‘ಜಗ್ಗೇಶ್ ಹೇಳೋ ಥರದ ಡೈಲಾಗ್ ನಾನು ಹೇಳಿದ್ರೆ ಯಾವ ರೇಂಜ್‌ಗೆ ಟ್ರೋಲ್ ಆಗಬಹುದು ಅಂತ ಯೋಚಿಸ್ತಿದ್ದೆ. ನಾನು ಜಗ್ಗೇಶ್ ಥರ ಡೈಲಾಗ್ ಹೊಡೆದ್ರೂ ನ್ಯೂಸಲ್ಲಿರ್ತೀನಿ, ಯಾರಿಗೋ ಸಪೋರ್ಚ್ ಮಾಡಿಲ್ಲಾಂದ್ರೂ ನ್ಯೂಸಲ್ಲಿರ್ತೀನಿ’ ಎಂದು ಮಾರ್ಮಿಕವಾಗಿ ಹೇಳಿದ್ದು ಸುದೀಪ್. ಹೀಗೆ ಹೇಳೋ ಮೂಲಕ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ಕಿಚ್ಚ ಸುದೀಪ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
‘ಜಗ್ಗೇಶ್ ಹೇಳೋ ಥರದ ಡೈಲಾಗ್ ನಾನು ಹೇಳಿದ್ರೆ ಯಾವ ರೇಂಜ್‌ಗೆ ಟ್ರೋಲ್ ಆಗಬಹುದು ಅಂತ ಯೋಚಿಸ್ತಿದ್ದೆ. ನಾನು ಜಗ್ಗೇಶ್ ಥರ ಡೈಲಾಗ್ ಹೊಡೆದ್ರೂ ನ್ಯೂಸಲ್ಲಿರ್ತೀನಿ, ಯಾರಿಗೋ ಸಪೋರ್ಚ್ ಮಾಡಿಲ್ಲಾಂದ್ರೂ ನ್ಯೂಸಲ್ಲಿರ್ತೀನಿ’ ಎಂದು ಮಾರ್ಮಿಕವಾಗಿ ಹೇಳಿದ್ದು ಸುದೀಪ್. ಹೀಗೆ ಹೇಳೋ ಮೂಲಕ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ಕಿಚ್ಚ ಸುದೀಪ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ವಿಜಯ ಪ್ರಸಾದ್ ನಿರ್ದೇಶನ, ಜಗ್ಗೇಶ್ ನಟನೆಯ ‘ತೋತಾಪುರಿ’ ಚಿತ್ರದ ಟ್ರೇಲರ್ ಲಾಂಚ್ ಮಾಡಿ ಸುದೀಪ್ ಮಾತನಾಡುತ್ತಿದ್ದರು. ‘ಕೆಲವೊಂದು ಡೈಲಾಗ್ ಕೆಲವೊಬ್ಬರ ಬಾಯಿಂದ ಬಂದಾಗಲೇ ಜನ ಅದನ್ನು ಹ್ಯೂಮರ್ ಸೆನ್ಸ್‌ನಲ್ಲಿ ತಗೊಳ್ತಾರೆ. ಅಂಥಾ ಸಾಮರ್ಥ್ಯ ಇರುವ ನಟ ಜಗ್ಗೇಶ್. ಈ ಚಿತ್ರದಲ್ಲಿ ನಟಿಸಿರುವ ಧನಂಜಯ ಅವರಂಥ ಇನ್ನೊಬ್ಬ ಕಲಾವಿದ ಕನ್ನಡ ಚಿತ್ರರಂಗದಲ್ಲಿಲ್ಲ. ಅವರ ಪ್ರತಿಭೆಯನ್ನು ಚಿತ್ರರಂಗ ಬಳಸಿಕೊಳ್ಳಬೇಕು’ ಎಂದರು.
‘ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಮೊದಲ ಕನ್ನಡ ನಟ ಸುದೀಪ್’ ಎಂದು ಮಾತಿಗಾರಂಭಿಸಿದ ಜಗ್ಗೇಶ್, ತಮ್ಮ ಎಂದಿನ ಹಾಸ್ಯ ಶೈಲಿಯಲ್ಲಿ ಅಧ್ಯಾತ್ಮವನ್ನೂ ಬೆರೆಸಿ ಮಾತನಾಡಿದರು. ‘ನಿರ್ದೇಶಕ ವಿಜಯ ಪ್ರಸಾದ್ ಶೂಟಿಂಗ್ ಟೈಮಲ್ಲಿ ಕೊಟ್ಟಕಷ್ಟನೆನೆಸಿಕೊಂಡರೆ ಇವರು ಹೋದ ಜನ್ಮದಲ್ಲಿ ನನ್ನ ಸವತಿನೇ ಆಗಿರ್ತಾರೆ. ಚಿತ್ರದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಬಂದ್ರೆ ಕೆಲವರು ಮೂಗು ಮುರೀತಾರೆ. ಅವರಿಗೆ ನಾನು ಕೇಳೋದು, ನೀವ್ಯಾರೂ ಡಬಲ್ ಮೀನಿಂಗ್ ಮಾತಾಡೋದೇ ಇಲ್ವಾ, ನಿಮಗೆ ಮಕ್ಕಳೇ ಆಗಿಲ್ವಾ, ಹೆಂಡ್ತಿ ಮುಖ ನೋಡಿದ ತಕ್ಷಣ ಮಕ್ಕಳು ಹುಟ್ಟಿಬಿಟ್ರಾ.. ನೀವು ನೀವಾಗಿದ್ದಾಗ ಏನು ಮಾಡ್ತೀರಿ ಅನ್ನೋದರ ಪ್ರತಿಬಿಂಬ ಈ ಸಿನಿಮಾ’ ಎಂದರು.
Totapuri: ಕಿಚ್ಚ ಸುದೀಪ್ ಕುರಿತು ನವರಸ ನಾಯಕ ಜಗ್ಗೇಶ್ ಮಾತುಗಳು!
ನಿರ್ದೇಶಕ ವಿಜಯ ಪ್ರಸಾದ್, ‘ಗಲಭೆ ಇಲ್ಲದ ಪುಟ್ಟಪ್ರೇಮಕಥೆ, ಭಾವೈಕ್ಯತೆಯ ಚಿತ್ರ ನಮ್ಮದು. ಈ ಸಿನಿಮಾ ಪ್ರೇಕ್ಷಕರ ಪಾಲಿಗೆ ಫಲವತ್ತಾದ ತೋತಾಪುರಿ’ ಎಂದರು. ಅದಿತಿ ಪ್ರಭುದೇವ, ‘ಮೊದ ಮೊದಲಿಗೆ ಬಹಳ ಹಿಂಜರಿಕೆಯಲ್ಲಿ ಕೆಲವು ಡೈಲಾಗ್ ಹೇಳ್ತಿದ್ದೆ. ಆಗ ನಿರ್ದೇಶಕರು ಹೇಳಿದ್ರು, ನೋಡು ಬಾಬಿ ಜಾನ್, ನಾವೆಲ್ಲ ನಮ್ಮ ಆಪ್ತರ ಜೊತೆಗೆ ಒಂದು ಮುಖದಿಂದ ಮಾತಾಡಿದರೆ ಹೊರಗಿನವರ ಜೊತೆಗೆ ಇನ್ನೊಂದು ಮುಖದಲ್ಲಿ ಮಾತಾಡ್ತೀವಿ. ನನಗೆ ಒರಿಜಿನಲ್ ಪಾತ್ರ ಬೇಕು ಅಂದರು. ಆಗ ನನ್ನ ಹಿಂಜರಿಕೆ ಹೋಯ್ತು’ ಎಂದರು.
ಡಾಲಿ ಧನಂಜಯ, ‘ತುಂಟತನ, ಪೋಲಿತನದ ಜೊತೆಗೆ ಅದ್ಭುತ ವಿಚಾರಗಳನ್ನು ದಾಟಿಸ್ತಾರೆ ವಿಜಯ ಪ್ರಸಾದ್. ಅವರ ನೀರು ದೋಸೆ ಸಿನಿಮಾ ಒಂದೇ ದಿನ ಎರಡು ಶೋ ನೋಡಿದ್ದೆ. ಇದರಲ್ಲಿ ನಾರಾಯಣ ಪಿಳ್ಳೆ ಪಾತ್ರ ಮಾಡ್ತಿದ್ದೀನಿ’ ಎಂದರು.
ಸುದೀಪ್ ಹಳೆ ವಿಡಿಯೋ ವೈರಲ್; ಇದು ಕಿಡಿಗೇಡಿಗಳ ಕೆಲಸ
ನಿರ್ಮಾಪಕ ಕೆ ಎ ಸುರೇಶ್, ಹಿರಿಯ ನಟ ದತ್ತಣ್ಣ, ವೆಂಕಟರಾವ್, ಕಲಾವಿದರಾದ ವೀಣಾ ಸುಂದರ್, ಚಸ್ವ, ಹೇಮಾ ದತ್‌್ತ, ರಾಜೇಶ್ವರಿ, ವತ್ಸಲಾ ಮೋಹನ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಾಗೂ ಚಿತ್ರತಂಡದವರು ಕಾರ್ಯಕ್ರಮದಲ್ಲಿದ್ದರು.
