ಚೆನ್ನೈ (ಮಾ. 02):  ‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆ ಆದರೆ, ನಾನು ಅವರ ಪರವಾಗಿ ನಿಲ್ಲುತ್ತೇನೆ’ ಎಂದು ನಟ ರಜನೀಕಾಂತ್‌ ಹೇಳಿಕೆ ನೀಡಿದ ಬೆನ್ನಲ್ಲೇ, ತಮಿಳುನಾಡು ಜಮಾತ್‌ ಉಲ್‌ ಉಲ್ಮಾ ಸಬೈ ನಿಯೋಗ ರಜನೀಕಾಂತ್‌ ಅವರನ್ನು ಅವರ ಚೆನ್ನೈನ ನಿವಾಸದಲ್ಲಿ ಭೇಟಿ ಆಗಿದೆ.

ಸಿಎಎ, ಎನ್‌ಸಿಆರ್‌ ಮತ್ತು ಎನ್‌ಪಿಆರ್‌ ಮುಸ್ಲಿಮರ ಮೇಲೆ ಉಂಟು ಮಾಡುವ ಪರಿಣಾಮಗಳ ಬಗ್ಗೆ ನಿಯೋಗದ ಸದಸ್ಯರು ರಜನೀಕಾಂತ್‌ ಜೊತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಏನು ಪರಮಾತ್ಮನ ಸ್ವರೂಪನೇ?

ಈ ವೇಳೆ ಮುಸ್ಲಿಮರಲ್ಲಿ ಭಯ ನಿವಾರಿಸಲು ತಮ್ಮಿಂದ ಸಾಧ್ಯವಾದ ಸಹಾಯ ನೆರವು ನೀಡುವುದಾಗಿ ನಿಯೋಗದ ಸದಸ್ಯರಿಗೆ ರಜನೀಕಾಂತ್‌ ಭರವಸೆ ನೀಡಿದ್ದಾರೆ. ದೆಹಲಿ ಹಿಂಸಾಚಾರವನ್ನು ತಡೆಯಲು ವಿಫಲವಾದ ಕೇಂದ್ರ ಸರ್ಕಾರದ ವಿರುದ್ಧ ರಜನೀಕಾಂತ್‌ ಇತ್ತೀಚೆಗೆ ಕಿಡಿಕಾರಿದ್ದರು.