Asianet Suvarna News Asianet Suvarna News

ಗಂಡ ಹೆಂಡತಿ ನಡುವೆ ಏನೇ ನಡೆದರೂ ಪರ್ಸನಲ್, ಚೈತನ್ಯಾ ಶಾಂತವಾಗಿದ್ದ: Nagarjuna Akkineni

ನಿಚ್ಛೇದನ ಬಗ್ಗೆ ಮೌನ ಮುರಿದ ಅಕ್ಕಿನೇನಿ ಕುಟುಂಬ. ನಾಗ ಚೈತನ್ಯ ತಾಳ್ಮೆ ಮೆಚ್ಚಿಕೊಂಡ ತಂದೆ.... 

Tollywood Nagarjuna first reaction to Son Naga Chaitanya and Samantha separation vcs
Author
Bangalore, First Published Jan 15, 2022, 1:57 PM IST

ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಮತ್ತು ನಾಗ ಚೈತನ್ಯ (Naga Chaitanya) ಒಟ್ಟಾಗಿ ನಟಿಸಿರುವ ಬಂಗಾರರಾಜು ಸಿನಿಮಾ ರಿಲೀಸ್‌ ಆಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಓಮಿಕ್ರೋನ್‌ (Omicorn) ಭಯದ ನಡುವೆಯೂ ನಿರ್ದೆಶಕ ಕಲ್ಯಾಣ ಕೃಷ್ಣ (Kalyan Krishna) ಸಿನಿಮಾ ಬಿಡುಗಡೆ ಮಾಡಿರುವುದಕ್ಕೆ ಟಾಲಿವುಡ್‌ ಶಾಕ್ ಆಗಿದೆ. ಈ ಚಿತ್ರದಲ್ಲಿ ರಮ್ಯಾ ಕೃಷ್ಣ (Ramya Krishna) ಮತ್ತು ಕೃತಿ ಶೆಟ್ಟಿ (Kriti Shetty) ನಟಿಸಿದ್ದಾರೆ. ದೊಡ್ಡ ಸ್ಟಾರ್‌ಗಳು ಒಟ್ಟಾಗಿ ಕಾಣಿಸಿಕೊಂಡಿರುವ ಸಿನಿಮಾ ಇದಾಗಿದ್ದು ಪ್ರಚಾರದ  ವೇಳೆ ನಾಗಾರ್ಜುನ ಮತ್ತು ಚೈತನ್ಯ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 

' ತುಂಬಾ ಭಾರವಾದ ಮನಸ್ಸಿನಿಂದ ಈ ಮಾತುಗಳನ್ನು ಹೇಳುತ್ತಿರುವೆ. ಸ್ಯಾಮ್ (Samantha) ಮತ್ತು ಚೈತನ್ಯ ನಡುವೆ ಈ ರೀತಿ ನಡೆಯಬಾರದಿತ್ತು ಆದರೂ ನಡೆದಿದೆ. ಗಂಡ ಹೆಂಡತಿ ನಡುವೆ ಏನೇ ನಡೆದರೂ ಅದು ತುಂಬಾನೇ ಪರ್ಸನಲ್. ಸ್ಯಾಮ್ ಮತ್ತು ಚೈತನ್ಯ ಇಬ್ಬರೂ ನನ್ನ ಮನಸ್ಸಿಗೆ ತುಂಬಾನೇ ಹತ್ತಿರವಾಗಿರುವ ವ್ಯಕ್ತಿಗಳು. ಸಮಂತಾ ಜೊತೆ ಕಳೆದಿರುವ ಪ್ರತಿಯೊಂದು ಕ್ಷಣಗಳನ್ನು ನಾವು ಎಂಜಾಯ್ ಮಾಡಿ ನೆನಪಿಸಿಕೊಳ್ಳುತ್ತೇವೆ. ದೇವರು ಅವರಿಗೆ ಶಕ್ತಿ ಕೊಟ್ಟು ಕಾಪಾಡಲಿ' ಎಂದು ನಾಗಾರ್ಜುನ ಮಾತನಾಡಿದ್ದಾರೆ. 

Tollywood Nagarjuna first reaction to Son Naga Chaitanya and Samantha separation vcs

'ಈ ಸಂದರ್ಭದಲ್ಲಿ ಚೈತನ್ಯಾ ಎಷ್ಟು ಶಾಂತವಾಗಿದ್ದ ಅಂದ್ರೆ ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಯಾವ ಕ್ಷಣದಲ್ಲೂ ಅವನು ಪ್ರವೋಕ್ (Provoke) ಅಗಿಲ್ಲ ಒಂದು ಪದವನ್ನು ಮಾತನಾಡಿಲ್ಲ. ನನ್ನ ತಂದೆ ರೀತಿ ನಾನು ಕೂಡ ಚೈತನ್ಯಾ ಬಗ್ಗೆ ತಲೆ ಕೆಡಿಸಿಕೊಂಡಿದ್ದೆ. ಆದರೆ ನಾನು ಅವನ ಬಗ್ಗೆ ಚಿಂತಿಸುವುದಕ್ಕಿಂತ ಅವನು ನನ್ನ ಬಗ್ಗೆ ಚಿಂತಿಸುತ್ತಿದ್ದಾನೆ. ಅವನು ಬಂದು ತಂದೆ ನೀವು ಓಕೆ ನಾ? ಎಂದು ಕೇಳುತ್ತಿದ್ದ ನಾನು ಅವನಿಗೆ ಹೇಳಿದೆ ಇದು ನೀನು ಕೇಳುವುದಲ್ಲ ನಾನು ಕೇಳಬೇಕು' ಎಂದು ಖಾಸಗಿ ಸಂದರ್ಶನದಲ್ಲಿ ನಾಗಾರ್ಜುನ್ ಮಾತನಾಡಿದ್ದಾರೆ. 

ಬಂಗಾರರಾಜು ಸಿನಿಮಾ ಪ್ರಚಾರ ವೇಳೆಯೇ ಮೊದಲ ಬಾರಿ ನಾಗ ಚೈತನ್ಯ ಕೂಡ ವಿಚ್ಛೇದನ ಬಗ್ಗೆ ಮಾತನಾಡಿದ್ದು. 'ಸಪರೇಟ್ (Seperation) ಅಗುವುದು ಓಕೆ. ನಮ್ಮ ವೈಯಕ್ತಿಕ ಸಂತೋಷಕ್ಕೆ ನಾವು ಒಬ್ಬರಿಗೊಬ್ಬರು ತೆಗೆದುಕೊಂಡಿರುವ ನಿರ್ಧಾರವಿದು. ಸಮಂತಾ ಸಂತೋಷವಾಗಿದ್ದಾಳೆ, ಅಂದ್ರೆ ನಾನೂ ಸಂತೋಷವಾಗಿರುವೆ. ಇಂತಹ ಸಂದರ್ಭಗಳಲ್ಲಿ ವಿಚ್ಚೇದನ ಪಡೆದುಕೊಳ್ಳುವುದೇ ಬೆಸ್ಟ್ ನಿರ್ಧಾರ,' ಎಂದು ನಾಗ ಚೈತನ್ಯ ಹೇಳಿದ್ದಾರೆ. 

ಸಮಂತಾಗೆ Divorce: ಮೌನ ಮುರಿದ ನಟ Naga Chaitanya!

'ತುಂಬಾ ದಿನಗಳ ಮಾತುಕತೆ ನಂತರ ಸಮಂತಾ ಮತ್ತು ನಾನು ನಮ್ಮದೇ ಜೀವನದ ಹಾದಿಯಲ್ಲಿ ನಡೆಯಬೇಕೆಂದು ದೂರ ಆಗುತ್ತಿರುವೆವು.  ದಶಕಗಳಿಂದ ನಾವಿಬ್ಬರೂ ಸ್ನೇಹಿತರಾಗಿರುವುದಕ್ಕೆ (Friendship) ಸಂತೋಷವಿದೆ. ನಮ್ಮ ನಡುವೆ ಸ್ಪೆಷಲ್ ಬಾಂಡ್ ಇರುವುದಕ್ಕೆ ಕಾರಣವೇ ಈ ಸ್ನೇಹ.  ನಮ್ಮ ಕಷ್ಟದ ಸಮಯದಲ್ಲಿ ನಮ್ಮ ಜೊತೆಗೆ ನಮ್ಮ ಅಭಿಮಾನಿಗಳು, ಸ್ನೇಹಿತರು ಮತ್ತು ಮಾಧ್ಯಮ ಮಿತ್ರರು ಜೊತೆಗೆ ನಿಲ್ಲಬೇಕು ಎಂದು ಕೇಳಿಕೊಳ್ಳುವೆ,' ಎಂದು ನಾಗ ಚೈತನ್ಯ ಹಾಗೂ ಸಮಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ, ತಾವಿಬ್ಬರೂ ಬೇರ್ಪಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದರು.

' ಬಂಗಾರರಾಜು ಸೂಪರ್ ಹಿಟ್ ಸಿನಿಮಾ. ಸಂಕ್ರಾಂತಿ ಹಬ್ಬದ ದಿನ ನಿಮ್ಮ ಮುಂದೆ ನಾವು ಬರುತ್ತೇವೆ ಎಂದು ಮಾತು ಕೊಟ್ಟಿದ್ದೆ ಅದರಂತೆ ನಾವು ಬಂದಿದ್ದೀವಿ. ನಾಗ ಚೈತನ್ಯಾಗೆ ಪ್ರಮುಖ ಪಾತ್ರ ಕೊಡಲು ಕಾರಣವಿದೆ. ಇಬ್ಬರು ಸ್ಟಾರ್ ನಟರು ಯಾರು ನಿಜ ಜೀವನದಲ್ಲಿ ತಂದೆ ಮಗ ಆಗಿರುತ್ತಾರೆ ಅವರನ್ನು ಆನ್‌ಸ್ಕ್ರೀನ್‌ನಲ್ಲಿ ಡಿಫರೆಂಟ್ ಆಗಿ ತೋರಿಸಲಾಗುತ್ತದೆ. ಇದು ತಮಿಳು ಸಿನಿಮಾಗಳಲ್ಲಿ ವರ್ಕೌಟ್ ಆಗುತ್ತದೆ. ರಮ್ಯಾ ಕೃಷ್ಣ ಜೊತೆ ಕೆಲಸ ಮಾಡುವುದಕ್ಕೆ ನಾನು ತುಂಬಾನೇ ಎಂಜಾಯ್ ಮಾಡುತ್ತೇನೆ' ಎಂದಿದ್ದಾರೆ ನಾಗಾರ್ಜುನ.

Follow Us:
Download App:
  • android
  • ios