ಕಾಲಿವುಡ್ ನಿರ್ದೇಶಕ ಆರ್‌.ಕೆ. ಸುರೇಶ್ ಹಾಗೂ ಫೈನ್ಯಾನ್ಷಿಯರ್ ಮಧು ಗುಟ್ಟಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಕ್ಟೋಬರ್ 21ರಂದು ನಿರ್ದೇಶಕ ಟ್ಟಿಟರ್‌ನಲ್ಲಿ ಈ ವಿಚಾರ ಹಂಚಿಕೊಂಡ ನಂತರ ನೆಟ್ಟಿಗರು ಪ್ರತಿಕ್ರಿಯಿಸುತ್ತಿರುವ ರೀತಿ ತುಂಬಾನೇ ಶಾಕಿಂಗ್ ಆಗಿದೆ.

ಬಿ-ಟೌನ್‌ನಲ್ಲಿ ಮಂಗಳ ವಾದ್ಯ; ಆರ್ಯನ್- ನೈಸಾ ಮದುವೆ ಯಾವಾಗ? 

'ನನ್ನ ಜೀವನದ ಅತಿ ಸಂತೋಷದ ಗಳಿಗೆ ಬಗ್ಗೆ ನಿಮ್ಮ ಜೊತೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ನಾನು ಮದುವೆಯಾಗಿರುವೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆ ಹಾಗೂ ಆಶೀರ್ವಾದ ಹೀಗೇ ಸದಾ ನಮ್ಮ ಮೇಲಿರಲಿ. ನಮ್ಮ ಪ್ರೈವೇಸಿಯನ್ನು ಗೌರವಿಸಬೇಕೆಂದು ಮನವಿ ಮಾಡಿಕೊಳ್ಳುವೆ,' ಎಂದು ಸುರೇಶ್ ಟ್ಟೀಟ್ ಮಾಡಿದ್ದಾರೆ.

ಕೆಂಪು ಬಣ್ಣದ ರೇಶ್ಮೆ ಸೀರೆಯಲ್ಲಿ ಕಂಗೊಳಿಸುತ್ತಿರುವ ಮಧು ಹಾಗೂ ಪಂಚೆ ಶೆಲ್ಯ ಧರಿಸಿ ಕುಳಿತಿರುವ ಸುರೇಶ್ ಫೋಟೋದಲ್ಲಿ ಪತ್ನಿಗೆ ಸಿಂಧೂರ ಇಡುತ್ತಿದ್ದಾರೆ. ವಿಭಿನ್ನವಾದ ಆಭರಣ ಧರಿಸಿದ ಮಧು ಗೊಂಬೆಯಂತೆ ಕಂಗೊಳಿಸುತ್ತಿದ್ದಾರೆ.

ಮಾಡೆಲಿಂಗ್ ಚೆಲುವೆ ಕೈ ಹಿಡೀತಿದ್ದಾರೆ 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ಚಂದು..! 

ಅಭಿಮಾನಿಗಳು ಶಾಕ್:
ರಮೇಶ್‌ ಮದುವೆ ಫೋಟೋವನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. 'ಹ್ಯಾಪಿ ಲೈಫ್ ಸರ್‌' ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು 'ನಿಮ್ಮ ವೈಫ್‌ ಗೊಂಬೆ ಹಾಗಿರುವುದಕ್ಕೆ ಎಲ್ಲಿಯೂ ಫೋಟೋ ಶೇರ್ ಮಾಡುತ್ತಿಲ್ವಾ?' ಎಂದು ಪ್ರಶ್ನಿಸಿದ್ದಾರೆ.

ಹಲವು ವರ್ಷಗಳ ಹಿಂದೆ ಕಾಲೇಜು‌ ಗೆಳತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಬ್ಬ ಮಗನಿದ್ದಾರೆ. ಆದರೆ, ವೈಮನಸ್ಸಿನಿಂದ ದೂರವಾಗಿ ವಿಚ್ಛೇದನ ಪಡೆದುಕೊಂಡರು. ಆನಂತರ ಕಿರುತೆರೆ ನಟಿ ದಿವ್ಯಾಳ ಜೊತೆ ಮದುವೆಯಾದರು. ಆ ಮದುವೆಯೂ ವೈಮನಸ್ಸಿನಿಂದ ದೂರವಾಯ್ತು. ಎರಡೂ ಮದುವೆಗಳು ಮುರಿದು ಬಿದ್ದ ಕಾರಣ ತಮ್ಮ ಮೂರನೇ ಮದುವೆ ಹಾಗೂ ಪರ್ಸನಲ್ ಲೈಫ‌ನ್ನು ಪ್ರೈವೇಟ್‌ ಆಗಿಡಲು ನಿರ್ಧರಿಸಿದ್ದಾರೆ.