ಕಿಚ್ಚ ಸುದೀಪ್ ನಟನೆಯ ‘ನಲ್ಲ’ ಸಿನಿಮಾ ಹೀರೋಯಿನ್ ವಿರುದ್ಧವೇ ಸ್ವಂತ ತಾಯಿ ದೂರು ನೀಡಿದ ವಿಷಯ ಗೊತ್ತಿದೆಯಾ?
‘ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ’ ಎಂದು ಆದಿ ಶಂಕರಾಚಾರ್ಯರು ಹೇಳುತ್ತಾರೆ. ಅಂದ್ರೆ ಕೆಟ್ಟ ಮಗ ಇರಬಹುದು, ಕೆಟ್ಟ ತಾಯಿ ಇರೋದಿಲ್ಲ ಎಂದು. ಕಿಚ್ಚ ಸುದೀಪ್ ಅಭಿನಯದ 'ನಲ್ಲ' ಸಿನಿಮಾ ನಾಯಕಿ ಸಂಗೀತಾಗೆ ಸ್ವಂತ ತಾಯಿಯೇ ವಿಲನ್. ಆದರೆ ಅವರ ತಾಯಿ ಕೆಟ್ಟ ತಾಯಿ ಹೌದೋ, ಇಲ್ಲವೋ ಎನ್ನೋದು ಸಂಗೀತಾಗೆ ಬಿಟ್ಟ ವಿಚಾರ.
ಕನ್ನಡ ಸಿನಿಮಾಗಳಲ್ಲಿ ನಟನೆ!
ಸಂಗೀತಾ, ಸುದೀಪ್ ನಟನೆಯ ‘ನಲ್ಲ’ ಸಿನಿಮಾ 2004ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದ 'ಮಲಗೇ ಮಲಗೇ ಕೂಸುಮರಿ', 'ನಿಜಾನಾ ನಿಜಾನಾ', 'ಮಚ್ಚಾ ಡವ್ ಹೊಡೆಯೋದು ಹೆಂಗೆ ಅಂತ' ಹಾಡುಗಳನ್ನು ಜನರು ಇಂದಿಗೂ ಹಾಡುತ್ತಾರೆ. 'ನಲ್ಲ' ಬಳಿಕ ಸಂಗೀತಾ ಅವರು ಕನ್ನಡದಲ್ಲಿ 'ಬೊಂಬಾಟ್ ಕಾರ್' ಸಿನಿಮಾದಲ್ಲಿ ನಟಿಸಿದ್ದರು. ಆಮೇಲೆ ಅವರು ಕನ್ನಡ ಸಿನಿಮಾದಲ್ಲಿ ನಟಿಸಲೇ ಇಲ್ಲ.
ಸುದೀಪ್ ಜೊತೆಗಿನ ಆತ್ಮೀಯ ಸ್ನೇಹದ ಬಗ್ಗೆ ಮಾತನಾಡಿದ್ದ ನಲ್ಲ ನಟಿ ಸಂಗೀತಾ?
ಚೆನ್ನೈ ಮೂಲದ ನಟಿ, ಗಾಯಕಿ!
ಚೆನ್ನೈ ಮೂಲದ ಸಂಗೀತಾಗೆ ಇಬ್ಬರು ಸಹೋದರರು. ಮಲಯಾಳಂ ಚಿತ್ರರಂಗದಲ್ಲಿ ಸಂಗೀತಾ ಅವರು ರಸಿಕಾ ಅಂತಲೇ ಫೇಮಸ್ ಆಗಿದ್ದರು. 1990, 2000ರ ಟೈಮ್‌ನಲ್ಲಿ ಸಂಗೀತಾ ಬಹುಬೇಡಿಕೆಯ ನಟಿ, ಗಾಯಕಿ. ತಮಿಳು, ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ಸಂಗೀತಾ ನಟಿಸಿದ್ದರೂ ಕೂಡ ಅವರು ಬಹುಬೇಗ ಪೋಷಕ ನಟಿಯಾದರು.
ದಳಪತಿ ವಿಜಯ್ ಸ್ನೇಹಿತೆ!
ದಳಪತಿ ವಿಜಯ್, ಸಂಗೀತಾ ಫ್ರೆಂಡ್ಸ್ ಆಗಿದ್ದವರು. ಸಂಗೀತಾ ಲವ್‌ನಲ್ಲಿ ಬೀಳಬಾರದು, ಸುರಕ್ಷಿತವಾಗಿರಬೇಕು ಅಂತ ದಳಪತಿ ವಿಜಯ್ ಅವರು ಸದಾ ಸಂಗೀತಾಗೆ ಬೈಯ್ಯುತ್ತಿದ್ದರು. ತಾನು ಕ್ರಿಶ್‌ನನ್ನು ಪ್ರೀತಿ ಮಾಡುತ್ತಿದ್ದೇನೆ ಎನ್ನುವ ವಿಷಯ ವಿಜಯ್‌ಗೆ ಗೊತ್ತಾದರೆ ಏನು ಹೇಳಬಹುದು ಎಂದು ಸಂಗೀತಾ ಭಯಪಟ್ಟಿದ್ದರು.
'ಮುಂಗಾರು ಮಳೆ' ಸುದೀಪ್ ಮಾಡಿದ್ದರೆ ಏನಾಗುತ್ತಿತ್ತು? ಕಿಚ್ಚ ಹೇಳಿದ ಉತ್ತರ
ತಾಯಿ ದೂರಿನಲ್ಲಿ ಏನಿತ್ತು?
2009ರಲ್ಲಿ ತಮಿಳುನಾಡಿನ ದೇಗುಲದಲ್ಲಿ ಸಂಗೀತಾ, ಕ್ರಿಶ್ ಲವ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. 2012ರಲ್ಲಿ ಈ ಜೋಡಿಗೆ ಮಗಳು ಶಿವಿಯಾ ಹುಟ್ಟಿದಳು. ತೆಲುಗು, ತಮಿಳು ಚಿತ್ರರಂಗದಲ್ಲಿ ಕ್ರಿಶ್ ಅವರು ಗಾಯಕರಾಗಿ, ನಟರಾಗಿ ಗುರುತಿಸಿಕೊಂಡಿದ್ದಾರೆ. 2006ರ ನಂತರ ಗಾಯಕ ಕ್ರಿಶ್ ಅವರು ಯಾವ ಚಿತ್ರದಲ್ಲಿಯೂ ಹಾಡಿಲ್ಲ. ಕ್ರಿಶ್ ಅವರು ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು.
ವಯಸ್ಸಾಗಿರೋ ಈ ಟೈಮ್‌ನಲ್ಲಿ ನಮ್ಮನ್ನು ಹೊರಗೆ ಹಾಕಿ ಆಸ್ತಿ ಹೊಡೆಯುತ್ತಿದ್ದಾಳೆ ಅಂತ ಸಂಗೀತಾ ವಿರುದ್ಧವೇ ತಾಯಿ ಭಾನುಮತಿ ದೂರು ನೀಡಿದ್ದರು.
ನಿಜಕ್ಕೂ ಆಗಿದ್ದೇನು?
ವಾಲಸರವಕ್ಕಂ ಅಲ್ಲಿರುವ ಮನೆಯಲ್ಲಿ ಮೊದಲ ಫ್ಲೋರ್‌ನಲ್ಲಿ ಸಂಗೀತಾ, ಗ್ರೌಂಡ್ ಫ್ಲೋರ್‌ನಲ್ಲಿ ತಾಯಿ ವಾಸ ಮಾಡುತ್ತಿದ್ದರು. ಈ ಮನೆ ಸಂಗೀತಾರ ಹೆಸರಲ್ಲಿತ್ತು. ಸಹೋದರರ ಜೊತೆ ಸೇರಿಕೊಂಡು ತಾಯಿ ಮನೆಯನ್ನು ವಶಪಡಿಸಿಕೊಳ್ಳಬಹುದು ಎಂದು ಸಂಗೀತಾ ಭಯಪಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಾಯಿ ಬಗ್ಗೆ ಅವರು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದರು.
ಸಂಗೀತಾ ಟ್ವೀಟ್ ಏನು?
'ನನ್ನನ್ನು ಈ ಜಗತ್ತಿಗೆ ತಂದಿದ್ದಕ್ಕೆ ಥ್ಯಾಂಕ್ಸ್. ಪಠ್ಯಶಿಕ್ಷಣ ಬಿಟ್ಟು ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿದ್ದಲ್ಲದೆ, 13ನೇ ವಯಸ್ಸಿಗೆ ದುಡಿಯುವ ಹಾಗೆ ಮಾಡಿದ್ದಕ್ಕೆ, ಬ್ಲ್ಯಾಂಕ್ ಚೆಕ್‌ನಲ್ಲಿ ನನ್ನ ಸಹಿ ಮಾಡಿಸಿದ್ದಕ್ಕೆ, ಜೀವನದಲ್ಲಿ ದುಡಿಯದೆ ಕುಡಿತ, ಡ್ರಗ್ ವ್ಯಸನಿ ಆಗಿದ್ದ ನಿನ್ನ ಇಬ್ಬರು ಗಂಡು ಮಕ್ಕಳಿಗೋಸ್ಕರ ನನ್ನ ಬಳಸಿಕೊಂಡಿದ್ದಕ್ಕೆ ಥ್ಯಾಂಕ್ಸ್. ನನ್ನ ಮದುವೆ ಬಗ್ಗೆ ಆಲೋಚನೆ ಮಾಡದೇ ಇರೋದಿಕ್ಕೆ, ನನ್ನ ಗಂಡನ ನೆಮ್ಮದಿ ಹಾಳು ಮಾಡಿದ್ದಕ್ಕೆ, ಕುಟುಂಬದ ಸಂತೋಷ ಕಿತ್ತುಕೊಂಡಿದ್ದಕ್ಕೆ ಥ್ಯಾಂಕ್ಸ್” ಎಂದು ಸಂಗೀತಾ ಅವರು ಹೇಳಿದ್ದರು.
