ಮನೆಯ ಕನ್ಫೆಶನ್ ರೂಂ ನಲ್ಲಿ ಕುಳಿತ ಗಣೇಶ್ ಬಿಗ್ ಬಾಸ್ ಧ್ವನಿಯಲ್ಲಿ ಆದೇಶ ನೀಡುತ್ತ ಹೋದರು. ಮನೆ ಮಂದಿ ಬಿಗ್ ಬಾಸ್ ಕಡೆಯಿಂದಲೇ ಆದೇಶ ಬರುತ್ತಿದೆ ಎಂದು ಭಾವಿಸಿದರು. ಇದಾದ ಮೇಲೆ ಗಣೇಶ್ ಬಿಗ್‌ಬಾಸ್ ವೇದಿಕೆಗೆ ಬಂದರು.

ಗಣೇಶ್ ಮತ್ತು ಸುದೀಪ್ ಮಾತನಾಡುತ್ತ ನಮ್ಮ ನಮ್ಮ ಸಿನಿಮಾ ಎಕ್ಸ್ ಚೆಂಜ್ ಮಾಡಿಕೊಳ್ಳುವುದಾದರೆ ಯಾವುದನ್ನು ಮಾಡಿಕೊಳ್ಳಬಹುದು ಎಂಬ ಮಾತು ಬಂತು. ಇದಕ್ಕೆ ಗಣೇಶ್ ನಾನು ನಿಮ್ಮ ಸ್ವಾತಿಮುತ್ತು ಮತ್ತು ನಲ್ಲ ಸಿನಿಮಾ ಮಾಡಬಹುದಿತ್ತು ಎಂದರು.ಇದಾದ ಮೇಲೆ ಗಣೇಶ್ ಗೆ ಸುದೀಪ್ ತಮಗೆ ಒಂದು ಸಿನಿಮಾ ಸೂಚಿಸಲು ಕೇಳಿದರು.

ಆದರೆ ಗಣೇಶ್ ಹೇಳಲಿಲ್ಲ ಅಂತಿಮವಾಗಿ ಒತ್ತಾಯ ಮಾಡಿದ ಮೇಲೆ ಮುಂಗಾರು ಮಳೆಯನ್ನೇ ಮಾಡಬಹುದಿತ್ತು ಎಂದರು. ಇದಕ್ಕೆ ಸುದೀಪ್ ನಾನು ಮುಂಗಾರು ಮಳೆ ಮಾಡಿದಿದ್ದರೆ ಅಟ್ಟರ್ ಫ್ಲಾಪ್ ಆಗಿರುತ್ತಿತ್ತು.. ಆ ಪಾತ್ರಕ್ಕೆ ನಿಮಗಿಂತ ಬೇರೆಯವರಿಂದ ಜೀವ ತುಂಬಲು ಅಸಾಧ್ಯ.. ಸಿನಿಮಾ ನನಗೆ ಇಷ್ಟವಾಯಿತು.. ಆದರೆ ಕ್ಲೈಮಾಕ್ಸ್ ಹಿಡಿಸಲಿಲ್ಲ ಎಂದು ಹೇಳಿದರು.