‘ಈ ವ್ಯಕ್ತಿಗೆ ಮಾಡೋದಕ್ಕೇನೂ ಕೆಲ್ಸ ಇಲ್ವಾ? ಮೂರು ಹೊತ್ತೂ ಹೆಂಡ್ತಿ ಜೊತೆಗೆ ಕಾಡು ಸುತ್ತೋದು, ಓಡೋದು ಇಷ್ಟೇ ಮಾಡ್ತಿರೋದಾ?’ಮಿಲಿಂದ್ ಸೋಮನ್ ಬಗ್ಗೆ ಇತ್ತೀಚೆಗೆ ಸೆಲೆಬ್ರಿಟಿಯೊಬ್ಬರು ಆಪ್ತವಲಯದಲ್ಲಿ ಹೀಗೊಂದು ಕಮೆಂಟ್ ಪಾಸ್ ಮಾಡಿದ್ರು. ಅವ್ರು ಅಂತಲ್ಲ, ಹೆಚ್ಚಿನವರಿಗೆ ಮಿಲಿಂದ್ ಸೋಮನ್ ಎಂಬ ಮಾಡೆಲ್ ಕಂ ನಟ ಕಂ ಫಿಟ್ ನೆಸ್ ಐಕಾನ್ ಹೀಗೆ ದಿನಕ್ಕೊಂದು ಬಗೆಯ ಫಿಟ್ ನೆಸ್ ಟೆಕ್ನಿಕ್ ಜೊತೆಗೆ ಸೋಷಲ್ ಮೀಡಿಯಾದಲ್ಲಿ ಕಾಣಿಸಿಕೊಂಡರೆ ಹೊಟ್ಟೆಯಲ್ಲಿ ಹಸಿಮೆಣಸಿನ ಕಾಯಿ ನುರಿದಿಟ್ಟಂಥಾ ಫೀಲ್.

ತಮ್ಮ ಫಿಟ್ ನೆಸ್ ಬಗ್ಗೆ ಕೇವಲವಾಗಿ ಮಾತಾಡೋರ ಬಗ್ಗೆ 54ರ ಹರೆಯದ ಮಿಲಿಂದ್ ದು ದಿವ್ಯ ಮೌನ. ಈ ಮೌನ ಆರೋಗ್ಯಕ್ಕೂ ಒಳ್ಳೇದು ಅಂತ ಅವರು ನಂಬಿದ್ದಾರೆ. ದಿನಾ ರನ್ನಿಂಗ್ ಮಾಡೋದು ಮಿಲಿಂದ್ ಗೆ ಇಷ್ಟ. ಕಾಡಿನಲ್ಲಿ ದಿನವಿಡೀ ಅಲೆದಾಡೋದರಲ್ಲಿ ಅವರು ಹೆಚ್ಚಿನ ಖುಷಿ ಕಂಡುಕೊಂಡಿದ್ದಾರೆ. ಇತ್ತೀಚೆಗೆ ಬಾಳ ಗೆಳತಿ ಅಂಕಿತಾ ಜೊತೆಗೆ ಕಿಲಿಮಂಜಾರೋದಂಥಾ ಬೃಹತ್ ಪರ್ವತ ಹತ್ತಿಳಿದಿದ್ದಾರೆ. ಹಿಮಾಲಯ ರೇಂಜ್ ನಲ್ಲಿ ಹಲವು ಶಿಖರಗಳಿಗೆ ಟ್ರೆಕ್ಕಿಂಗ್ ಮಾಡಿದ್ದಾರೆ. ಮನೆಯಲ್ಲೇ ತರಕಾರಿ, ಹಣ್ಣು ಬೆಳೆದು ತಿನ್ನುತ್ತಾರೆ. ಫಿಟ್ ನೆಸ್ ಮತ್ತು ಆರೋಗ್ಯ ಇವರ ಅಚ್ಚುಮೆಚ್ಚಿನ ಸಬ್ಜೆಕ್ಟ್. 

ಮಿಲಿಂದ್ ಸೋಮನ್ ಅವರ ಲೇಟೆಸ್ಟ್ ಫಿಟ್ ನೆಸ್ ಟೆಕ್ನಿಕ್ ಅಂದರೆ ಶಿನ್ ರಿನ್ ಯೋಕು ಅರ್ಥಾತ್ ಫಾರೆಸ್ಟ್ ಬಾತ್ ಅಥವಾ ಕಾಡಿನ ಸ್ನಾನ. ತಾನು ಕಾಡಿನ ಸ್ನಾನ ಮಾಡುತ್ತಿರೋ ಫೋಟೋ ಹಾಕಿ ಫ್ಯಾನ್ ಗಳ ಕುತೂಹಲದ ಕಣ್ಣುಗಳಿಗೆ ಆಹಾರ ಒದಗಿಸಿದ್ದಾರೆ. 

ಕಾಡಿನ ಸ್ನಾನ ಮಾಡೋದು ಹೇಗೆ?
ಇದು ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲ, ಮಾನಸಿನ ನೆಮ್ಮದಿ, ಖುಷಿ, ಉಲ್ಲಾಸ ನೀಡೋ ವರ್ಕೌಟೂ ಹೌದು. ಜೊತೆಗೆ ನಿಸರ್ಗದ ಜೊತೆಗೆ ಸಂಪೂರ್ಣ ಕನೆಕ್ಟ್ ಆಗೋ ವಿಧಾನವೂ ಹೌದು. ಮೊದಲು ಜನರ ಓಡಾಟ ಇಲ್ಲದ ಕಾಡನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿಗೆ ಹೋದ ಮೇಲೆ ನಿಮ್ಮ ದೇಹ, ಮನಸ್ಸುಗಳೆರಡನ್ನೂ ನಿಸರ್ಗದ ಜೊತೆಗೆ ಕನೆಕ್ಟ್ ಮಾಡ್ತಾ ಹೋಗಬೇಕು. ಮನಸ್ಸಲ್ಲಿ ಆ ಪ್ರಕೃತಿಯ ಚಿತ್ರವೇ ತುಂಬಿರಬೇಕು. ಬೇರೆ ಯೋಚನೆಗಳನ್ನು ಹತ್ತಿರ ಸೇರಿಸಬಾರದು. ನಿಸರ್ಗ ಸಿರಿಯನ್ನು ನೋಡೋದು, ಪ್ರಕೃತಿಯ ವಿವಿಧ ಸದ್ದುಗಳನ್ನು ಆಲಿಸೋದು, ಆ ಘಮವನ್ನು ಆಘ್ರಾಣಿಸೋದು, ಹುಲ್ಲಿನ ರುಚಿ, ಕಾಡು ಹಣ್ಣುಗಳ ರುಚಿ ನೋಡೋದು, ಮರ, ಎಲೆಗಳ, ಹುಲ್ಲುಗಳ ಸ್ಪರ್ಶವನ್ನು ಅನುಭವಿಸೋದು. 

ಧಾರಾವಾಹಿ ನಟಿಯರ ಟ್ರೆಂಡೀ ಬ್ಲೌಸ್ ವಿನ್ಯಾಸಗಳು 

ಎರಡು ಗಂಟೆ ಇಂಥಾ ಬಾತ್ ಮಾಡಿ
ಹೀಗೆ ಎರಡು ಗಂಟೆಗಳ ಕಾಲ ಕಾಡಿನಲ್ಲಿ ನೀವು ಕಳೆದು ಹೋದರೆ ಸಾಕಷ್ಟು ಪ್ರಯೋಜನಗಳಿವೆ. ಮನಸ್ಸಿನ ಒತ್ತಡ ನಿವಾರಣೆಯಾಗುತ್ತದೆ. ಮನಸ್ಸು ದೇಹಗಳೆರಡೂ ರಿಲ್ಯಾಕ್ಸ್ ಆಗಿ ತಾಜಾತನವನ್ನು ತುಂಬಿಕೊಳ್ಳುತ್ತವೆ. ಇನ್ನೂ ಅನೇಕ ಪ್ರಯೋಜನಗಳು ನೇರ ಅನುಭವಕ್ಕೆ ಬರುತ್ತವೆ. 

ನೋ ಗ್ಯಾಜೆಟ್ಸ್
ಈ ಟೈಮ್ ನಲ್ಲಿ ನಿಮ್ಮ ಬಳಿ ಯಾವ ಗ್ಯಾಜೆಟ್ ಗಳೂ ಇರಬಾರದು. ನಾಗರಿಕ ಸಮಾಜದಿಂದ ಈ 2 ಗಂಟೆ ಸಂಪೂರ್ಣ ಹೊರ ಬಂದಿರಬೇಕು. ನಿಸರ್ಗವೇ ನಿಮಗೆಲ್ಲ ಆಗಬೇಕು. 

ಮಗನ ಕೊಂದ ಕೊಲೆಗಾತಿ: ರಿಯಾ ವಿರುದ್ಧ ಸುಶಾಂತ್ ತಂದೆ ಆಕ್ರೋಶ 

ಮಿಲಿಂದ್ ಹೇಳಿದ್ದು
ಜಪಾನಿನ ಈ ಫಿಟ್ ನೆಸ್ ಟೆಕ್ನಿಕ್‌ನಿಂದ ನನಗೆ ಬಹಳ ಪ್ರಯೋಜನವಾಗಿದೆ. ಆಗಾಗ ಹೀಗೆ ಕಾಡಿನಲ್ಲಿ ಸಂಪೂರ್ಣ ಕಳೆದುಹೋಗುತ್ತೇನೆ. ಪ್ರಕೃತಿಯಿಂದ ಬಂದ ನಾವು ಪ್ರಕೃತಿ ಜೊತೆಗೇ ಒಂದಾದರೆ ಆಗುವ ಆನಂದವನ್ನು ವರ್ಣಿಸೋದು ಕಷ್ಟ ಅಂತಾರೆ ಮಿಲಿಂದ್. 

ಈ ಇಕೋ ಥೆರಪಿಯ ಪ್ರಯೋಜನಗಳನ್ನು ಎಲ್ಲರೂ ಪಡೆಯಬಹುದು. ಇಂದಿನ ಆತಂಕ, ಒತ್ತಡ ನಿವಾರಣೆಗೂ ಇಂಥದ್ದೊಂದು ಟೆಕ್ನಿಕ್ ಅನಿವಾರ್ಯವೂ ಹೌದು. 

ಪೂಜಾ ಹೆಗ್ಡೆ ಹೇಳಿದ ಫಿಟ್‌ನೆಸ್‌ ಪಾಠಗಳು;ಜಿಮ್‌ನಲ್ಲೂ ಸೈ, ಯೋಗಕ್ಕೂ