ಲಾಕ್‌ಡೌನ್‌ನಿಂದ ಮನೋರಂಜನಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸಿನಿಮಾಗಳ ಮುಖ್ಯ ಆದಾಯ ಥಿಯೇಟರ್‌ಗಳೇ ಮುಚ್ಚಲಾಗಿತ್ತು. ಶೂಟಿಂಗ್ ಸ್ಥಗಿತವಾಗಿತ್ತು. ಇದೀಗ ಜಗತ್ತಿನ ಕೆಲವು ರಾಷ್ಟ್ರಗಳು ಮತ್ತೆ ರಿಓಪನ್‌ ಕಡೆ ಹೆಜ್ಜೆ ಹಾಕುತ್ತಿವೆ.

ಫ್ರಾನ್ಸ್‌ನಲ್ಲಿ ತೇಲುವ ಥಿಯೇಟರ್ ಒಂದು ಸಿದ್ಧಗೊಂಡಿದೆ. ಇದರಲ್ಲಿ ಆಯ್ದ 150 ಜನರು ಸಿನಿಮಾ ನೋಡಲಿದ್ದಾರೆ. ಅಂದ ಹಾಗೆ ಈ ಥಿಯೇಟರ್‌ಗೆ ಗೋಡೆ ಇಲ್ಲ, ಬಿಡಿ ಕೊಠಡಿಯೇ ಇಲ್ಲ.. ಹಿಂದಿನ ಜಮಾನದಲ್ಲಿದ್ದ ಓಪನ್ ಥಿಯೇಟರ್ ಕಾನ್ಸೆಫ್ಟ್ ಮತ್ತೆ ಮರುಕಳಿಸಿದೆ ಎಂದರೂ ತಪ್ಪಾಗಲಾರದು..

ಮೋಡಿ ಮಾಡುತ್ತಿದೆ 'ದಿಲ್‌ ಬೇಚಾರ' ಟ್ರೇಲರ್‌; ಒಂದೇ ದಿನ 30 ಮಿಲಿಯನ್ ಹಿಟ್ಸ್

ಅಂತೂ ಇಂತು ಅದೃಷ್ಟಶಾಲಿ 150 ವೀಕ್ಷಕರು 38 ಬೋಟ್‌ಗಳಲ್ಲಿ ಕುಳಿತು ಸಿನಿಮಾ ನೋಡಲಿದ್ದಾರೆ. ಕೆಳಗೆ ನೀರು, ಮೇಲೆ ನೀಲಾಕಾಶ, ಎದುರು ಸಿನಿಮಾ ಪರದೆ..! ಫ್ರೆಂಚ್ ಕ್ಯಾಪಿಟಲ್‌ನಿಂದ ಆಯೋಜಿಸುವ ವಾರ್ಷಿಕ ಕಾರ್ಯಕ್ರಮ ಹಾಗೂ ಇತ್ತೀಚೆಗಷ್ಟೇ ಫ್ರಾನ್ಸ್‌ನಲ್ಲಿ ಥಿಯೇಟರ್ ರಿ ಓಪನ್ ಆಗಿರುವ ಖುಷಿಯಲ್ಲಿ ಇಂತಹದೊಂದು ವಿಶೇಷ ಸಿನಿಮಾ ಪ್ರದರ್ಶನ ನಡೆಯಲಿದೆ. ಸಿನಿಮಾ ಚೈನ್ಎಂಕೆ2 ಹಾಗೂ ಹಾಗೆನ್ ಡೇಝ್ ಸೇರಿ 'ನೀರಿನ ಮೇಲೆ ಸಿನಿಮಾ' ಎನ್ನುವ ಕಾರ್ಯಕ್ರಮ ನಡೆಸುತ್ತಿದ್ದಾರೆ.

24 ಗಂಟೆಯಲ್ಲಿ 4.3 ಮಿಲಿಯನ್ ಲೈಕ್ಸ್ ಪಡೆದ 'ದಿಲ್ ಬೇಚಾರಾ'; ಸುಶಾಂತ್ ಖುಷಿ ಪಡಲಿದ್ದಾನೆ!

ಜುಲೈ 18ರಂದು ಸಂಜೆ 7.30ಕ್ಕೆ 150 ಜನ ಸ್ಥಳೀಯರು 'ಲೇ ಗ್ರ್ಯಾಂಡ್ ಬೈನ್' ಕಾಮಿಡಿ ಸಿನಿಮಾ ವೀಕ್ಷಿಸಲಿದ್ದಾರೆ. ಪ್ರತಿ ಬೋಟ್‌ಗಳಲ್ಲಿ 4ರಿಂದ 6 ಜನ ಕೂರಲಿದ್ದಾರೆ. ಸಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ 150 ಜನರು ಡೆಕ್‌ನಲ್ಲಿ ಕುರ್ಚಿಯಲ್ಲಿ ಕುಳಿತು ನೋಡಬಹುದಾಗಿದೆ.