Asianet Suvarna News Asianet Suvarna News

ಅನಾರೋಗ್ಯದ ಬಳಿಕ ಅಭಿಮಾನಿಗಳ ಜೊತೆ ಸಮಂತಾ ಮೊದಲ ಸಂವಾದ; ಟ್ರೋಲಿಗರಿಗೆ ಖಡಕ್ ತಿರುಗೇಟು ಕೊಟ್ಟ ಸ್ಯಾಮ್

ಅನಾರೋಗ್ಯದ ಬಳಿಕ ನಟಿ ಸಮಂತಾ ಮೊದಲ ಬಾರಿಗೆ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ. ಟ್ರೋಲ್ ಮಾಡಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ. 

Samantha shuts down troll who wrote women rise to fall sgk
Author
First Published Jan 3, 2023, 11:46 AM IST

ಸೌತ್ ಸ್ಟಾರ್ ಸಮಂತಾ ಮತ್ತೆ ಸಮಾಜಿಕ ಜಾಲತಾಣಕ್ಕೆ ವಾಪಾಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದ ಸಮಂತಾ ಅನಾರೋಗ್ಯದ ಬಳಿಕ ದೂರ ಆಗಿದ್ದರು. ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಇದೀಗ ಮತ್ತೆ ವಾಪಾಸ್ ಆಗಿದ್ದಾರೆ. 2023 ಪ್ರಾರಂಭದಲ್ಲಿ ಸಮಂತಾ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಟ್ರೋಲಿಗರಿಗೆ ಸರಿಯಾದ ತಿರುಗೇಟು ನೀಡುವ ಮೂಲಕ ಬಾಯಿ ಮುಚ್ಚಿಸಿದ್ದಾರೆ.   

Myositis ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.  ಸಮಂತಾ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. 2023ರ ಪ್ರಾರಂಭದಲ್ಲಿ ಸಮಂತಾ ವಾಪಾಸ್ ಆಗಿದ್ದಾರೆ. ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದ ರಿಲೀಸ್ ಡೇಟ್ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಜೊತೆಗೆ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ. ಟ್ವಿಟ್ಟರ್ ನಲ್ಲಿ ಕೆಲವು ಪ್ರಶ್ನೆಗೆ ಉತ್ತರ ನೀಡುವ ಮೂಲಕ ಅಭಿಮಾನಿಗಳಿಗೆ ಸಂತಸ ಪಡಿಸಿದ್ದಾರೆ. 

ನೆಟ್ಟಿಗರೊಬ್ಬರು, ನಾಯನಾತಾರಾ ಅವರ ಕನೆಕ್ಟ್  ಸೇರಿದಂತೆ ಕೆಲವು ಮಹಿಳಾ ಕೇಂದ್ರಿತ ಸಿನಿಮಾಗಳ ಪೋಸ್ಟರ್ ಇದ್ದ ಚಿತ್ರಮಂದಿರದ ಪೋಸ್ಟರ್ ಶೇರ್ ಮಾಡಿದ್ದರು. ತಮಿಳು ಸಿನಿಮಾರಂಗ ಎಷ್ಟು ದೂರ ಬಂದಿದೆ. 10 ವರ್ಷಗಳ ಹಿಂದೆ ಇದನ್ನು ಊಹಿಸಲು ಅಸಧ್ಯವಾಗಿತ್ತು' ಎಂದು ಪೋಸ್ಟ್ ಹಾಕಿದ್ದರು. ಅಭಿಮಾನಿಯ ಪೋಸ್ಟ್ ಅನ್ನು ಸಮಂತಾ ರೀ ಟ್ವೀಟ್ ಮಾಡಿ, 'ಮಹಿಳಿಯರ ರೈಸಿಂಗ್' ಎಂದು ಹೇಳಿದ್ದರು. ಸಮಂತಾ ರಿಯಾಕ್ಷನ್ ಬಳಿಕ ಮತ್ತೋರ್ವ ನೆಟ್ಟಿಗ ಕಾಮೆಂಟ್ ಮಾಡಿ ವ್ಯಂಗ್ಯವಾಡಿದರು. 'ಹೌದು, ಕೆಳಗೆ ಬೀಳಲು' ಎಂದು ಹೇಳಿದರು.

Shaakuntalam; ಅನಾರೋಗ್ಯದ ನಡುವೆಯೂ ಶಾಕುಂತಲೆಯಾಗಿ ಎಂಟ್ರಿ ಕೊಡ್ತಿದ್ದಾರೆ ಸಮಂತಾ; ರಿಲೀಸ್ ಡೇಟ್ ಬಹಿರಂಗ

ಆದರೆ ಇಷ್ಟಕ್ಕೆ ಸುಮ್ಮನಾಗದ ಸಮಂತಾ ಅವರ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿ ಸರಿಯಾಗಿ ತಿರುಗೇಟು ನೀಡಿದ್ದಾರೆ. ಮತ್ತೆ ಹಿಂದಕ್ಕೆ ಹೋಗುವುದು ಮತ್ತಷ್ಟು ಸಿಹಿ ಕ್ಷಣವಾಗಿರುತ್ತದೆ ನನ್ನ ಸ್ನೇಹಿತ' ಎಂದು ಹೇಳಿದ್ದಾರೆ. ಸಮಂತಾ ರಿಯಾಕ್ಷನ್ ಅಭಿಮಾನಿಗಳ ಹೃದಯ ಗೆದ್ದಿದೆ. ಅಂದಹಾಗೆ ಸಮಂತಾ ಅನೇಕ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಅಭಿಮಾನಿಗಳ ಪ್ರೀತಿಯ ಮಾತುಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಅಂದಹಾಗೆ ಸಮಂತಾ ಅನಾರೋಗ್ಯದ ಬಗ್ಗೆ ಸಾಕಷ್ಟು ಸುದ್ದಿಗಳು ಹಾರಿದಾಡಿತ್ತು. ಆದರೆ ಯಾವುದಕ್ಕೂ ತಲೆಕೊಡಿಸಿಕೊಳ್ಳದ ಸಮಂತಾ ಸದ್ಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಸಹಿ ಮಾಡಿದ ಪ್ರಾಜೆಕ್ಟ್ ಮುಗಿಸಲಿದ್ದಾರೆ. ಅಂದಹಾಗೆ ಸಮಂತಾ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ವೆಬ್ ಸೀರಿಸ್ ಶೂಟಿಂಗ್ ಪ್ರಾರಂಭ ಮಾಡಲಿದ್ದಾರೆ. 

ಸಮಂತಾ ವಿಶ್ರಾಂತಿಯಲ್ಲಿದ್ದಾರೆ; ವೈರಲ್ ಆಗಿದ್ದ ಗಾಸಿಪ್‌ಗೆ ಸ್ಯಾಮ್ ತಂಡದ ರಿಯಾಕ್ಷನ್

ಸದ್ಯ ಸಮಂತಾ ನಟನೆಯ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದ ರಿಲೀಸ್ ಡೇಟ್ ಬಹಿರಂಗವಾಗಿದೆ. ಈ ಸಿನಿಮಾ ಫೆಬ್ರವರಿ 17ರಂದು ತೆರೆಗೆ ಬರುತ್ತಿದೆ. ಅಂದಹಾಗೆ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಕಳೆದ ವರ್ಷ ನವೆಂಬರ್ ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿತ್ತು. ಇನ್ನು ಮೂಲಗಳ ಪ್ರಕಾರ ಸಿನಿಮಾ ನೋಡಿದ ಸಮಂತಾ ಅವರಿಗೆ ಇಷ್ಟವಾಗದ ಕಾರಣ ರಿ ವರ್ಕ್ ಮಾಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಹಾಗಾಗಿ ರಿಲೀಸ್ ತಡವಾಗುತ್ತಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದೀಗ ಕೊನೆಗೂ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 
 

Follow Us:
Download App:
  • android
  • ios