ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್ 'ದರ್ಬಾರ್‌'ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ನಿರೀಕ್ಷಿತ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. 

ಮುರುಗದಾಸ್‌ ನಿರ್ದೇಶನ 'ದರ್ಬಾರ್' ಚಿತ್ರ ಜನವರಿ 9 ರಂದು ದೇಶದಾದ್ಯಂತ ತೆರೆ ಕಂಡಿತ್ತು.  ಚಿತ್ರಕ್ಕೆ 200 ಕೋಟಿ ಬಜೆಟ್‌ ಹಾಕಿದವರು ನಿರ್ಮಾಪಕ ಶುಭಶಂಕರ್. ಚಿತ್ರ ಬಾಕ್ಸಾಫೀಸ್‌ನಲ್ಲಿ  204 ಕೋಟಿ ಕಲೆಕ್ಷನ್‌ ಕಂಡಿದೆ. ಈ  ಚಿತ್ರಕ್ಕೆ ರಜನಿಕಾಂತ್‌ 108 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ. 

ಒಂದೇ ಚಿತ್ರಮಂದಿರದಲ್ಲಿ ದರ್ಬಾರ್ 87 ಶೋ: ಟಿಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

'ದರ್ಬಾರ್‌' ಚಿತ್ರ ಖರೀದಿಸಿದ ವಿತರಕರು ಈಗ ಸಂಕಷ್ಟದಲ್ಲಿದ್ದಾರೆ.  ಚಿತ್ರಕೊಳ್ಳಲು ಯಾರೂ ಮುಂದಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.  ನೆರವಿಗಾಗಿ ಲೂಕಾ ಪ್ರೊಡಕ್ಷನ್‌ ಮೊರೆ ಹೋದರೂ ಉಪಯೋಗವಾಗದ ಕಾರಣ ರಜನಿಕಾಂತ್ ಅವರೇ ಸಹಾಯ ಮಾಡಬೇಕು ಎಂದು ಬೇಡಿಕೊಂಡಿದ್ದಾರೆ. 

ಈ ಹಿಂದೆ ತಮ್ಮ ಚಿತ್ರತಂಡ ನಷ್ಟ ಅನುಭವಿಸಿದಾಗ ರಜನಿಕಾಂತ್‌ ತಂಡದವರಿಗೆ ಬೆನ್ನೆಲುಬಾಗಿ ನಿಂತಿದ್ದರು.

ಮ್ಯಾನ್ VS ವೈಲ್ಡ್: ತಲೈವಾ ಹುಮ್ಮಸ್ಸಿಗೆ ಬಿಯರ್ ಗ್ರಿಲ್ಸ್ ಬೋಲ್ಡ್!