ಮತ್ತೆ ಸಂಕಷ್ಟದಲ್ಲಿ ಸಿಲುಕಿಕೊಂಡು ಉರ್ಫಿ. ಆಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ. 

ಬಾಲಿವುಡ್ ನಟಿ, ಬಿಗ್ ಬಾಸ್ ಸ್ಪರ್ಧಿ ಹಾಗೂ ಸೋಷಿಯಲ್ ಮೀಡಿಯಾ ಇನ್‌ಫ್ಲೂಯನ್ಸರ್ ಉರ್ಫಿ ಜಾವೇದ್ ವಿರುದ್ಧ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ನಡವಳಿಕೆ ತೋರುತ್ತಿದ್ದಾರೆಂದು ಆಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲಾಗಿದೆ. ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ ದಾಖಲಿಸಿರುವುದಾಗಿ ತಿಳಿದು ಬಂದಿದೆ. 'ಎರಡು ದಿನಗಳ ಹಿಂದೆ ದೂರಿನ ಪತ್ರ ಕೊಟ್ಟಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ. 

ಹೌದು! ಯಾರೂ ಕಲ್ಪನೆ ಮಾಡಿಕೊಳ್ಳದ ಡಿಸೈನ್‌ಗಳನ್ನು ಕ್ರಿಯೇಟ್ ಮಾಡುವ ಉರ್ಫಿ ಸಾರ್ವಜನಿಕ ಸ್ಥಳಗಳಲ್ಲಿ ಧರಿಸುತ್ತಿದ್ದಾರೆ ಇದರಿಂದ ಪುಟ್ಟ ಮಕ್ಕಳ ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತಿದೆ ಹಾಗೂ ಪ್ರಚೋದಿಸುತ್ತದೆ ಎನ್ನುವ ಕಾರಣ ದೂರು ನೀಡಲಾಗಿದೆ. ಈ ಹಿಂದೆ ಎಫ್‌ಐಆರ್‌ ದಾಖಲಿಸುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾಗಿತ್ತು ಆದರೆ ಯಾವುದಕ್ಕೂ ಕೇರ್ ಮಾಡದೆ ಉರ್ಫಿ ಪ್ಯಾಪರಾಜಿಗಳ ಬಳಿ ಉತ್ತರ ಕೊಟ್ಟು ಗಾಳಿ ಮಾತುಗಳಿಗೆ ಬ್ರೇಕ್ ಹಾಕಿದ್ದರು. ಮತ್ತೊಂದು ಸಂಕಷ್ಟ ಎದುರಾಗಿದೆ, ವಕೀಲ ಕಾಶಿಫ್‌ ದೂರು ದಾಖಲಿಸಿದ್ದಾರೆ.

ಕೆಲವು ದಿನಗಳ ಹಿಂದೆ ಬಿಕಿನಿ ಧರಿಸಿ ಅದಕ್ಕೆ ಗ್ರೀನ್ ಬಣ್ಣದ ನೆಟ್‌ ಧರಿಸಿ ರಸ್ತೆಗಿಳಿದ ಉರ್ಫಿ ಲುಕ್‌ ನೋಡಿ ನೆಟ್ಟಿಗರು ಶಾಕ್ ಆಗಿದ್ದರು. ಯಾವ ಕಾರ್ಯಕ್ರಮಕ್ಕೆ ಈ ರೀತಿ ಧರಿಸುತ್ತಿದ್ದಾರೆ, ಈ ರೀತಿ ಉಡುಪು ಧರಿಸಿ ಎಲ್ಲಿಗೆ ಹೋಗುತ್ತಿದ್ದಾರೆ ಏನು ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ಹೀಗಾಗಿ ಹೆಸರಲು ಮಾಡಲು ಉರ್ಫಿ ಬೇಕೆಂದು ಈ ರೀತಿ ಡ್ರೆಸ್ ಧರಿಸುತ್ತಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ. 

Urfi Javed ಬೆತ್ತಲಾಗಿ ಬಲೆಯಲ್ಲಿ ಸಿಕ್ಕಾಕೊಂಡ ನಟಿ; ಬಿಡಿಸೋಕೆ ನಾನ್ ರೆಡಿ ಎಂದು ಕಾಲೆಳೆದ ನೆಟ್ಟಿಗರು

Splitsvilla X4 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉರ್ಫಿ ಡ್ರೆಸ್‌ ಬಗ್ಗೆ ಸನ್ನಿ ಲಿಯೋನಿ ಮಾತನಾಡಿದ್ದಾರೆ. 'ಉರ್ಫಿ ನೀವು ಧರಿಸುವ ಬಟ್ಟೆ ಸೂಪರ್ ಅಗಿರುತ್ತದೆ ನನಗೆ ತುಂಬಾನೇ ಇಷ್ಟವಾಗುತ್ತದೆ. ಎಲ್ಲವೂ ಬೀಚ್‌ವೇರ್‌ಗೆ ಸೂಕ್ತವಾಗಿರುತ್ತದೆ' ಎಂದು ಮೆಚ್ಚಿಗೆ ವ್ಯಕ್ತ ಪಡಿಸಿದ್ದರು. ಇದಕ್ಕೆ ಉತ್ತರಿಸಿದ ಉರ್ಫಿ 'ನನ್ನ ಪ್ರತಿಯೊಂದು ಡ್ರೆಸ್‌ ಸ್ಪೆಷಲ್ ಆಗಿರುತ್ತದೆ. ನೀವು ನನ್ನ ಜೊತೆ ಕಾಂಪೀಟ್ ಮಾಡಬಹುದು ಆದರೆ ನನ್ನ ಡ್ರೆಸ್‌ಗಳ ಜೊತೆ ಕಾಂಪೀಟ್ ಮಾಡಲು ಆಗುವುದಿಲ್ಲ. ಯಾರೂ ಕಲ್ಪನೆ ಮಾಡಿಕೊಳ್ಳಲಾಗದ ರೀತಿಯಲ್ಲಿ ನಾನು ಡಿಸೈನ್ ಮಾಡುವೆ' ಎಂದು ಉರ್ಫಿ ಹೇಳಿದ್ದಾರೆ. 

ಚೇಗನ್ ಭಗತ್‌ ವಿರುದ್ಧ ಕಿಡಿ: 

ಉರ್ಫಿ ಮತ್ತು ಚೇತನ್ ಭಗತ್ ವಿರುದ್ಧ ಮಾತಿನ ಸಮರ ನಡೆದಿದೆ. ಲೇಖಕ ಚೇತನ್ ಭಗತ್ ನೀಡಿರುವ ಹೇಳಿಕೆ ಸಂಚಲನ ಮಾಡಿಸಿದ್ದು ಉರ್ಫಿ ಕೆಂಡಕಾರಿದ್ದಾರೆ. ಉರ್ಫಿ ವಿರುದ್ಧ ಚೇತನ್ ಭಗತ್ ಯುವರನ್ನು ದಾರಿ ತಪ್ಪಿಸುತ್ತಾರೆ, ಉರ್ಫಿ ನೋಡಲು ಯುವಕರು ಹೆಚ್ಚು ಮೊಬೈಲ್ ನೋಡುತ್ತಿದ್ದಾರೆ ಎಂದು ಸಂವಾದ ಒಂದರಲ್ಲಿ ಹೇಳಿದ್ದರು. ಚೇತನ್ ಭಗತ್ ಹೇಳಿಕೆಗೆ ಆಕ್ರೋಶ ಹೊರಹಾಕಿರುವ ನಟಿ ಉರ್ಫಿ, ರೇಪ್ ಸಂಸ್ಕೃತಿ ಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದರು. 

'ರೇಪ್ ಸಂಸ್ಕೃತಿ ಪ್ರಚಾರ ಮಾಡುವುದನ್ನು ನಿಲ್ಲಿಸಿ. ಪುರುಷರ ವರ್ತನೆಗೆ ಮಹಿಳೆಯರ ಬಟ್ಟೆಗಳನ್ನು ದೂಷಿಸುವುದನ್ನು ಮೊದಲು ನಿಲ್ಲಿಸಿ 80ರ ದಶಕದ ಚೇತನ್ ಭಗತ್. ನಿಮ್ಮ ಅರ್ಧದಷ್ಟು ವಯಸ್ಸಿನ ಹುಡುಗಿಯರಿಗೆ ನೀವು ಮೆಸೇಜ್ ಮಾಡಿದಾಗ ನಿಮ್ಮನ್ನು ಸೆಳೆದಿದ್ದು ಯಾರು. ಯಾವಾಗಲೂ ಮಹಿಳೆಯರನ್ನು ದೂಷಿಸುತ್ತೀರಿ. ನಿಮ್ಮ ತಪ್ಪುಗಳನ್ನು, ನ್ಯೂನತೆಗಳನ್ನು ಯಾವಾಗಲೂ ಒಪ್ಪಿಕೊಳ್ಳಬೇಡಿ. ನಿಮ್ಮಂತಹ ವ್ಯಕ್ತಿಗಳು ಯುವಕರನ್ನು ದಾರಿ ತಪ್ಪಿಸುತ್ತಿರುವುದು ನಾನಲ್ಲ. ಪುರುಷರು ತಪ್ಪು ಮಾಡಿದಾಗ ಮಹಿಳೆ ಅಥವ ಅವರ ಬಟ್ಟೆಯ ಮೇಲೆ ಹೇಳಿ' ಎಂದು ಸರಿಯಾಗಿ ತಿರುಗೇಟು ನೀಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಉರ್ಫಿ, 'ನಿಮ್ಮಂತದ ಪುರುಷರು ಯಾವಾಗಲೂ ತಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮಹಿಳೆಯರನ್ನು ದೂಷಿಸುತ್ತಾರೆ. ನೀವು ವಿಕೃತಕಾಮಿ ಆದರೆ ಹುಡುಗಿಯರ ತಪ್ಪು ಹೇಗಾಗುತ್ತದೆ. ಅವರು ಧರಿಸುವ ಬಟ್ಟೆಯ ಮೇಲೇಕೆ ಹೇಳುತ್ತೀರಿ.