ಕೆಲವು ತಾರೆಯರು ಸೋಷಿಯಲ್ ಮೀಡಿಯಾ ಬಳಸುತ್ತಾರೆ. ಆದರೆ ತುಂಬಾನೇ ಕಡಿಮೆ ಅಥವಾ ಅಪರೂಪ. ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದೇ ನಟಿ ತ್ರಿಷಾ ಕೃಷ್ಣನ್. ಏನಾದರೂ ವಿಶೇಷತೆ ಇದ್ದರೆ ಮಾತ್ರ ಫೋಟೋ ಶೇರ್ ಮಾಡುವ ಈ ನಟಿ ಇದ್ದಕ್ಕಿದ್ದಂತೆ ಗಾಯಗೊಂಡ ಬೆರಳಿನ ಫೋಟೋ ಶೇರ್ ಮಾಡಿದ್ದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. 

'ನನ್ನ ಬದುಕು ಬದಲಾದ ದಿನ' ಮಿಸ್‌ ಚೆನ್ನೈ ಫೋಟೊ ಶೇರ್ ಮಾಡಿದ ತ್ರಿಷಾ

ಹೌದು ಮಣಿರತ್ನಂ ನಿರ್ದೇಶನದ ಪೊನ್ನಿಯರ್ ಸೆಲ್ವನ್ ಚಿತ್ರದಲ್ಲಿ ತ್ರಿಷಾ ಚೋಳ ರಾಣಿ ಕುಂದವಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಚಿತ್ರೀಕರಣವನ್ನೂ ಪ್ರಾರಂಭಿಸಿದ್ದಾರೆ. ಬಹುತೇಕ ದೃ,ಶ್ಯಗಳಲ್ಲಿ ಕುದುರೆ ಸವಾರಿ ಇರುವುದರಿಂದ ನಟಿ ತ್ರಿಷಾ ಕುದುರೆ ಸವಾರಿ ಮಾಡಲು ಟ್ರೈನಿಂಗ್ ಪಡೆದು, ಆನಂತರ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಟ್ರೈನಿಂಗ್ ಪಡೆಯುವಾಗ ಹಗ್ಗವನ್ನು ಬಿಗಿಯಾಗಿ ಹಿಡಿಯುತ್ತಿದ್ದ ಕಾರಣ ಬೆರಳಿಗೆ  ತೀವ್ರವಾಗಿ ಗಾಯವಾಗಿದೆ ಎನ್ನಲಾಗಿದೆ. 

ನಯನತಾರಾರ ಎಕ್ಸ್‌ ಬಾಯ್‌ಫ್ರೆಂಡ್‌ ಸಿಂಬು ಮದುವೆಯಾಗ್ತಾರಾ ತ್ರಿಶಾ? 

 
 
 
 
 
 
 
 
 
 
 
 
 

Say hi to my boo🐎😍 #SkysYourLimit

A post shared by Trish (@trishakrishnan) on Oct 29, 2020 at 12:19am PDT

ಚಿತ್ರದ ವಿಶೇಷತೆ ಅಂದರೆ ಇದೇ ಚಿತ್ರದಲ್ಲಿ ವಿಶ್ವ ಸುಂದರಿ ಐಶ್ವರ್ಯಾ ರೈ ಕೂಡ ಅಭಿನಯಿಸುತ್ತಿದ್ದಾರೆ. ನಂದಿನಿ ದೇವಿ ಪಾತ್ರದಲ್ಲಿ ಐಶ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪ್ರಾಚೀನ ಕಾಲದ ತಮಿಳು ಕತೆ ಆಧಾರಿತ ಸಿನಿಮಾ ಇದಾಗಿದ್ದು, ಪಕ್ಕಾ ಬಿಗ್ ಹಿಟ್ ಆಗುತ್ತದೆ ಎಂಬುವುದು ತಂಡದ ಮಾತು. ನಟ ಕಾರ್ತಿ, ವಂದಿಯಾ ದೇವನ್ ಪಾತ್ರದಲ್ಲಿ, ಜಯರಾಮ್‌ ರವಿ ಚೋಳ ರಾಜನಾಗಿ ಮಿಂಚುತ್ತಿದ್ದಾರೆ.  ದೀಪಾವಳಿ ಹಬ್ಬದ ನಂತರ ಇನ್ನಿತರ ನಟ-ನಟಿಯರು ಚಿತ್ರೀಕರಣದಲ್ಲಿ ಭಾಗಿಯಾಗುವ ಸಾಧ್ಯತೆಗಳಿದೆ.