಿ ಚಿತ್ರದಲ್ಲಿ ರಾಧಿಕಾ ಅವರು ರಜನಿ ಎದುರು ನಟಿಸಿದ್ದರು.   ತಮಿಳಿನ ಚಿತ್ರಂ ಪೆಸುತಡಿ 2 ನಲ್ಲಿ ನಟಿಸಿದರು. ಇದಾದ ಬಳಿಕ ತಮಿಳಿನ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೆ, ಬಾಲಿವುಡ್, ಹಾಲಿವುಡ್ ನಂತಹ ಪರಭಾಷೆಯ ಚಿತ್ರಗಳತ್ತ ರಾಧಿಕಾರ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದಲ್ಲದೆ, ಅವರು ತಮಿಳು ಭಾಷೆಯಲ್ಲಿ ಮಾತ್ರವಲ್ಲದೆ ಹಿಂದಿ, ಬೆಂಗಾಲಿ, ಮರಾಠಿ, ಮಲಯಾಳಂ, ತೆಲುಗು ಮುಂತಾದ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.

ಬಿಗ್​ಬಾಸ್​ಗೆ ಕಾಂಟ್ರವರ್ಸಿ ಜೋಡಿ ರಾಖಿ- ಆದಿಲ್​ ಖಾನ್​ ಎಂಟ್ರಿ? ನಟಿ ಹೇಳಿದ್ದೇನು ನೋಡಿ...

Follow Us:
Download App:
  • android
  • ios