ಇತ್ತೀಚಿಗೆ ಮದುವೆಯಾಗಿರೋ ನಟಿ ಕಿಯಾರಾ ಅಡ್ವಾಣಿ ಗರ್ಭಿಣಿಯಾಗಿದ್ದಾರಾ? ಶೇರ್‌ ಮಾಡಿರೋ ಫೋಟೋದಲ್ಲಿ ಏನಿದೆ?  

ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ ಬಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿ. ಕಳೆದ ಫೆಬ್ರವರಿ 7ರಂದು ಈ ಜೋಡಿ ತಮ್ಮ ಮದುವೆಯನ್ನು ಘೋಷಿಸಿದಾಗ ಎಲ್ಲರೂ ಅಚ್ಚರಿ ಪಟ್ಟಿದ್ದರು. ಕಿಯಾರಾ ಮತ್ತು ಸಿದ್ಧಾರ್ಥ್ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಬಯಸುತ್ತಾರೆ, ಆದರೆ ಅವರು ಆಗಾಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಕೆಲವು ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಚಿತ್ರ ತಾರೆಯರು ಏನನ್ನೇ ಶೇರ್​ ಮಾಡಿದರೂ ಅದು ವೈರಲ್​ ಆಗುತ್ತದೆ. ಅದೇ ರೀತಿ ಕಿಯಾರಾ ಅವರ ಫೋಟೋ ಒಂದು ವೈರಲ್‌ ಆಗಿರುವುದು ಮಾತ್ರವಲ್ಲದೇ ಭಾರಿ ಸುದ್ದಿಯನ್ನೂ ಮಾಡುತ್ತಿದೆ.

ಅದೇನೆಂದರೆ, ಸತ್ಯಪ್ರೇಮ್ ಕಿ ಕಥಾ ಸಿನಿಮಾ ಪ್ರಚಾರಕ್ಕಾಗಿ ಕಿಯಾರಾ ಅಡ್ವಾಣಿ ರಾಜಸ್ಥಾನಕ್ಕೆ ಭೇಟಿ ನೀಡಿದ್ದಾಗ ತೆಗೆದ ಫೋಟೋ ಒಂದು ಸಕತ್‌ ಸುದ್ದಿ ಮಾಡುತ್ತಿದೆ. ಅರಮನೆ ನಗರಿಗೆ ಬಂದ ಕಿಯಾರಾ ಅಡ್ವಾಣಿ ಜೈಪುರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದವರು ಕಿಯಾರಾ ಗರ್ಭಿಣಿ ಎಂದು ಹೇಳುತ್ತಿದ್ದಾರೆ. ತಮಗೆ ಬೇಬಿ ಬಂಪ್‌ ಕಾಣಿಸುತ್ತಿದೆ ಎನ್ನುತ್ತಿದ್ದಾರೆ. ನೆಟ್ಟಿಗರ ಈ ಸಂದೇಹಕ್ಕೆ ಕಾರಣವೂ ಇದೆ. ಕಾರ್ತಿಕ್​ ಆರ್ಯನ್​ (Karthik Aaryan) ಅವರ ‘ಭೂಲ್​ ಭುಲಯ್ಯ 2’ ಚಿತ್ರದ ಸಿನಿಮಾದ ಹೊಸ ಹಾಡು ಬಿಡುಗಡೆ ಈಚೆಗೆ ಮಾಡಲಾಗಿತ್ತು. ಈ ಪ್ರಯುಕ್ತ ಮುಂಬೈನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ವೇದಿಕೆಯಲ್ಲಿ ಕಿಯಾರಾ ಅಡ್ವಾಣಿ ಅವರಿಗೆ ಚಪ್ಪಲಿ ಹಾಕಿಕೊಳ್ಳಲು ಕಾರ್ತಿಕ್​ ಆರ್ಯನ್​ ಸಹಾಯ ಮಾಡಿದ್ದರು. ಅದರ ವಿಡಿಯೋ ವೈರಲ್​ ಆಗಿತ್ತು. ಆಗ ನೆಟ್ಟಿಗರು ಬಹಳ ಶ್ಲಾಘನೆ ವ್ಯಕ್ತಪಡಿಸಿದ್ದರು. ಈಗ ಪತ್ನಿ ಗರ್ಭಿಣಿ ಎನ್ನುವ ಕಾರಣಕ್ಕೆ ಹೀಗೆ ಮಾಡಿರಬಹುದು ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಪತಿಗಾಗಿ ಕೈಯಾರೆ ಉಪಾಹಾರ ರೆಡಿ ಮಾಡಿದ ನಟಿ ಕಿಯಾರಾ ಅಡ್ವಾಣಿ

 ಅಷ್ಟಕ್ಕೂ ಈ ಜೋಡಿ ರಾಜಸ್ಥಾನಕ್ಕೆ ಭೇಟಿ ನೀಡಲು ಕಾರಣ, ಸತ್ಯಪ್ರೇಮ್ ಕಿ ಕಥಾ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ (Kiara Advani) ಹಾಗೂ ಕಾರ್ತಿಕ್ ಆರ್ಯನ್ ನಟಿಸಿದ್ದಾರೆ. ಕಿಯಾರಾ ಕಾರ್ತಿಕ್ ಜೊತೆ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿದ್ದಾರೆ. ಫೋಟೋದಲ್ಲಿ ಕಿಯಾರಾ ಉಬ್ಬಿದ ಹೊಟ್ಟೆ ಕಾಣಿಸಿರೋದು ಅಭಿಮಾನಿಗಳ ಕಾತರ ಹೆಚ್ಚಿಸಿದೆ. ಅಂದಹಾಗೆ ಈಚೆಗಷ್ಟೇ ಕಿಯಾರಾ ಅವರು ಭಾರಿ ಸುದ್ದಿಯಾಗಿದ್ದರು. ಮದುವೆಯಾದ ಮೇಲೆ ಅವರ ನಗ್ನ ಫೋಟೋಶೂಟ್​ ಪುನಃ ವೈರಲ್​ ಆಗಿತ್ತು. ಟಾಪ್​ಲೆಸ್​ ಆಗಿರುವ ಕಿಯಾರಾ ಎಲೆಯಿಂದ ತಮ್ಮ ದೇಹವನ್ನು ಮುಚ್ಚಿಕೊಂಡಿದ್ದರು.

ಅದಾದ ಬಳಿಕ ಮೊನ್ನೆಯಷ್ಟೇ ಇನ್ನೊಂದು ಫೋಟೋಶೂಟ್ ಮಾಡಿಕೊಂಡು ಕಿಯಾರಾ ಸುದ್ದಿಯಾಗಿದ್ದರು. ಮದುವೆಯ ನಂತರ ಕಿಯಾರಾ ಮೊದಲ ಬಾರಿಗೆ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. . ಮದುವೆಯಾದ ಮೇಲೂ ಕಿಯಾರಾ ಎಷ್ಟು ಸ್ಟೈಲಿಶ್ (Stylish) ಆಗಿದ್ದಾರೆ ಎಂದು ಫ್ಯಾನ್ಸ್‌ ಹೇಳಿದ್ದರು. ರೆಡ್ ಡ್ರೆಸ್​ನಲ್ಲಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಬೋಲ್ಡ್ ಅವತಾರದಲ್ಲಿ ಕಿಯಾರಾ ಕಂಡ ಅಭಿಮಾನಿಗಳು ಫಿದಾ ಆಗಿದ್ದರು. ನಂತರ ಆ ಡ್ರೆಸ್‌ನ ಬೆಲೆ ಕೇಳಿ ಬೆಚ್ಚಿಬಿದ್ದಿದ್ದರು. ಇದಕ್ಕೆ ಕಾರಣ, ಕಿಯಾರಾ ಧರಿಸಿದ್ದ ಈ ಡ್ರೆಸ್ ಬೆಲೆ 1 ಲಕ್ಷದ 98 ಸಾವಿರದ 850 ರೂಪಾಯಿ! ಈ ಒಂದು ಡ್ರೆಸ್‌ನಿಂದ ಇಡೀ ವರ್ಷದ ಜೀವನ ನಡೆಸಬಹುದು ಎಂದು ಕೆಲವರು ಕಮೆಂಟ್‌ ಮಾಡಿದ್ದರು.

Kiara Advani: ಮದ್ವೆಯಾದ ಮೇಲೆ ಹರಿದಾಡ್ತಿಗೆ ಬೆತ್ತಲೆ ಫೋಟೋ- ಏನಪ್ಪಾ ಅಂತಿದ್ದಾರೆ ನೆಟ್ಟಿಗರು!

View post on Instagram