ಸುದೀಪ್ ಜೊತೆಗಿನ ಆತ್ಮೀಯ ಸ್ನೇಹದ ಬಗ್ಗೆ ಮಾತನಾಡಿದ್ದ ನಲ್ಲ ನಟಿ ಸಂಗೀತಾ?
Sangeetha Krish on Kiccha Sudeep ನಟ ಕಿಚ್ಚ ಸುದೀಪ್ ಅವರ ಸ್ನೇಹದ ಬಗ್ಗೆ ನಟಿ ಸಂಗೀತಾ ಮಾತನಾಡಿದ್ದಾರೆ. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಪ್ರಖ್ಯಾತರಾಗಿರುವ ನಟಿ ಸಂಗೀತಾ ಕನ್ನಡದಲ್ಲೂ ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ದಾರೆ.
ಬೆಂಗಳೂರು (ನ.25): ಈ ಹೃದಯ ನಿನಗಾಗಿ, ಜನನಿ ಜನ್ಮಭೂಮಿ, ಬೊಂಬಾಟ್ ಕಾರ್‌ನಂಥ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ತೆಲುಗು ಹಾಗೂ ತಮಿಳು ಚಿತ್ರರಂಗದ ಪ್ರಖ್ಯಾತ ನಟಿ ಸಂಗೀತಾ ಕ್ರಿಶ್, 2004ರಲ್ಲಿ ಬಿಡುಗಡೆ ಕಂಡ ನಲ್ಲ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ಹೀರೋಯಿನ್ ಆಗಿ ನಟಿಸಿದ್ದರು. ಕನ್ನಡದಲ್ಲಿ ದೀಪ್ತಿ ಎನ್ನುವ ಹೆಸರಿನಿಂದ ಗುರುತಾಗಿದ್ದ ಸಂಗೀತಾ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನಟ ಸುದೀಪ್ ಅವರ ಸ್ನೇಹಪರತೆಯ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ತುಂಬಾ ಜನಪ್ರಿಯರಾಗಿರುವ ಕಿಚ್ಚ ಸುದೀಪ್ ಅವರಂಥ ಗೆಳೆಯ ಸಿಗುವುದು ಬಹಳ ಅಪರೂಪ ಎಂದು ಸಂಗೀತಾ ಹೇಳಿದ್ದಾರೆ. ಸಾಮಾನ್ಯವಾಗಿ ಸುದೀಪ್ ತಮ್ಮ ಜೊತೆ ನಟಿಸಿದ ನಟ-ನಟಿಯರ ಜೊತೆ ಆತ್ಮೀಯ ಬಾಂಧವ್ಯ ಹೊಂದಿರುತ್ತಾರೆ. ಆದರೆ, ಈ ಬಗ್ಗೆ ಅವರುಗಳು ತಿಳಿಸುವುದು ಬಹಳ ಅಪರೂಪ. ಇತ್ತೀಚೆಗೆ ಸಂಗೀತಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸುದೀಪ್ ಅವರ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.
ಸುದೀಪ್ ಹಾಗೂ ನಾನು ಒಂದು ಕನ್ನಡ ಚಿತ್ರದಲ್ಲಿ (ನಲ್ಲ) ನಟಿಸಿದ್ದೆವು. ನನಗೆ ಯಾವಾಗಲೂ ಅವರ ಮೇಲೆ ಒಂದು ಆಕರ್ಷಣೆ ಹಾಗೂ ಮೆಚ್ಚುಗೆ ಇರಲು ಕಾರಣವೂ ಕೂಡ ಇದೆ. ಬಹುಶಃ ಅದು ಅವರ ಮಗಳ ಮೊದಲ ವರ್ಷದ ಬರ್ತ್‌ಡೇ ಇರಬೇಕು. ಇದಕ್ಕೆ ಸ್ವತಃ ಸುದೀಪ್ ಅವರು ನೀವು ಖಂಡಿತಾ ಬರಬೇಕು ಎಂದು ತಿಳಿಸಿದ್ದರು. ನೀವು ಆ ಸಂಭ್ರಮದಲ್ಲಿ ಭಾಗಿಯಾಗಬೇಕು ಎಂದು ಹೇಳಿದ್ದರು ಎಂದು ಸಂಗೀತಾ ಹೇಳಿದ್ದಾರೆ.
ನಾನೂ ಕೂಡ ಬರ್ತ್‌ಡೇ ಸಮಾರಂಭಕ್ಕೆ ಹೋಗಿದ್ದೆ. ಅಂದು ನಾನು ಅವರ ಮನೆಯಲ್ಲಿಯೇ ಉಳಿದುಕೊಂಡಿದ್ದೆ. ಅಂದು ಅವರ ಮನೆಯಲ್ಲಿ ಅವರ ಬೆಡ್‌ರೂಮ್‌ನಲ್ಲಿ ಅವರ ಪತ್ನಿಯೊಂದಿಗೆ ನಾನ ಮಲಗಿದ್ದೆ. ಇನ್ನು ಸುದೀಪ್ ಅವರು ತಮ್ಮ ಕಚೇರಿಯಲ್ಲಿ ಮಲಗಿಕೊಂಡಿದ್ದರು. ನಾನು ಇದ್ದ ಕಾರಣಕ್ಕಾಗಿ ಅವರು ತಮ್ಮ ಬೆಡ್‌ರೂಮ್‌ಅನ್ನೇ ನನಗೆ ನೀಡಿದ್ದರು. ನೀವು ಇಂದು ನನ್ನ ಮನೆಯಲ್ಲೇ ಇರಬೇಕು ಎಂದಿದ್ದ ಅವರು, ನೀವು ನನ್ನ ಕುಟುಂಬ ಇದ್ದ ರೀತಿ ಎಂದು ಹೇಳಿದ್ದರು. ಅವರು ನನ್ನ ಅಮೇಜಿಂಗ್ ಫ್ರೆಂಡ್. ನೀವು ರಾತ್ರಿಯ ಯಾವುದೇ ಸಮಯದಲ್ಲಿ ಬೇಕಾದರೂ ಅವರಿಗೆ ಕರೆ ಮಾಡಿ. ನನಗೆ ಏನಾದರೂ ಸಮಸ್ಯೆ ಎಂದು ಕರೆ ಮಾಡಿದರೆ, ಅವರು ಸಲ್ಲಿ ಖಂಡಿತಾ ಇರುತ್ತಾರೆ ಎಂದು ಸಂಗೀತಾ ಹೇಳಿದ್ದಾರೆ.
ಇದು ಕಿಚ್ಚ ಸುದೀಪ್ ಆಸ್ತಿ, 20 ಕೋಟಿಯ ಬಂಗಲೆ, ಮುಂಬೈನಲ್ಲಿ ಫಾರ್ಮ್‌ಹೌಸ್, ಲ್ಯಾಂಬೋರ್ಗಿನಿ ಗೀಳು!
ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್ ನಿರ್ದೇಶನದ ನಲ್ಲ ಚಿತ್ರದಲ್ಲಿ ಸುದೀಪ್, ಸಂಗೀತಾ ಅಲ್ಲದೆ ಶ್ರೀನಾಥ್, ನವೀನ್ ಮಯೂರ್, ಚಿತ್ರಾ ಶಣೈ ಹಾಗೂ ತಾರಾ ಕೂಡ ನಟಿಸಿದ್ದರು. ಇದು ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದ ಮೊದಲ ಚಿತ್ರ. 2004ರ ನವಂಬರ್ 12 ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಚಿತ್ರದ ಕೆಲವು ಹಾಡುಗಳು ಇಂದಿಗೂ ಕೂಡ ಜನಪ್ರಿಯವಾಗಿದೆ. 'ನಿಜಾನ, ನಿಜಾನ..', 'ಮಚಾ ಡವ್ ಹೊಡಿಯೋದ್ ಹೆಂಗಂತ ಹೇಳ್‌ಕೊಡು..' 'ಮಲಗೆ ಮಲಗೆ ಗುಬ್ಬಿ ಮರಿ..' ಹಾಡುಗಳು ಇಂದಿಗೂ ಹಿಟ್ ಸಾಲಿನಲ್ಲಿದೆ. ಕೆಸಿಎನ್ ಗೌಡ ಅವರ ಮೂರು ಮೊಮ್ಮಕ್ಕಳ ಹೆಸರಿನಲ್ಲಿ ಚಿತ್ರವನ್ನು ನಿರ್ಮಿಸಲಾಗಿತ್ತು.
ಬಿಗ್ ಬಾಸ್ ಮನೆಯಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಂಗೀತಾ; ಊಸರವಳ್ಳಿ ಆಗಿದ್ದು ಇದಕ್ಕೇನಾ?