Asianet Suvarna News Asianet Suvarna News

Panvel Farm House: 80 ಕೋಟಿ ಬೆಲೆಯ ಸಲ್ಮಾನ್ ಫಾರ್ಮ್ ಹೌಸ್ ಹೇಗಿದೆ ಗೊತ್ತಾ?

ಬಾಲಿವುಡ್‌ ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚ್ಯುಲರ್ ಸಲ್ಮಾನ್‌ ಖಾನ್‌ ಗೆ ನವೀ ಮುಂಬೈ ಸಮೀಪ ಫಾರ್ಮ್ ಹೌಸ್‌ ಇದೆ. ಇಲ್ಲೇ ಮೊನ್ನೆ ಮೊನ್ನೆ ಅವರು ಹಾವು ಕಚ್ಚಿಸಿಕೊಂಡಿದ್ದು. ಸುಮಾರು 80 ಕೋಟಿ ಬೆಲೆ ಬಾಳುವ ಆ ಫಾರ್ಮ್ ಹೌಸ್ ಹೇಗಿದೆ ಗೊತ್ತಾ?

Let us walk through the Luxurious Panvel Farm house of Salman Khan
Author
Bengaluru, First Published Jan 15, 2022, 5:29 PM IST

ಬಾಲಿವುಡ್‌ (Bollywood) ನಟ ಸಲ್ಮಾನ್‌ ಖಾನ್‌ (Salman Khan) ಗೆ ಈಗ 56ರ ಹರೆಯ. ಮೂರು ದಶಕಗಳಿಗೂ ಹೆಚ್ಚು ಕಾಲ ಬಾಲಿವುಡ್‌ನಲ್ಲಿ ಹವಾ ಸೃಷ್ಟಿಸಿದ ನಟ. ಈಗಲೂ ಅವರ ಖದರ್ ಹಾಗೇ ಇದೆ. ಈ ಮೂರು ಚಿಲ್ರೆ ದಶಕಗಳಲ್ಲಿ ಸಲ್ಮಾನ್‌ ಖಾನ್ ದುಡಿದ ಕೋಟ್ಯಂತರ ರೂ. ಹಣ ಎಲ್ಲಿ ಹೋಯ್ತು? ಬರೀ ಐಷಾರಾಮಿ ಜೀವನ, ಮೋಜು ಮಸ್ತಿಗೇ ಸಲ್ಲು ಬಾಯ್ ಇದ್ದಬದ್ದ ಹಣವನ್ನೆಲ್ಲ ಖರ್ಚು ಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಬರಬಹುದು. ಲೈಫ್‌ನ ಸಖತ್ ಎನ್‌ಜಾಯ್‌ ಮಾಡುವ ಸಲ್ಲು ಭಾಯ್‌ ಬರೀ ಮೋಜಿಗಷ್ಟೇ ಹಣ ವ್ಯಯ ಮಾಡಿಲ್ಲ. ಜೊತೆಗೆ ತಮ್ಮ ಪ್ರೀತಿಯ ಜಾಗಕ್ಕೂ ಸಾಕಷ್ಟು ಹಣ ಸುರಿದಿದ್ದಾರೆ. ಯಾವುದು ಆ ಪ್ರೀತಿಯ ಜಾಗ ಅನ್ನೋದಕ್ಕೆ ಇಲ್ಲಿದೆ ಉತ್ತರ. 

ನವೀ ಮುಂಬೈ ಸಮೀಪ ಪಾನ್ವೆಲ್ (Panwel) ಎಂಬ ಪ್ರದೇಶ ಇದೆ. ಮಹಾರಾಷ್ಟ್ರದ ರಾಯ್‌ಗಡ ಜಿಲ್ಲೆಯಲ್ಲಿರೋ ಪಟ್ಟಣವಿದು. ಮುಂಬೈ (Mumbai) ನಿಂದ ಜಸ್ಟ್‌ 35 ಕಿಮೀ ದೂರ. ಅಂದ್ರೆ ಮುಂಬೈ ಸಿಟಿಯಿಂದ ಒಂದು ಗಂಟೆ ಕಾರು ಓಡಿಸಿದ್ರೆ ಈ ಜಾಗದಲ್ಲಿರಬಹುದು. ಗಾದಿ ನದಿಯ ದಂಡೆಯ ಮೇಲೆ ಈ ಊರಿದೆ. ಈ ಪಟ್ಟಣದ ಬಗ್ಗೆ ಯಾಕಿಷ್ಟು ವಿವರ ಅಂದರೆ ಸಲ್ಮಾನ್ ಖಾನ್‌ ಅವರ ಇಷ್ಟದ ಜಾಗ ಫಾರ್ಮ್ ಹೌಸ್‌ ಇರೋದು ಈ ಪ್ರದೇಶದಲ್ಲೇ. ದಬಾಂಗ್‌ (Dabaang) ಸ್ಟಾರ್ ಸಲ್ಮಾನ್‌ ಖಾನ್‌ಗೆ ಈ ಫಾರ್ಮ್‌ ಹೌಸ್‌ ಅಂದರೆ ಭಲೇ ಅಚ್ಚುಮೆಚ್ಚು. ತನ್ನ ಪ್ರೀತಿಯ ತಂಗಿ ಅರ್ಪಿತಾ ಹೆಸರನ್ನ ಈ ಫಾರ್ಮ್ ಹೌಸ್‌ಗೆ ಇಟ್ಟಿದ್ದಾರೆ ಸಲ್ಲುಭಾಯ್‌. 

Let us walk through the Luxurious Panvel Farm house of Salman Khan

ಗಂಡ ಹೆಂಡತಿ ನಡುವೆ ಏನೇ ನಡೆದರೂ ಪರ್ಸನಲ್, ಚೈತನ್ಯಾ ಶಾಂತವಾಗಿದ್ದ: Nagarjuna Akkineni

ಸುಮಾರು 150 ಎಕರೆ ಪ್ರದೇಶದಲ್ಲಿ ಈ ಫಾರ್ಮ್‌ಹೌಸ್‌ ಇದೆ. ಬಹಳ ವಿಶಾಲವಾಗಿರುವ ಈ ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್‌ಗೆ ಸೇರಿದ ಮೂರು ಬಂಗಲೆಗಳಿವೆ. ಸ್ವಿಮ್ಮಿಂಗ್‌ ಪೂಲ್‌, (Swimming pool) ಜಿಮ್‌ (Gym), ಇನ್ನೂ ಅನೇಕ ಸೌಲಭ್ಯಗಳು ಈ ಫಾರ್ಮ್‌ಹೌಸ್‌ನಲ್ಲಿವೆ. ಸಲ್ಮಾನ್‌ ಖಾನ್‌ ಅವರ ಈ ಫಾರ್ಮ್‌ ಹೌಸ್‌ನ ಇನ್ನೊಂದು ವಿಶೇಷ ಅಂದರೆ ಇಲ್ಲಿರುವ ಕುದುರೆಗಳು.

Let us walk through the Luxurious Panvel Farm house of Salman Khan

ಸುಮಾರು ಐದು ಕುದುರೆಗಳನ್ನು ಇಲ್ಲಿ ಸಾಕುತ್ತಾರೆ. ಅವಕ್ಕಾಗಿ ಸಪರೇಟ್‌ ಲಾಯ, ಅವುಗಳ ಆರೈಕೆಗೆ ಪ್ರತ್ಯೇಕ ಸ್ಥಳ ಎಲ್ಲ ಇಲ್ಲಿದೆ. ಸಲ್ಮಾನ್‌ ಖಾನ್‌ ತನ್ನ ಪ್ರಾಪರ್ಟಿಗೆ ರೌಂಡ್‌ ಹೊಡೆಯೋದು ಈ ಕುದುರೆಗಳ ಮೂಲಕವೇ. ಸುಮಾರು 80 ಕೋಟಿ ಬೆಲೆಬಾಳುವ ಈ ಜಾಗದ ಫೋಟೋಗಳನ್ನು ಸಲ್ಮಾನ್‌ ಖಾನ್‌ ಆಗಾಗ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡ್ತಾನೇ ಇರ್ತಾರೆ. 

Pushpa Success: ಸಕ್ಸಸ್ ನಂತ್ರ 3 ಕೋಟಿ ಕೇಳಿದ ರಶ್ಮಿಕಾ, ಕೆಲವು ಸೀನ್ ರೀಶೂಟ್

ಇದನ್ನೊಂಥರ ಸಲ್ಮಾನ್‌ ಖಾನ್‌ ಅವರ ಇನ್ನೊಂದು ಕಾರ್ಯಕ್ಷೇತ್ರ ಅನ್ನಬಹುದೇನೋ? ಲಾಕ್‌ಡೌನ್‌ ಸಮಯದಲ್ಲೆಲ್ಲ ಸಲ್ಮಾನ್‌ ಖಾನ್‌ ಇಲ್ಲೇ ಇದ್ದರು.

Let us walk through the Luxurious Panvel Farm house of Salman Khan

ಮನಸ್ಸು ಬಂದಾಗ ಮಣ್ಣಿನಲ್ಲಿ ಕೆಲಸ ಮಾಡುತ್ತಾ, ಎದುರಿರುವ ಪರ್ವತವನ್ನು ನೋಡುತ್ತಾ, ಟ್ರಾಕ್ಟರ್ ಓಡಿಸುತ್ತಾ, ಕುದುರೆ ಸವಾರಿ ಮಾಡುತ್ತಾ, ಸಂಜೆ ಹೊತ್ತಿಗೆ ಕಾಕ್‌ಟೇಲ್‌ ಹೀರುತ್ತಾ ನಿಸರ್ಗ ಸೌಂದರ್ಯ ಸವಿಯುತ್ತಾ ಸಮಯ ಕಳೆದಿದ್ದರು. ಅವರ ಕೆಲವೊಂದು ಬರ್ತ್‌ಡೇ ಆಚರಣೆಯೂ ಇಲ್ಲೇ ಆಗಿತ್ತು. ಅದೇ ರೀತಿ ಅನೇಕ ಪಾರ್ಟಿ, ಫಂಕ್ಷನ್‌ಗಳನ್ನು ಸಲ್ಮಾನ್‌ ಇಲ್ಲಿ ನಡೆಸ್ತಿದ್ದರು. ಜಾಕ್ವಲಿನ್‌ ಸೇರಿದಂತೆ ಅವರ ಅನೇಕ ಗರ್ಲ್‌ಫ್ರೆಂಡ್ಸ್‌ ಜೊತೆಗೆ ಇಲ್ಲಿ ಸಮಯ ಕಳೆದಿದ್ದರು. 

Breakup Rumours: 40ರ ನಂತರದ ಲವ್ ಬಗ್ಗೆ ಮಲೈಕಾ ಮಾತು

ಸಲ್ಮಾನ್‌ ಖಾನ್‌ ಅವರ ಈ ಫಾರ್ಮ್‌ ಹೌಸ್‌ ಇರುವುದು ತಂಗಿ ಅರ್ಪಿತಾ ಹೆಸರಲ್ಲಿ. ಆಕೆಯೂ ತನ್ನ ಪತಿ, ಮಗುವಿನ ಜೊತೆಗೆ ಆಗಾಗ ಇಲ್ಲಿ ಬರೋದಿದೆ. ಸಲ್ಮಾನ್‌ ಅವರೇ ಕೆಲವೊಮ್ಮೆ ತಂಗಿಯ ಫ್ಯಾಮಿಲಿಯನ್ನು ಇಲ್ಲಿ ಕರೆತರುವುದಿದೆ. ಕೆಲ ಸಮಯದ ಹಿಂದೆ ತಂಗಿ ಮಗುವನ್ನೆತ್ತಿಕೊಂಡು ಕೋತಿಗೆ ಕಣ್ಣು ತಿನ್ನಿಸೋ ವೀಡಿಯೋವನ್ನು ಸಲ್ಮಾನ್‌ ಶೇರ್ ಮಾಡಿದ್ದರು.

Let us walk through the Luxurious Panvel Farm house of Salman Khan

ಇವೆಲ್ಲದರ ಜೊತೆಗೆ ಇತ್ತೀಚೆಗೆ ಸಲ್ಮಾನ್‌ ಖಾನ್‌ ಹಾವಿಂದ ಕಚ್ಚಿಸಿಕೊಂಡಿದ್ದೂ ಇಲ್ಲೇ. ಹೀಗೆ ನೂರಾರು ಎಕರೆ ವಿಸ್ತೀರ್ಣದ ಈ ಫಾರ್ಮ್‌ ಹೌಸ್‌ ಸಲ್ಮಾನ್‌ ಅವರ ವೈಭವದ ಬದುಕಿಗೂ ಸಾಕ್ಷಿಯಂತಿದೆ.

Follow Us:
Download App:
  • android
  • ios