ಹೈದ್ರಾಬಾದ್ : ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ - ಅಭಿಷೇಕ್ ಪುತ್ರಿ ಆರಾಧ್ಯ ಬಚ್ಚನ್ ಗೆ ರಾಜಕೀಯದಲ್ಲಿ ಅತ್ಯುತ್ತಮ ಭವಿಷ್ಯವಿದೆ ಎಂದು ಹೈದ್ರಾಬಾದ್ ಮೂಲದ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಆಕೆ ದೇಶದ ಪ್ರಧಾನಿಯಾಗುತ್ತಾಳೆ ಎಂದೂ ಭವಿಷ್ಯ ನುಡಿದಿದ್ದಾರೆ.

ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಮಾತನಾಡಿದ ಜ್ಯೋತಿಷಿ ಗ್ಯಾನೇಶ್ವರ್ ಅವರು  ಈ ಬಗ್ಗೆ ಹೇಳಿದ್ದಾರೆ. ಅಲ್ಲದೇ ರೋಹಿಣಿ ಎಂದು ಹೆಸರನ್ನು ಬದಲಾಯಿಸಿಕೊಂಡಲ್ಲಿ ಉಜ್ವಲ ಭವಿಷ್ಯ ಆಕೆಯದ್ದಾಗಲಿದೆ ಎಂದಿದ್ದಾರೆ. 

ಇದೇ ಜ್ಯೋತಿಷಿ ನಟ ಚಿರಂಜೀವಿ ಹಾಗೂ ರಜಿನಿಕಾಂತ್ ಅವರ ರಾಜಕಾರಣದ ಬಗ್ಗೆಯೂ ಕೂಡ ಭವಿಷ್ಯ ನುಡಿದಿದ್ದರು. 2019ರ ಲೋಕಸಭಾ ಚುನಾವಣೆಯ ಬಗ್ಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಹಾಗೂ ರಜನಿಕಾಂತ್ ಮುಂದಿನ ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತಾರೆ ಎಂದು, 2024 ಪಾಕಿಸ್ತಾನ -  ಭಾರತ ನಡುವೆ ಯುದ್ಧ ನಡೆಯಲಿದೆ ಎಂದೂ ಕೂಡ ಅವರು ಭವಿಷ್ಯ ನುಡಿದಿದ್ದಾರೆ. 

 ಅಲ್ಲದೇ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಈ ವರ್ಷ ಮದುವೆಯನ್ನು ಮುಂದೂಡಿ 2019ಕ್ಕೆ ತಮ್ಮ ವಿವಾಹ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.