Asianet Suvarna News Asianet Suvarna News

'ಅರ್ಜುನ್ ರೆಡ್ಡಿ' ರೊಮ್ಯಾನ್ಸ್ ಹೆಚ್ಚಿದೆ; ಸಿನಿಮಾ ಕೈ ಬಿಟ್ಟು ಪಶ್ಚಾತ್ತಾಪ ಪಟ್ಟ ನಟಿ!

'ಅರ್ಜುನ್ ರೆಡ್ಡಿ' ಸಿನಿಮಾ ತಿರಸ್ಕರಿಸಿದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಒಪ್ಪಿಕೊಂಡ ನಟಿ ಪಾರ್ವತಿ ನಾಯರ್.

Kollywood Parvati Nair regrets missing Arjun reddy film project vcs
Author
Bangalore, First Published Jul 27, 2021, 1:16 PM IST
  • Facebook
  • Twitter
  • Whatsapp

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೊಸ ರೀತಿಯ ಲವ್ ಅಲೆ ಎಬ್ಬಿಸಿದ ಸಿನಿಮಾ ಅರ್ಜುನ್ ರೆಡ್ಡಿ. ಡಾಕ್ಟರ್ ಆಗಿದ್ದರೂ, ವಿಪರೀತ ಕುಡೀತಾನೆ. ಆದರೆ ಒಮ್ಮೆ ಇಷ್ಟ ಪಟ್ಟರೆ ಮುಗೀತು, ಲೈಫ್ ಲಾಂಗ್ ಅವಳೇ ಬೇಕು ಎನ್ನುವ ಹಟವಾದಿ ಹುಡುಗ ಅರ್ಜುನ್ ಕಥೆ. ಬಂಡವಾಳಕ್ಕೂ ಮೀರಿ ಲಾಭ ಪಡೆದ ಅರ್ಜುನ್‌ ಸಿನಿಮಾ ಆಫರ್‌ ಅನ್ನೇ ಈ ನಟಿ ತಿರಸ್ಕರಿಸಿದ್ದರಂತೆ. 

ವಿಜಯ್ ದೇವರಕೊಂಡಗೆ ಬಿಗ್ ಬ್ರೇಕ್ ಕೊಟ್ಟ 'ಅರ್ಜುನ್ ರೆಡ್ಡಿ'ಗೆ 3 ವರ್ಷ..!

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಮಾಡೆಲ್ ಕಮ್ ನಟಿ ಪಾರ್ವತಿ ನಾಯರ್‌ಗೆ ಅರ್ಜುನ್ ರೆಡ್ಡಿ ಸಿನಿಮಾ ಆಫರ್‌ ಬಂದಿತ್ತಂತೆ. 'ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ತುಂಬಾ ರೊಮ್ಯಾನ್ಸ್‌ ದೃಶ್ಯಗಳಿವೆ, ಎಂದು ನೀವು ಸಿನಿಮಾ ರಿಜೆಕ್ಟ್ ಮಾಡಿದ್ದು ನಿಜವೇ? ನಿರಾಕರಿಸಿದ್ದಕ್ಕೆ ಪಶ್ಚಾತ್ತಾಪ ಪಡುತ್ತೀರಾ?' ಎಂದು ಅಭಿಮಾನಿಯೊಬ್ಬ ಕೇಳಿದ್ದಾನೆ. 'ಹೌದು. ನಾನು ಸಿನಿಮಾ ರೆಜೆಕ್ಟ್ ಮಾಡಿದ್ದು ನಿಜ. ಅದೊಂದು ಸೂಪರ್ ಹಿಟ್ ಸಿನಿಮಾ, ನಾನು ಮಿಸ್ ಮಾಡಿಕೊಳ್ಳಬಾರದಿತ್ತು ಅನಿಸಿದೆ. ಅದರೆ ನಾನು ಒಂದು ವಿಚಾರ ನಂಬುತ್ತೇನೆ. ನಮ್ಮದು ಅಥವಾ ನಮಗೆ ಸೇರಬೇಕು ಅಂತಿದ್ದರೆ, ಖಂಡಿತಾ ಯಾವುದಾದರೂ ಒಂದು ದಾರಿಯಲ್ಲಿ ನಮ್ಮನ್ನು ಸೇರುತ್ತದೆ. ಹೀಗಾಗಿ ಇನ್ನೂ ಸೂಪರ್ ಕಥೆಗಳು ನನ್ನನ್ನು ಹುಡುಕಿಕೊಂಡು ಬರಲಿವೆ,' ಎಂದು ಪಾರ್ವತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Kollywood Parvati Nair regrets missing Arjun reddy film project vcs

ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಪಾರ್ವತಿ ನಾಯರ್ 2014ರಲ್ಲಿ ಕನ್ನಡದ 'ವಾಸ್ಕೊಡಿಗಾಮಾ' ಸಿನಿಮಾದಲ್ಲಿ ನಟಿಸಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನ ಮಾಡಿರುವ, 'ಉತ್ತಮ ವಿಲನ್' ಚಿತ್ರದಲ್ಲಿ ಕಮಲ್ ಹಾಸನ್‌ ಜೊತೆ ಅಭಿನಯಿಸಿದ್ದಾರೆ. ಇದೀಗ ಹಿಂದಿಯಲ್ಲಿ '83' ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.

Follow Us:
Download App:
  • android
  • ios