Asianet Suvarna News Asianet Suvarna News

Happy Birthday: ಕಬೀರ್ ಸಿಂಗ್ ಚೆಲುವೆಯ ಸಂಭಾವನೆ ಗೊತ್ತಾ ?

  • ಲಸ್ಟ್ ಸ್ಟೋರಿಸ್, ಎಂಎಸ್ ಧೋನಿ, ಕಬೀರ್ ಸಿಂಗ್ ಮೂಲಕ ಹಿಟ್ ಆದ ಕೈರಾ ಅಡ್ವಾನಿ
  • ಬ್ಯೂಟಿಫುಲ್ ನಟಿಯ ಸಂಭಾವನೆ ಎಷ್ಟಿದೆ ಗೊತ್ತಾ ?
Kiara Advanis Net Worth Witnessed Major Change After Kabir Singh dpl
Author
Bangalore, First Published Jul 31, 2021, 6:50 PM IST

ಬಾಲಿವುಡ್ ನಟಿ ಕೈರಾ ಅಡ್ವಾನಿ 31ನೇ ವರ್ಷದ ಹುಟ್ಟುಹಬ್ಬ ಆಚರಿಕೊಳ್ಳುತ್ತಿದ್ದಾರೆ. ಬಾಲಿವುಡ್‌ನ ಬಹು ಬೇಡಿಕೆಯ ನಟಿ ನಿಧಾನವಾಗಿ ಬಾಲಿವುಡ್‌ನಲ್ಲಿ ಮೇಲೆ ಬಂದವರು. ಸಡನ್ ಸಕ್ಸಸ್‌ಗೆ ಬಂದವರಲ್ಲ. ಆದರೆ ಒಂದಕ್ಕಿಂದ ಒಂದು ಬೆಸ್ಟ್ ಅನ್ನೋ ಸಿನಿಮಾಗಳನ್ನು ಕೊಡುತ್ತಾ ಹೋಗಿದ್ದಾರೆ ನಟಿ.

ಕೈರಾ ಅಡ್ವಾನಿಯವರ ಆದಾಯ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಏರಿಕೆ ಕಂಡಿದೆ. ನಟಿಯ ಕೆಲವು ಪ್ರಾಜೆಕ್ಟ್‌ಗಳು ದಿಢೀರ್ ಸಂಭಾವನೆ ಏರಿಕೆಗೆ ಕಾರಣವಾಗಿದೆ. ಕೈರಾ ಅಡ್ವಾನಿಯ ಪ್ರಸ್ತುತ ಆದಾಯ ಹೇಗಿದೆ ? ಈ ಹೆಚ್ಚಳಕ್ಕೆ ಪ್ರಮುಖ ಕಾರಣಗಳೇನು ಗೊತ್ತಾ ? ಇಲ್ಲಿದೆ ಈ ಕುರಿತ ಡೀಟೆಲ್ಸ್.

ಕಿಯಾರಾ ಅಡ್ವಾಣಿ ಸಂಭಾವನೆ

ಕೈರಾ ಅಡ್ವಾನಿ 2014 ರಲ್ಲಿ ಫ್ಯೂಗ್ಲಿ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದರು. ಚಿತ್ರವು ಬಾಕ್ಸ್ ಆಫೀಸ್ ಹಿಟ್ ಆಗದೇ ಇದ್ದರೂ ಕೈರಾ ಅಡ್ವಾನಿಯವರ ಪರ್ಫಾಮೆನ್ಸ್ ಸಿನಿಪ್ರಿಯರ ಮನಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹಾಗೆಯೇ ನಟಿಗೆ ಮುಂದಿನ ಆಫರ್‌ಗಳಿಗೂ ದಾರಿ ಮಾಡಿಕೊಟ್ಟಿದ್ದು ಸುಳ್ಳಲ್ಲ. ಫಗ್ಲಿಯ ಸೋಲಿನ ನಂತರ ಕೈರಾ M.S ಧೋನಿ ಸಿನಿಮಾದಲ್ಲಿ ನಟಿಸಿದರು. 2016 ರಲ್ಲಿ ಧೋನಿ ಬಯೋಪಿಕ್. ಚಿತ್ರದಲ್ಲಿ, ನಟಿ ಧೋನಿಯ ಪತ್ನಿ ಸಾಕ್ಷಿ ಸಿಂಗ್ ಧೋನಿಯ ಪಾತ್ರ ಮಾಡಿದ್ದರು ಕೈರಾ.

Kiara Advanis Net Worth Witnessed Major Change After Kabir Singh dpl

ಈ ಚಿತ್ರವು ಡೊಡ್ಡ ಮಟ್ಟದಲ್ಲಿ ಯಶಸ್ವಿಯಾಯಿತು. ಪ್ರಮುಖ ಪಾತ್ರವರ್ಗದ ಪ್ರದರ್ಶನಗಳು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದವು. ಎಂ.ಎಸ್ ಧೋನಿ ನಂತರ ಕೈರಾ ಅಡ್ವಾನಿಯವರ ನಿವ್ವಳ ಮೌಲ್ಯವು ಆಸಕ್ತಿದಾಯಕ ಏರಿಕೆಯನ್ನು ಕಂಡಿತು. ಬಯೋಪಿಕ್ ಯಶಸ್ವಿಯಾಗಿದ್ದರಿಂದ ಇದು ಕೈರಾಗೆ ಅವಕಾಶಗಳ ಬಾಗಿಲುಗಳನ್ನು ತೆರೆಯಿತು. ಅವರು 2018 ರಲ್ಲಿ ನೆಟ್‌ಫ್ಲಿಕ್ಸ್ ಸಿರೀಸ್ ಲಸ್ಟ್ ಸ್ಟೋರಿಗಳಲ್ಲಿ ನಟಿಸಿದರು.

ನಟಿಯಾದ್ರೇನಂತೆ ? ಐಡಿ ಖಚಿತಪಡಿಸಲು ಮಾಸ್ಕ್ ತೆಗೆಸಿದ ಭದ್ರತಾ ಸಿಬ್ಬಂದಿ..!

ಈ ನೆಟ್‌ಫ್ಲಿಕ್ಸ್ ಸಿರೀಸ್ ಕೈರಾ ಅಡ್ವಾನಿಯವರ ಸಂಭಾವನೆ ಏರಿಕೆಗೆ ಪ್ರಮುಖ ಕೊಡುಗೆಯ ಅಂಶವೆಂದು ಪರಿಗಣಿಸಲಾಗಿದೆ. ಲಸ್ಟ್ ಸ್ಟೋರೀಸ್ ಕಳೆದ ವರ್ಷ ಎಮ್ಮಿ ಪ್ರಶಸ್ತಿ ನಾಮನಿರ್ದೇಶನವನ್ನು ಸಹ ಪಡೆಯಿತು. ಲಸ್ಟ್ ಸ್ಟೋರೀಸ್ ಯಶಸ್ಸಿನ ನಂತರ ಕೈರಾ ಅಡ್ವಾನಿ ಭರತ್ ಆನೆ ನೇನು, ಕಳಂಕ್, ಕಬೀರ್ ಸಿಂಗ್, ಮತ್ತು ಗುಡ್ ನ್ಯೂಸ್ ನಂತಹ ಚಿತ್ರಗಳಲ್ಲಿ ನಟಿಸಿದರು. ಲಸ್ಟ್‌ ಸ್ಟೋರಿಸ್‌ನಲ್ಲಿ ಸಖತ್ ಬೋಲ್ಡ್ ಪಾತ್ರವನ್ನು ಮಾಡಿದ್ದರು ನಟಿ. ಈ ಸತತ ಹಿಟ್‌ಗಳು ಕೈರಾ ಅವರ ಸಂಭಾವನೆಯನ್ನು 21 ಕೋಟಿಗೆ ತಲುಪಿಸಿದೆ ಎನ್ನಲಾಗಿದೆ.

Kiara Advanis Net Worth Witnessed Major Change After Kabir Singh dpl

ಕೈರಾ ಕಿಟ್ಟಿಯಲ್ಲಿ ಈಗಾಗಲೇ ಹಲವಾರು ಯೋಜನೆಗಳು ಇರುವುದರಿಂದ ಕಬೀರ್ ಸಿಂಗ್ ನಟಿಯ ಮೌಲ್ಯ ಏರಿಕೆಯಾಗುವ ನಿರೀಕ್ಷೆಯಿದೆ. ಕೈರಾ ಅಡ್ವಾನಿ ಮತ್ತೊಂದು ನೆಟ್‌ಫ್ಲಿಕ್ಸ್ ಪ್ರಾಜೆಕ್ಟ್‌ನಲ್ಲಿ ನಟಿಸಲಿದ್ದಾರೆ. ಅವರು ಷೇರ್‌ಶಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಎದುರು ಕಾಣಿಸಿಕೊಳ್ಳುತ್ತಾರೆ. ಲಸ್ಟ್ ಸ್ಟೋರೀಸ್ ನಟಿ ಭೂಲ್ ಭುಲೈಯಾ 2, ಇಂದೂ ಕಿ ಜವಾನಿ, ಮತ್ತು ಲಕ್ಷ್ಮಿ ಬಾಂಬ್ ಚಿತ್ರಗಳಲ್ಲಿ ನಟಿಸಲಿದ್ದಾರೆ.

 
 
 
 
 
 
 
 
 
 
 
 
 
 
 

A post shared by KIARA (@kiaraaliaadvani)

Follow Us:
Download App:
  • android
  • ios