ಬೈಕರ್ಸ್ ಸ್ವರ್ಗ ಲಡಾಖ್‌ನಲ್ಲಿ ಹೊಸ ಥಿಯೇಟರ್ ಆರಂಭ ಲಡಾಖ್‌ನ ಲೆಹ್‌ನಲ್ಲಿ ಮೊದಲ ಥಿಯೇಟರ್, ಇದು ಜಗತ್ತಿನಲ್ಲೇ ಅತೀ ಎತ್ತರದ ಚಿತ್ರಮಂದಿರ

ಲಡಾಖ್(ಆ.29): ಲಡಾಖ್ ಅಂದ್ರೇನು ನೆನಪಾಗುತ್ತೆ ? ಬೈಕರ್ಸ್ ಸ್ವರ್ಗ. ಬುಲೆಟ್‌ ಏರಿ ಲಗೇಜ್ ಕಟ್ಟಿ ಸೋಲೋ ರೈಡ್ ಹೋಗುವ ಜನರ ಮುಖ. ಹಲವು ಕಾರಣಗಳಿಗೆ ಪ್ರಸಿದ್ಧವಾಗಿರುವ ಲಡಾಖ್‌ನಲ್ಲಿ ಈಗ ಥಿಯೇಟರ್ ಆರಂಭವಾಗಿದೆ. ಅದೂ ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ಚಿತ್ರಮಂದಿರ. ಹಾಗೆಯೇ ಇದು ಲಡಾಖ್‌ನ ಮೊದಲ ಚಿತ್ರಮಂದಿರವೂ ಹೌದು.

ಲಡಾಖ್‌ನಲ್ಲಿ ಮೊದಲ ಮೊಬೈಲ್ ಡಿಜಿಟಲ್ ಸಿನಿಮಾ ಥಿಯೇಟರ್ ಆರಂಭಗೊಂಡಿದ್ದು ಇದು ದಾಖಲೆಯ 11,562 ಫೀಟ್ ಎತ್ತರದಲ್ಲಿದೆ. ಈ ಮೂಲಕ ಜಗತ್ತಿನಲ್ಲೇ ಅತ್ಯಂತ ಎತ್ತರದ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಸಿನಿಮಾ ನೋಡುವ ಅನುಭವ ನೀಡುವುದಕ್ಕಾಗಿ ಲಡಾಖ್‌ನ ಲೆಹ್‌ನಲ್ಲಿರುವ ಪಲ್ದಾನ್ ಏರಿಯಾದಲ್ಲಿ ಚಿತ್ರಮಂದಿರ ಆರಂಭವಾಗಿದೆ.

ಪ್ಯಾರೀಸ್‌ನಲ್ಲಿ ತೇಲುವ ಥಿಯೇಟರ್..! ತೇಲುವ ಬೋಟ್‌ನಲ್ಲಿ ವೀಕ್ಷಕರು

ಸ್ಕ್ರೀನಿಂಗ್ ಕಾರ್ಯಕ್ರಮದಲ್ಲಿ ಥಿಯೇಟರ್ ಆರ್ಟಿಸ್ಟ್ ಮೆಂಫಮ್ ಓಟ್ಸಲ್ ಅವರು ಭಾಗವಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿರುವ ಈ ಥಿಯೇಟರ್‌ನಲ್ಲಿ ಹಲವಾರು ಸೌಲಭ್ಯಗಳಿವೆ. ಸೀಟಿಂಗ್ ವ್ಯವಸ್ಥೆಯೂ ಸುಂದರವಾಗಿದ್ದು, ಸುವ್ಯವಸ್ಥಿತವಾಗಿದೆ. ಇದು ಇಲ್ಲಿನ ಜನರಿಗೆ ಸಿನಿಮಾ ಮತ್ತು ಕಲೆಯನ್ನು ತೋರಿಸುವ ದೊಡ್ಡ ವೇದಿಕೆಯಾಗಲಿದೆ ಎಂದಿದ್ದಾರೆ.

Scroll to load tweet…

ಕಾರ್ಯಕ್ರಮ ಆಯೋಜಕರಲ್ಲಿ ಒಬ್ಬರಾದ ಸುಶೀಲ್ ಈ ಬಗ್ಗೆ ಮಾತನಾಡಿ, ಲೆಹ್‌ನಲ್ಲಿ ಇಂತಹ 4 ಥಿಯೇಟರ್ ತೆರೆಯಲಾಗುತ್ತದೆ. ಭಾರತದ ಅತ್ಯಂತ ಗ್ರಾಮೀಣ ಪ್ರದೇಶದ ಜನರಿಗೆ ಸಿನಿಮಾ ಅನುಭವ ನೀಡಲು ಇದನ್ನು ಮಾಡಲಾಗಿದೆ. 28 ಡಿಗ್ರಿ ಉಷ್ಣಾಂಶದಲ್ಲಿಯೂ ಕೆಲಸ ಮಾಡುವಂತೆ ಥಿಯೇಟರ್ ಸಿದ್ಧಪಡಿಸಲಾಗಿದೆ ಎಂದಿದ್ದಾರೆ.

79 ವರ್ಷ ಹಳೆ 'ಸೆಂಟ್ರಲ್ ಟಾಕೀಸ್‌' ನೆಲಸಮ!

ಲಡಾಖ್‌ನ ಚಂಗಪ ಅಲೆಮಾರಿಗಳನ್ನು ಆಧರಿಸಿದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕಿರುಚಿತ್ರ ಸೆಕೂಲ್ ಅನ್ನು ಬಿಡುಗಡೆ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು ಮತ್ತು ಬಾಲಿವುಡ್ ಚಲನಚಿತ್ರ ಬೆಲ್ ಬಾಟಮ್ ಅನ್ನು ಸಂಜೆ ಪ್ರದರ್ಶಿಸಲಾಯಿತು. ಖ್ಯಾತ ಬಾಲಿವುಡ್ ನಟ, ಪಂಕಜ್ ತ್ರಿಪಾಠಿ ಮತ್ತು ಲಡಾಖ್ ಬೌದ್ಧ ಸಂಘದ (ಎಲ್ಬಿಎ) ಅಧ್ಯಕ್ಷ ತುಪ್ಸ್ತಾನ್ ಚೆವಾಂಗ್ ಆಗಸ್ಟ್ 24 ರಂದು ಎನ್ ಡಿಎಸ್ ಮೈದಾನದಲ್ಲಿ ಉದ್ಘಾಟನೆಗೆ ಹಾಜರಿದ್ದರು.