ಕ್ಯಾಮೆರಾಕ್ಕೆ ಅಡ್ಡ ಬಂದ ವ್ಯಕ್ತಿಯನ್ನು ನಟಿ ಲಕ್ಷ್ಮಿ ಹೀಗೆ ಹೊಡೆಯೋದಾ? ನೆಟ್ಟಿಗರ ಆಕ್ರೋಶ
ನಟಿ ಮಂಚು ಲಕ್ಷ್ಮಿ ಅವರು ಸಂದರ್ಶನ ನೀಡುವ ಸಮಯದಲ್ಲಿ ಕ್ಯಾಮೆರಾಕ್ಕೆ ಅಡ್ಡ ಬಂದ ವ್ಯಕ್ತಿಯನ್ನು ಹೊಡೆದಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಟ ಮೋಹನ್ ಬಾಬು ಮತ್ತು ವಿದ್ಯಾ ದೇವಿ ಅವರ ಪುತ್ರಿ ಲಕ್ಷ್ಮಿ ಮಂಚು ಅವರಿಗೆ ಈಗ 53 ವರ್ಷ ವಯಸ್ಸು. ಆದರೂ ಗ್ಲಾಮರಸ್ ಲುಕ್ ಹಾಗೆಯೇ ಉಳಿಸಿಕೊಂಡವರು. ಕೆಲವೇ ಸಿನಿಮಾ ಮಾಡಿದ್ದರೂ ಮಂಚು ಲಕ್ಷ್ಮಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು ಮತ್ತು ಫಾಲೋವರ್ಸ್ ಇದ್ದಾರೆ. ಇವರು ಹೆಚ್ಚು ಸುದ್ದಿಯಾದದ್ದು ತಮಿಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದವರು ಎಂದು. ಹೆಚ್ಚು ಚಿತ್ರ ಮಾಡಿಲ್ಲವಾದರೂ ವಯಸ್ಸು 50 ದಾಟಿದರೂ ಇನ್ನೂ ಅವರು ತಮ್ಮ ಆಯ್ಕೆಯ ಚಿತ್ರವನ್ನಷ್ಟೇ ಮಾಡುತ್ತಾರೆ. ಸದ್ಯ ಮಂಚು ಲಕ್ಷ್ಮಿ 'ಅಗ್ನಿ ನಕ್ಷತ್ರ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಂಚು ಎಂಟರ್‌ಟೈನ್‌ಮೆಂಟ್ ಮತ್ತು ಶ್ರೀ ಲಕ್ಷ್ಮಿ ಪ್ರಸನ್ನ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮೋಹನ್ ಬಾಬು ಮತ್ತು ಮಂಚು ಲಕ್ಷ್ಮಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದರಲ್ಲಿ ಲಕ್ಷ್ಮಿ ಪವರ್ ಫುಲ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮೋಹನ್ ಬಾಬು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದೀಗ ಇವರ ವಿಷಯ ಹೆಚ್ಚು ಚರ್ಚೆಗೆ ಬಂದದ್ದು ಕೆಲ ದಿನಗಳ ಹಿಂದೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್ ಸಮಾರಂಭ (ದಕ್ಷಿಣ ಭಾರತ ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿ)ದ ಬಳಿಕ. ಈ ಕಾರ್ಯಕ್ರಮದಲ್ಲಿ ಮಂಚು ಲಕ್ಷ್ಮಿ ಕೂಡ ಹಾಜರಿದ್ದರು. ಆ ಸಮಯದಲ್ಲಿ ಅವರ ಸಂದರ್ಶನವೊಂದನ್ನು ನಿರೂಪಕಿ ಮಾಡುತ್ತಿದ್ದರು. ಆಗ ಒಬ್ಬ ವ್ಯಕ್ತಿ ಕ್ಯಾಮರಾಗೆ ಅಡ್ಡಲಾಗಿ ನಡೆದು ಹೋದ. ಇದರಿಂದ ಕೋಪಗೊಂಡ ನಟಿ ಆ ವ್ಯಕ್ತಿಯ ಬೆನ್ನಿಗೆ ಬಾರಿಸಿದ್ದಾರೆ. ಆತ ಅತ್ತ ಹೋದ ಬಳಿಕ ಮತ್ತೊಬ್ಬ ವ್ಯಕ್ತಿ ಕ್ಯಾಮೆರಾಗೆ ಅಡ್ಡ ಬಂದಾಗ ಚೆನ್ನಾಗಿ ಬೈದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲವರು ನಟಿಯ ವಿರುದ್ಧವೇ ಗರಂ ಆಗಿದ್ದಾರೆ. ಕೆಲವರು ಸಂದರ್ಶನ ನಡೆಯುವ ಸಮಯದಲ್ಲಿ ಹೀಗೆ ಕ್ಯಾಮೆರಾಕ್ಕೆ ಅಡ್ಡ ಬರುವುದು ಸರಿಯಲ್ಲ ಎಂದಿದ್ದರೆ, ಇವಳ್ಯಾವ ಸೀಮೆ ನಟಿ ಎಂದು ಹೀಗೆ ಮಾಡಬೇಕು, ಅಷ್ಟಕ್ಕೂ ಜನರು ಓಡಾಡುವ ಜಾಗದಲ್ಲಿ ಇವಳಿಗೆ ಸಂದರ್ಶನ ಕೊಡುವ ಅಗತ್ಯವೇನಿತ್ತು? ಈ ಓವರ್ ಆ್ಯಕ್ಟಿಂಗ್ ಯಾಕೆ ಎಂದಿದ್ದಾರೆ.
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಮಂಚು ಲಕ್ಷ್ಮಿ ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ್ದರು. ಮಂಚು ಲಕ್ಷ್ಮಿ ಅವರು 2012 ರಲ್ಲಿ ಓ ಧೀರುಡು ಚಿತ್ರದ ಪಾತ್ರಕ್ಕಾಗಿ ನಂದಿ ಪ್ರಶಸ್ತಿಯನ್ನು ಪಡೆದರು. ಮಂಚು ಲಕ್ಷ್ಮಿ ಸದ್ಯ ಮಲಯಾಳಂ ಸ್ಟಾರ್ ಮೋಹನ್ ಲಾಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಅಗ್ನಿನಕ್ಷತ್ರಂ ಎಂಬ ಸಿನಿಮಾ ಕೂಡ ತಯಾರಾಗುತ್ತಿದೆ. ಒಂದೆಡೆ ಒಟಿಟಿಯಲ್ಲಿ ಸಿನಿಮಾಗಳ ಜೊತೆ ಸ್ಪೆಷಲ್ ಶೋಗಳನ್ನೂ ಮಾಡುತ್ತಿದ್ದಾರೆ.
10 ಸೈಮಾ ಪ್ರಶಸ್ತಿ ಬಾಚಿಕೊಂಡ ಕಾಂತಾರ: ಜಾಲತಾಣದಲ್ಲಿ ನಟ ರಿಷಬ್ ಶೆಟ್ಟಿ ಪೋಸ್ಟ್
ಲಕ್ಷ್ಮಿ ಅವರ ವೈಯಕ್ತಿಕ ಜೀವನದ ಕುರಿತು ಹೇಳುವುದಾದರೆ, ಹೈದರಾಬಾದ್‌ನ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಓದುವಾದ ಸ್ನೇಹಿತನನ್ನೇ ಪ್ರೀತಿಸಿ ಮದುವೆಯಾದರು. ಕೆಲವೊಂದು ಕಾರಣಗಳಿಂದ ಮದುವೆ ಆದ ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದುಕೊಂಡರು. ನಟನೆಯಲ್ಲಿ ತರಬೇತಿ ಪಡೆಯಬೇಕೆಂದು ಅಮೆರಿಕಕ್ಕೆ ಹಾರಿದ ಲಕ್ಷ್ಮಿ, ಅಲ್ಲಿನ ಎನ್‌ಆರ್‌ಐ ಶ್ರೀನಿವಾಸನ್ ಅವರನ್ನು ಪ್ರೀತಿಸಿ, ಎರಡನೇ ಸಲ ಮದುವೆಯಾದರು. ತಮಿಳು ಚಿತ್ರರಂಗದಲ್ಲಿ Surrogacy ಮೂಲಕ ಮಗು ಪಡೆದುಕೊಂಡ ಮೊದಲ ನಟಿಯೇ ಲಕ್ಷ್ಮಿ ಮಂಚು. ಆರೋಗ್ಯ ಸಮಸ್ಯೆಗಳಿಂದ ಮಗು ಮಾಡಿಕೊಳ್ಳಲಾಗದೇ ಕಷ್ಟ ಅನುಭವಿಸುತ್ತಿದ್ದವರಿಗೆ ಲಕ್ಷ್ಮಿ ಮಾದರಿ ಆದರು. ಕಿರುತೆರೆ ರಿಯಾಲಿಟಿ ಶೋಗಳ ಜೊತೆ ತಂದೆ ನಿರ್ಮಾಣ ಮಾಡಿದ ಸಿನಿಮಾಗಳಲ್ಲಿ ಲಕ್ಷ್ಮಿ ನಟಿಸಿದ್ದರು. ಆಂಧ್ರ ಪ್ರದೇಶ ಸರ್ಕಾರ ಇವರಿಗೆ ಪ್ರತಿಷ್ಠಿತ ನಂದಿ ಅವಾರ್ಡ್ ನೀಡಿ ಗೌರವಿಸಿದೆ. ಸ್ವಂತ ಕಾಲಿನ ಮೇಲಿ ನಿಲ್ಲಬೇಕು ಎಂದು ನಿರ್ಮಾಣ ಸಂಸ್ಥೆ ತೆರೆದಿದ್ದರು. ಮಂಚು ಎಂಟರ್ಟೈನ್‌ಮೆಂಟ್ಸ್ ಮೂಲಕ ದೊಂಗಾಟ, ಗುಂಡೆಳೋ ಗೋದಾವರಿ ಸೇರಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.