ನಟಿ ರಮ್ಯಾ ಕೃಷ್ಣ ಅವರು ತಮ್ಮ ವೈಯಕ್ತಿಕ ಜೀವನ ಮತ್ತು ಪತಿ ಕೃಷ್ಣವಂಶಿ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ. ತಾವು ವಿಚ್ಛೇದನ ಪಡೆದಿಲ್ಲ, ಆದರೆ ವೃತ್ತಿ ಕಾರಣಗಳಿಗಾಗಿ ಬೇರೆ ನಗರಗಳಲ್ಲಿ ವಾಸಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ತಾಲತಾಣದಲ್ಲಿ ಆಕ್ಟೀವ್ ಇರೋದಿಲ್ಲ. ಕೆಲಸ ಹೊರತು ಪಡಿಸಿದರೆ ನನ್ನ ವೈಯುಕ್ತಿಕ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದು ನನಗೆ ಇಷ್ಟ ಆಗದಿಲ್ಲ ಎಂದು ಇತ್ತೀಚೆಗೆ ಪಾಡ್ಕಾಸ್ಟ್ವೊಂದರಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ ಕೃಷ್ಣ ತಿಳಿಸಿದ್ದು, ಈ ಕಾರ್ಯಕ್ರಮದಲ್ಲಿ ತಮ್ಮ ವೈಯುಕ್ತಿಕ ಜೀವನ ಹಲವು ಆಸಕ್ತಿಯುತ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
'ನಾವಿಬ್ಬರು ಬೆಸ್ಟ್ ಫೆಂಡ್ಸ್, ಇಂದಿಗೂ ದಂಪತಿಗಳೇ'
ನಟಿ ರಮ್ಯಾ ಕೃಷ್ಣ, ಖ್ಯಾತ ನಿರ್ದೇಶಕ ಕೃಷ್ಣವಂಶಿ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ಹಲವರಿಗೆ ಗೊತ್ತಿದೆ. ಈ ದಂಪತಿಗೆ ರಿತ್ವಿಕ್ ಎಂಬ ಮಗ ಕೂಡ ಇದ್ದಾನೆ. ಆದರೆ ಈ ಇಬ್ಬರೂ ಈಗ ಬೇರೆಯಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಈಗ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ, ನಾವು ದಾಂಪತ್ಯ ಜೀವನವನ್ನು ಮುರಿದುಕೊಂಡಿಲ್ಲ. ಆದರೆ ಬೇರೆ ಬೇರೆಯಾಗಿ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ. ನಾವು ಇಂದಿಗೂ ದಂಪತಿಗಳೇ, ವೃತ್ತಿಜೀವನಕ್ಕಾಗಿ ನಾವು ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ. ನನ್ನ ಮಗ ಜನಿಸಿದ ಸಂದರ್ಭದಲ್ಲಿ ನಾನು ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. ಆಗ 15 ದಿನಗಳಿಗೆ ಒಮ್ಮೆ ಚೆನ್ನೆನಿಂದ ಹೈದರಾಬಾದ್ಗೆ ಟ್ರಾವೆಲ್ ಮಾಡುತ್ತಿದ್ದೆ. ನಾನು ಆ ರೀತಿ ಬಂದು ವಾಪಸ್ ಹೋದ ಪ್ರತಿಯೊಂದು ಬಾರಿಯೂ ಮಗನಿಗೆ ಅನಾರೋಗ್ಯ ಎದುರಾಗುತ್ತಿತ್ತು. ಇದರೊಂದಿಗೆ ನಾನು ಕೃಷ್ಣವಂಶಿಯೊಂದಿಗೆ ಮಾತನಾಡಿ ಆತನನ್ನು ಚೆನ್ನೈನಲ್ಲೇ ಬಿಟ್ಟು ಬಿಡಲು ತೀರ್ಮಾನ ಮಾಡಿದ್ದೆ. ಇದರಿಂದ ನಮ್ಮಿಬ್ಬರಿಗೂ ಅನುಕೂಲ ಆಗಿತ್ತು. ಆದರೆ ಅವರು ಬಹಳ ಕ್ರಿಯೇಟಿವ್ ಆಗಿ ಯೋಚನೆ ಮಾಡಿದ್ದರು. ಪ್ರತಿದಿನ ಜಗಳ ಮಾಡುವ ಬದಲು ನಾವು ಒಳ್ಳೆಯ ಸ್ನೇಹಿತರಂತೆ ಇರೋಣಾ ಅಂತ ಹೇಳಿದ್ದರು. ಈ ಕಾರಣದಿಂದಲೇ ನಾವು ಇಂದಿಗ ದಂಪತಿಗಳಾಗಿಯೇ ಉಳಿದುಕೊಂಡಿದ್ದೇವೆ ಎಂದು ನಟಿ ರಮ್ಯಾ ಕೃಷ್ಣ ತಿಳಿಸಿದ್ದಾರೆ.
'ಅಗತ್ಯ ಎನಿಸಿದರೆ ಮಾತ್ರ ಮದುವೆ ಆಗ್ಬೇಕು'
ಕೆಲವು ಸಂದರ್ಭದಲ್ಲಿ ರಿಲೇಷನ್ನಲ್ಲಿ ಮದುವೆ ಅನ್ನೋದು ಓವರ್ ರೇಟೆಡ್ ಎಂದು ಅನಿಸುತ್ತದೆ. ಅಗತ್ಯ ಎನಿಸಿದರೆ ಮಾತ್ರ ನಾವು ಮದುವೆಯಾಗಬೇಕು. ಕೃಷ್ಣವಂಶಿ ಕೂಡ ಮದುವೆ ಏಕೆ, ಲಿವಿಂಗ್ ಟುಗೆದರ್ ಇರೋಣಾ ಅಂತ ಹೇಳಿದ್ದರು. ಆಗಲೇ ನಾನು ಯೆಸ್ ಎಂದು ಹೇಳಿಬೇಕಿತ್ತು ಅಂತ ಈಗ ಅನಿಸುತ್ತಿದೆ. ಮದುವೆ ಅನ್ನೋದು ಎರಡು ಕುಟುಂಬಗಳೊಂದಿಗೆ ನಮ್ಮ ಸುತ್ತಲು ಇರುವ ಹಲವರೊಂದಿಗೆ ಸಂಬಂಧ ಹೊಂದಿರುತ್ತದೆ. ನಮ್ಮ ಸಂಗಾತಿಗಿಂತಲೂ ಸುತ್ತಲು ಇರುವ ಹಲವರಿಗೆ ನಾವು ಜವಾಬ್ದಾರಿಯಾಗಿ ಇರ್ಬೇಕಾಗುತ್ತದೆ. ಕೃಷ್ಣವಂಶಿಯೊಂದಿಗೆ ನನ್ನ ರಿಲೇಷನ್ಶಿಪ್ ಉತ್ತಮವಾಗಿದೆ. ಎಂದಿಗೂ ಅದು ಅದೇ ರೀತಿ ಇರುತ್ತದೆ. ಅವರಿಗೆ ಸಿನಿಮಾನೇ ಪ್ರಪಂಚ, ನಾನು ಅವರ ವರ್ಕ್ಗೆ ತಲೆ ಹಾಕುವುದಿಲ್ಲ, ಅವರು ನನ್ನ ಸಿನಿಮಾ ವರ್ಕ್ಗೆ ತಲೆ ಹಾಕುವುದಿಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.
14ನೇ ವಯಸ್ಸಿಗೆ ಸಿನಿಮಾ ರಂಗಕ್ಕೆ ಕೊಟ್ಟಿದ್ದ ನಟಿ
ನಾನು 14ನೇ ವಯಸ್ಸಿಗೆ ಸಿನಿಮಾ ರಂಗಕ್ಕೆ ಬಂದೆ. ನನ್ನ ಭರತನಾಟ್ಯ ಪಾದಾರ್ಪಣೆ ಫೋಟೋಗಳನ್ನು ನೋಡಿ ಭಾರತಿರಾಜಾ, ಟಿ ರಾಜೇಂದ್ರ ಅವರು ಫೋನ್ ಮಾಡಿದ್ದರು. ಆದರೆ ಆಗ ಒಬ್ಬರ ಸಿನಿಮಾದಲ್ಲಿ ನಟಿಸಿದ್ದರೆ ಮತ್ತೊಬ್ಬರ ಸಿನಿಮಾದಲ್ಲಿ ಅವಕಾಶ ಕಳೆದುಕೊಳ್ಳಬೇಕಿತ್ತು. ಇದರಿಂದ ಇಬ್ಬರ ಸಿನಿಮಾವನ್ನು ಮಾಡಲಿಲ್ಲ. ಇದರೊಂದಿಗೆ ಒಂದು ತಮಿಳು ಕಾಮಿಡ ಸಿನಿಮಾ ಮಾಡುವ ಅವಕಾಶ ಸಿಕ್ತು. ಇದೇ ನನ್ನ ಮೊದಲ ಸಿನಿಮಾ. ಹೀರೋಯಿನ್ ತನ್ನ ವೃತ್ತಿಜೀವನವನ್ನು ಹೇಗೆ ಮಾಡಬಾರದೋ ಅದೇ ರೀತಿ ನನ್ನ ಕೆರಿಯರ್ ಆರಂಭ ಆಯ್ತು ಎಂದು ರಮ್ಯಾಕೃಷ್ಣ ಹೇಳಿದ್ದಾರೆ.














