ಕಾಲಿವುಡ್ ನಟ ಹಾಗೂ ನಿರ್ಮಾಪಕ ವಿಶಾಲ್‌ ತಂದೆ ಜೆ.ಕೆ ರೆಡ್ಡಿ ಅವರಿಗೆ ಕೋವಿಡ್19 ಪಾಸಿಟಿವ್ ಇದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಈ ಅವಧಿಯಲ್ಲಿ ನಟ ವಿಶಾಲ್‌ ಮತ್ತು ಅವರ ಮ್ಯಾನೇಜರ್‌ಗೂ ಕೊರೋನಾ ಇರುವುದು ತಿಳಿದು ಬಂದಿತ್ತು. ಮೂವರು ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಾರೋಗ್ಯ ಗೆದ್ದು ಬಂದ ಜರ್ನಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.

'ಹೌದು ನನ್ನ ತಂದೆಗೆ ಕೊರೋನಾ ಪಾಸಿಟಿವ್ ಇದ್ದಿದ್ದು ನಿಜ. ನನಗೂ ಜ್ವರ, ಕೆಮ್ಮು ಮತ್ತು ಚಳಿ ಇದ್ದು, ನನ್ನ ಮ್ಯಾನೇಜರ್‌ಗೂ ತಗುಲಿತ್ತು. ನಾವೆಲ್ಲರೂ ಆಯುರ್ವೇದ ಔಷಧಿ ತೆಗೆದುಕೊಂಡ ಕಾರಣ ವಾರದಲ್ಲಿಯೇ ಗುಣಮುಖರಾಗಿದ್ದೀವಿ. ನಾನು ಆರೋಗ್ಯವಾಗಿದ್ದೀವಿ.' ಎಂದು ಬರೆದುಕೊಂಡಿದ್ದಾರೆ.

 

ವಿಶಾಲ್‌ ತಂದೆ ಜೆಕೆ ರೆಡ್ಡಿ ಅವರೂ ನಿರ್ಮಾಪಕರೇ. ಇತ್ತೀಚಿಗೆ ಬಿಡುಗಡೆಯಾಗದ 'ದಮಯಂತಿ' ಮತ್ತು 'ರಾಕ್ಷಸಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಂದೆ ಪ್ರೊಡಕ್ಷನ್‌ ಕಂಪನಿಯನ್ನು ಈಗ ವಿಶಾಲ್ ನೋಡಿಕೊಳ್ಳುತ್ತಿದ್ದಾರೆ. 

ಮುರಿದುಬಿದ್ದ ನಟನ ಮದುವೆ; ವದಂತಿಗೆ ಬ್ರೇಕ್ ಹಾಕಿದ ತಂದೆ!

ಬಾಲಿವುಡ್‌ ನಟ ಅಮಿತಾಭ್ ಬಚ್ಚನ್, ಅಭಿಷೇಕ್, ಐಶ್ವರ್ಯಾ ರೈ ಹಾಗೂ ಪುತ್ರ ಆರಾಧ್ಯಾಗೂ ಕೊರೋನಾ ಪಾಸಿಟಿವ್ ಇರುವುದು ತಿಳಿದು ಬಂದ ಕಾರಣ ಮುಂಬೈನ ನಾನಾವಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸ್ಯಾಂಡಲ್‌ವುಡ್‌ನಲ್ಲಿ ನಟ ಪ್ರೇಮ್‌ ಕಾಮಾಕ್ಷಿ ಪಾಳ್ಯದಲ್ಲಿ ನೆಲೆಸಿದ್ದು ಕೊರೋನಾ ಸೋಂಕು ತಗುಲಿತ್ತು. ಕೆಲವು ದಿನಗಳ ಹಿಂದೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್‌ ಅಗಿದ್ದಾರೆ ಹಾಗೂ ಧ್ರುವ ಸರ್ಜಾ ಮತ್ತು ಪ್ರೇಮ್‌ ಅವರಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದ್ದು, ಯಾವುದೇ ಲಕ್ಷಣಗಳು ಇಲ್ಲದ ಕಾರಣ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು. 14 ದಿನಗಳ ನಂತರ ಮತ್ತೊಮ್ಮೆ ಟೆಸ್ಟ್ ಮಾಡಿಸಿ, ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿಗೂ ಕೊರೋನಾ ಸೋಂಕು ವಕ್ಕರಿಸಿತ್ತು. ಅವರೂ ಆಯುರ್ವೇದ ವೈದ್ಯ ಡಾ.ಗಿರಧರ ಕಜೆ ಅವರ ಆಯುರ್ವೇದ ಔಷಧಿ ತೆಗೆದುಕೊಂಡು, ಗುಣಮುಖರಾಗಿರುವುದಾಗಿ ತಿಳಿಸಿದ್ದರು. ಆ ಮೂಲಕ ಕೊರೋನಾ ವೈರಸ್‌ಗೆ ಆಯುರ್ವೇದ ಮದ್ದೂ ಉತ್ತಮ ಮದ್ದು ಎಂದು ಹೇಳಲಾಗುತ್ತಿದೆ.