Asianet Suvarna News Asianet Suvarna News

Kylie Jenner Instagramನಲ್ಲಿ 30 ಕೋಟಿ ಹಿಂಬಾಲಕರು ಪಡೆದ ಮೊದಲ ಮಹಿಳೆ!

ಕೈಲೀ ಜೆನ್ನರ್ ಕಳೆದ ಕೆಲವು ತಿಂಗಳುಗಳಿಂದ ಇನ್ಸ್ಟಾಗ್ರಾಮ್‌ನಲ್ಲಿ  ತುಲನಾತ್ಮಕವಾಗಿ ಕಡಿಮೆ ಪ್ರೊಫೈಲನ್ನು ಇಟ್ಟುಕೊಂಡಿದ್ದರೂ ಸಹ 300 ಮಿಲಿಯನ್ ಮೈಲಿಗಲ್ಲನ್ನು ತಲುಪಲು ಯಶಸ್ವಿಯಾಗಿದ್ದಾರೆ.

Kylie Jenner Is The First Woman To Reach 300 Million Instagram Followers mnj
Author
Bengaluru, First Published Jan 14, 2022, 9:21 AM IST
  • Facebook
  • Twitter
  • Whatsapp

ವಾಷಿಂಗ್ಟನ್‌ (ಜ. 14): ಕೈಲಿ ಕಾಸ್ಮೆಟಿಕ್ಸ್‌ ಕಂಪನಿಯ ಸಂಸ್ಥಾಪಕಿ, ಮಾಡೆಲ್‌ ಕೈಲಿ ಜೆನ್ನರ್‌ ಇನ್ಸ್ಟಾಗ್ರಾಮ್‌ನಲ್ಲಿ (Kylie Jenner Instgram) 300 ಮಿಲಿಯನ್‌(30 ಕೋಟಿ) ಹಿಂಬಾಲಕರನ್ನು ಹೊಂದಿದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಈ ದಾಖಲೆ ಪಾಪ್‌ ಸ್ಟಾರ್‌ ಅರಿಯಾನ ಗ್ರಾಂಡೆ (29 ಕೋಟಿ) ಅವರ ಹೆಸರಲ್ಲಿತ್ತು. ಇದೀಗ ಗ್ರಾಂಡೆ ದಾಖಲೆ ಮುರಿದಿರುವ ಕೈಲಿ ಜೆನ್ನರ್‌ (24), ಫುಟ್‌ಬಾಲ್‌ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ(38.8 ಕೋಟಿ ಹಿಂಬಾಲಕರು) ಬಳಿಕ ಅತೀ ಹೆಚ್ಚು ಫಾಲೋವರ್‌ಗಳನ್ನ ಹೊಂದಿರುವ ವ್ಯಕ್ತಿಯೆನಿಸಿದ್ದಾರೆ. ಈ ಹಿಂದೆ ಕೈಲಿ ಮಗಳೊಂದಿಗಿನ ಫೋಟೋ ಹಾಕಿದ್ದು, ಇದು ಇನ್ಸ್ಟಾಗ್ರಾಮ್‌ನಲ್ಲಿ ಅತೀ ಹೆಚ್ಚು ಲೈಕ್‌ ಪಡೆದ ಫೋಟೋ ಎಂಬ ದಾಖಲೆ ನಿರ್ಮಿಸಿತ್ತು.ಆದರೆ ಒಂದು ಮೊಟ್ಟೆಯ ಫೋಟೋ ಆ ದಾಖಲೆಯನ್ನು ಮುರಿದಿತ್ತು.

ರಾಪರ್ ಟ್ರಾವಿಸ್ ಸ್ಕಾಟ್ (Rapper Travis Scott) ಅವರೊಂದಿಗೆ ಎರಡನೇ ಮಗುವನ್ನು ನಿರೀಕ್ಷಿಸುತ್ತಿರುವ ರಿಯಾಲಿಟಿ ಟಿವಿ ತಾರೆ, ನವೆಂಬರ್‌ನಲ್ಲಿ ಟ್ರಾವಿಸ್ ಸ್ಕಾಟ್ ಅವರ ಆಸ್ಟ್ರೋವರ್ಲ್ಡ್ ದುರಂತದ (Astroworld Festival crowd crush) ನಂತರ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಂಡರು. ಆಸ್ಟ್ರೋವರ್ಲ್ಡ್ ಫೆಸ್ಟಿವಲ್‌ನಲ್ಲಿ ಸ್ಕಾಟ್ ಪ್ರದರ್ಶನ ನೀಡುತ್ತಿರುವಾಗ ಪ್ರೇಕ್ಷಕರು ವೇದಿಕೆಯತ್ತ ತೆರಳಲು ಪ್ರಾರಂಭಿಸಿದಾಗ ಹತ್ತು ಜನರು ಸಾವನ್ನಪ್ಪಿದ್ದರು ಮತ್ತು ನೂರಾರು ಜನ ಗಾಯಗೊಂಡಿದ್ದರು ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.

Kylie Jenner Is The First Woman To Reach 300 Million Instagram Followers mnj

ಇದನ್ನೂ ಓದಿ: Troll; ಜಾಗೃತಿ ಮೂಡಿಸ್ತಿದ್ದ ನಟಿಗೆ ಏನಾಯ್ತು, ರಕ್ತದ ನಡುವೆ ಕುಳಿತು ಬೆತ್ತಲೆ ಪೋಸ್!

ಕ್ರಿಸ್‌ಮಸ್ 2021 ರಂದು ಅವರು ತಮ್ಮ ತಾಯಿ ಕ್ರಿಸ್ ಜೆನ್ನರ್ ಅವರ ಥ್ರೋಬ್ಯಾಕ್ (ಹಳೆಯ) ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಆಕ್ಟಿವ್‌ ಆಗಿದ್ದರು. ಕೈಲಿ ಪ್ಲಾಟ್‌ಫಾರ್ಮ್‌ನಲ್ಲಿ ಇತರ ಎರಡು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ - ಎರಡೂ ಅವರ ಗರ್ಭಧಾರಣೆಯ ಫೋಟೋಶೂಟ್‌ಗಳ ಚಿತ್ರಗಳಾಗಿವೆ. ಈ ಚಿತ್ರಗಳು ಕೂಡ ಕೊಟ್ಯಂತರ ಲೈಕ್ಸ ಪಡೆದುಕೊಂಡಿವೆ.

ಕೈಲಿ ಜೆನ್ನರ್ ಈ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಲೈಕ್ಸ್ ಚಿತ್ರಕ್ಕಾಗಿ ದಾಖಲೆಯನ್ನು ಹೊಂದಿದ್ದರು. ಆಕೆಯ ಮಗಳು ಸ್ಟೋರ್ಮಿಯನ್ನು ಒಳಗೊಂಡಿರುವ ಚಿತ್ರವು 2018 ರಲ್ಲಿ ಹಂಚಿಕೊಂಡಾಗಿನಿಂದ 18.3 ಮಿಲಿಯನ್ 'ಲೈಕ್‌ಗಳನ್ನು' ಗಳಿಸಿದೆ. ಆದಾಗ್ಯೂ, 2019 ರ ಆರಂಭದಲ್ಲಿ, ಕೈಲಿ ಮೊಟ್ಟೆಯ ಚಿತ್ರ  'Most Liked' ಫೋಟೋ ಹೊಂದಿರುವ ವಿಶ್ವ ದಾಖಲೆ ಬರೆದಿದೆ.

ರೂಪದರ್ಶಿ ಕೈಲೀ ಜೆನ್ನರ್ ರಕ್ತಸಿಕ್ತ nude photoಗೆ ನೆಟ್ಟಿಜನ್ಸ್ ಫುಲ್ ಗರಂ!

2021ರ ನವೆಂಬರ್‌ನಲ್ಲಿ, ರಿಯಾಲಿಟಿ ಟಿವಿ ತಾರೆ ಕೈಲಿ ಜೆನ್ನರ್ (Kylie Jenner) ಹ್ಯಾಲೋವೀನ್ ಸಮಯದಲ್ಲಿ ತನ್ನ ಸಾಮಾಜಿಕ ಮಾಧ್ಯಮ ಪುಟದಲ್ಲಿ ನಗ್ನ ಹಾಗೂ ಫೇಕ್‌ ಬ್ಲಡ್‌ನಲ್ಲಿ ಮುಳುಗಿದ ಫೋಟೋವನ್ನು ಹಂಚಿಕೊಂಡಿದ್ದರು.ಆದರೆ, ಅದು ಅವರ ಅಭಿಮಾನಿಗಳಿಗೆ ಇಷ್ಟವಾಗದೆ ಮತ್ತು ನಟಿ ಫೋಟೋ ಕಾರಣದಿಂದ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದರು.

ಇದನ್ನೂ ಓದಿ: Instagram Fraud: ಮಾಡಲಿಂಗ್‌ ಹೆಸರಿನಲ್ಲಿ ಯುವತಿಯರಿಗೆ ವಂಚಿಸಿದ್ದ ವಿದ್ಯಾರ್ಥಿ ಸೆರೆ!

ಕೈಲಿ ತನ್ನ ಹ್ಯಾಲೋವೀನ್ ಪೋಸ್ಟ್‌ಗಾಗಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದರು. ಕೈಲಿ ಜೆನ್ನರ್ ಅವರು ಅಕ್ಟೋಬರ್ 30 ರಂದು ಹ್ಯಾಲೋವೀನ್ ಅನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಂಡಿದ್ದರು.ಅವರು ರಕ್ತಸಿಕ್ತ ಫೋಟೋಶೂಟ್ ಮಾಡಿಸಿ ತಮ್ಮ Instagram ಪುಟದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಈ ಫೋಟೋಗಳನ್ನು ಹಂಚಿಕೊಂಡಿದ್ದರು. ಫೋಟೋವನ್ನು ಬಳಸಿ ಹಲವು ಮಿಮ್‌ ಅನ್ನು ಬಿಡುಗಡೆ ಮಾಡಲಾಗಿತ್ತು. ಇದು ತುಂಬಾ  ಡಿಸ್ಟರ್ಬಿಂಗ್‌ ಸಂಗತಿ, ಎಂದು ಹಲವರು  ಕಾಮೆಂಟ್‌ ಮಾಡಿದ್ದರು 'ಇದಕ್ಕೆ ಎಚ್ಚರಿಕೆಯ ಅಗತ್ಯವಿದೆ' ಎಂದು ಒಬ್ಬ ಯೂಸರ್‌ ಬರೆದಿದ್ದರು. 'ಅವಳು ಪ್ರೆಗ್ನೆಂಟ್‌ ಆಗಿರುವುದರಿಂದ ಇದು ನಿಜವಾಗಿಯೂ ತುಂಬಾ ಡಿಸ್ಟರ್ಬಿಂಗ್‌ ವಿಷಯ,' ಎಂದು ಇನ್ನೊಬ್ಬರು ಬರೆದಿದ್ದರು.

Follow Us:
Download App:
  • android
  • ios