ಕಾಲಿವುಡ್‌ ನಟ ವಿಶಾಲ್‌ ಒಂದಾದ ಮೇಲೊಂದು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.  ಬಹು ನಿರೀಕ್ಷಿತ 'ಚಕ್ರಂ' ಸಿನಿಮಾ ಓಟಿಟಿಯಲ್ಲಿ ರಿಲೀಸ್‌ ಆಗುಲು ಸಿದ್ಧವಾಗುತ್ತಿದ್ದಂತೆ, ಇದೀಗ ಮದ್ರಾಸ ಹೈಕೋರ್ಟ್ ನೋಟಿಸ್‌ ನೀಡಿದ್ದು ಯಾಕೆ?

ಕಂಗನಾಳನ್ನು ಭಗತ್ ಸಿಂಗ್‌ಗೆ ಹೋಲಿಸಿ Hats Off ಎಂದು ಕೆಜಿಎಫ್‌ ವಿತರಕ 

ಆ್ಯಕ್ಷನ್‌ ಸಿನಿಮಾ ಹಿನ್ನಲೆ:

2019ರಲ್ಲಿ ಆರ್‌ ರವೀಂದ್ರ ನಿರ್ಮಾಣದ 'ಆ್ಯಯಕ್ಷನ್' ಚಿತ್ರದಲ್ಲಿ ನಟ ವಿಶಾಲ್ ಅಭಿನಯಿಸಿದ್ದರು. ಬರೋಬ್ಬರಿ  44 ಕೋಟಿ ರೂ. ವೆಚ್ಚದ ಸಿನಿಮಾ ಇದಾಗಿದ್ದು, ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುವಲ್ಲಿ ವಿಫಲವಾಯಿತು. ಕೇವಲ 4 ಕೋಟಿ ಮಾತ್ರ ಕಲೆಕ್ಷನ್ ಮಾಡುವುದರಲ್ಲಿ ಈ ಚಿತ್ರ ಯಶಸ್ವಿಯಾಗಿದ್ದು. ಚಿತ್ರ ವಿಫಲವಾಗಿದ್ದಕ್ಕೆ ವಿಶಾಲ್ ಕಾರಣವೆಂದು ಆರೋಪಿಸಿ, ಚಿತ್ರದ ನಿರ್ಮಾಪಕ ರವೀಂದ್ರ ನಿರ್ಮಾಪಕರ ಸಂಸ್ಥೆಯಲ್ಲಿ ಆರೋಪ ಮಾಡಿದ್ದರು.

ಟ್ರಿಡೆಂಟ್‌ ಆರ್ಟ್ಸ್ ಸಂಸ್ಥೆ ನೀಡಿರುವ ದೂರಿನ ಪ್ರಕಾರ ವಿಶಾಲ್ 8 ಕೋಟಿ ರೂ. ಹಣವನ್ನು ನಿರ್ಮಾಪಕರಿಗೆ ಮರಳಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ವರ್ಷವಾದರೂ ಹಣ ಹಿಂದಿರುಗಿಸದ ಕಾರಣ ಮದ್ರಾಸ್‌ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಖ್ಯಾತ ನಟನ ತಂದೆಗೆ ಕೊರೋನಾ; ಗುಣ ಮುಖರಾಗಲು ಆಯುರ್ವೇದದ ಮೊರೆ! 

ಇದ್ಯಾವುದನ್ನೂ ಬಗೆಹರಿಸಲು ಯತ್ನಿಸದೇ ವಿಶಾಲ್ ಮತ್ತೊಂದು ಸಿನಿಮಾದಲ್ಲಿ ನಟಿಸಿ,  ಓಟಿಟಿಯಲ್ಲಿ ರಿಲೀಸ್‌ ಮಾಡಿಸಲು ಸಿದ್ಧತೆ ಮಾಡಿಕೊಳ್ಳುತ್ತಾ ಬ್ಯುಸಿಯಾಗಿದ್ದಾರೆ. ಕೋರ್ಟ್‌ ನೀಡಿರುವ ನೋಟಿಸ್‌ನಿಂದ ರವೀಂದ್ರ ಅವರಿಗೆ ಪರಿಹಾರ ಸಿಗುವವರೆಗೂ ಸಿನಿಮಾ ರಿಲೀಸ್‌ಗೆ ತಡೆ ಒಡ್ಡಲಾಗಿದೆ.