ಶಿವಸೇನ ಸರ್ಕಾರದ ವಿರುದ್ಧ ಸಂಘರ್ಷಕ್ಕಿಳಿದಿರುವ ನಟಿ ಕಂಗನಾ ರಣಾವತ್ ಧೀರ ಭಗತ್ ಸಿಂಗ್ ಎಂದು ಕಾಲಿವುಡ್ ನಿರ್ಮಾಪಕ ವಿತರಕ ಹಾಗೂ ನಟನಾಗಿ ಗುರುತಿಸಿಕೊಂಡಿರುವ ವಿಶಾಲ್‌ ಹೇಳಿದ್ದಾರೆ. 

ಶಿವಸೇನೆ ಈಗ ಸೋನಿಯಾ ಸೇನೆ: ಉದ್ಧವ್‌ ವಿರುದ್ಧ ಕಂಗನಾ ಗರಂ 

'ಹಾಟ್ಸ್‌ ಆಫ್‌ ಕಂಗನಾ. ನಿಮ್ಮ ಗಟ್ಸ್ ಮೆಚ್ಚಲೇ ಬೇಕು. ಒಂದೊಳ್ಳೆ ವಿಚಾರದ ಬಗ್ಗೆ ಧ್ವನಿ ಎತ್ತುವ ಸಮಯದಲ್ಲಿ ನೀವು ಯಾವುದು ಸರಿ, ಯಾವುದು ತಪ್ಪು ಎಂದು ಎರಡೆರಡು ಸಲ ಚಿಂತಿಸುವುದಿಲ್ಲ. ನೀವು ಧ್ವನಿ ಎತ್ತಿರುವುದು ಯಾವುದು ನಿಮ್ಮ ಪರ್ಸನಲ್ ವಿಚಾರಕ್ಕಲ್ಲ. ಆದ್ರೂ ಒಬ್ಬರಿಗೆ ಒಳ್ಳೆಯದು ಆಗಬೇಕೆಂದು ಸರ್ಕಾರವನ್ನೇ ಎದುರು ಹಾಕಿ ಕೊಂಡಿದ್ದೀರಿ. 1920ಯಲ್ಲಿ ಭಗತ್ ಸಿಂಗ್ ಕೂಡ ಹೀಗೆ ಹೋರಾಟ ಮಾಡಿದ್ದರು,' ಎಂದು ವಿಶಾಲ್ ಟ್ಟೀಟ್ ಮಾಡಿದ್ದಾರೆ.

'ನಿಮ್ಮ ಈ ನಡೆ ಹಾಗೂ ನಿರ್ಧಾರ ಅನೇಕರಿಗೆ ಸ್ಫೂರ್ತಿಯಾಗುತ್ತದೆ. ತಪ್ಪು ಮಾಡುವವರ ವಿರುದ್ಧ ಧ್ವನಿ ಎತ್ತಲು ಎಂದೂ ಹೆದರಿಕೊಳ್ಳುವುದಿಲ್ಲ. ನಿಮ್ಮಗೊಂದು ಸಲಾಂ. ಬೋಲ್ಡ್‌ ನಟಿ. ಫ್ರೀಡಂ ಆಫ್‌ ಸ್ಪೀಚ್‌ ಆರ್ಟಿಕಲ್ 19' ಎಂದು ಬರೆದುಕೊಂಡಿದ್ದಾರೆ.

 

ವಿಶಾಲ್‌ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ರಾಜಕೀಯ ವಿಚಾರವನ್ನೂ ತುಂಬಾ ತಿಳಿದುಕೊಂಡಿದ್ದಾರೆ. ಯಾವುದಕ್ಕೆ ಜಯ ಸಿಗಬೇಕೋ ಅದರ ಪರ ಎಂದಿಗೂ ಧ್ವನಿ ಎತ್ತುತ್ತಾರೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ನಲ್ಲಿ ಅಭಿನಯಿಸುವ ಮೂಲಕ  ಕಂಗನಾ ತಮಿಳು ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.

ಉದ್ಧವ್ ವಿರುದ್ಧ ಕಂಗನಾ ಗರಂ
ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣ ಹಾಗೂ ಡ್ರಗ್ಸ್‌ ಮಾಫಿಯಾಗೆ ಸಂಬಂಧಿಸಿದಂತೆ ಶಿವಸೇನೆ ಸರ್ಕಾರದ ವಿರುದ್ಧ ಸಂಘರ್ಷಕ್ಕಿಳಿದಿರುವ ನಟಿ ಕಂಗನಾ ರಾಣಾವತ್‌ ಅವರು ಗುರುವಾರ ಕೂಡ ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ‘ಉದ್ಧವ್‌ ಠಾಕ್ರೆ ಅವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಅಡಗಿಸಿದಷ್ಟೂನನ್ನ ಧ್ವನಿ ಮತ್ತಷ್ಟುಪ್ರತಿಧ್ವನಿಗೊಳ್ಳುತ್ತದೆ’ ಎಂದು ಕಂಗನಾ ಗುಡುಗಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮಾನನಷ್ಟ ಕೇಸು ದಾಖಲು..!

ಮನೀಶ್‌ ಮಲ್ಹೋತ್ರಾಗೆ ಎಂಸಿಯಿಂದ ನೋಟಿಸ್‌
 ನಟಿ ಕಂಗನಾ ರಾಣಾವತ್‌ ಮನೆಯ ಅಕ್ರಮ ಭಾಗ ಧ್ವಂಸಗೊಳಿಸಿದ ಬೆನ್ನಲ್ಲೇ, ಅವರ ನೆರೆಮನೆಯವರಾದ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್‌ ಮಲ್ಹೋತ್ರಾಗೆ ಬೃಹ್ಮನ್ಮುಂಬೈ ಮಹಾನಗರ ಪಾಲಿಕೆ ನೋಟಿಸ್‌ ನೀಡಿದೆ. ಅನುಮತಿ ಪಡೆದ ವಿನ್ಯಾಸಕ್ಕೆ ಹೊರತಾಗಿ ಮನೆಯಲ್ಲಿ ಹಲವು ನಿರ್ಮಾಣ ಮಾಡಿರುವುದನ್ನು ಪ್ರಶ್ನಿಸಿ ನೋಟಿಸ್‌ ನೀಡಲಾಗಿದೆ. ಉತ್ತರಿಸಲು ಅವರಿಗೆ 7 ದಿನ ಕಾಲಾವಕಾಶ ನೀಡಲಾಗಿದೆ.

"