ಪತಿಗಾಗಿ ಕೈಯಾರೆ ಉಪಾಹಾರ ರೆಡಿ ಮಾಡಿದ ನಟಿ ಕಿಯಾರಾ ಅಡ್ವಾಣಿ
ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿರುವ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ. ಇದೀಗ ನಟಿ ಪತಿಗಾಗಿ ಉಪಾಹಾರ ರೆಡಿ ಮಾಡಿದ್ದು ಅದರ ಪೋಸ್ಟ್ ಮಾಡಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ ಬಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿ. ಕಳೆದ ಫೆಬ್ರವರಿ 7ರಂದು ಈ ಜೋಡಿ ತಮ್ಮ ಮದುವೆಯನ್ನು ಘೋಷಿಸಿದಾಗ ಎಲ್ಲರೂ ಅಚ್ಚರಿ ಪಟ್ಟಿದ್ದರು. ಕಿಯಾರಾ ಮತ್ತು ಸಿದ್ಧಾರ್ಥ್ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಬಯಸುತ್ತಾರೆ, ಆದರೆ ಅವರು ಆಗಾಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಕೆಲವು ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಚಿತ್ರ ತಾರೆಯರು ಏನನ್ನೇ ಶೇರ್ ಮಾಡಿದರೂ ಅದು ವೈರಲ್ ಆಗುವುದು ಗ್ಯಾರೆಂಟಿ, ಅದೇ ರೀತಿ ತಮ್ಮ ನೆಚ್ಚಿನ ತಾರೆಯರು ಏನೇ ಮಾಡಿದರೂ ಅವರ ಅಭಿಮಾನಿಗಳಿಗೆ ಅದು ಖುಷಿಯ ಸುದ್ದಿಯೇ. ಮಾಮೂಲು ಜನರು ದಿನವೂ ಮಾಡುವ ಕಾರ್ಯವನ್ನು ಸೆಲೆಬ್ರಿಟಿಗಳು ಒಂದೇ ದಿನ ಮಾಡಿದರೂ ಅದು ಭಾರಿ ಸುದ್ದಿಯಾಗುತ್ತದೆ. ಅದೇ ರೀತಿ ಈಗ ಕಿಯಾರಾ ಮಾಡಿದ ಒಂದು ತಿಂಡಿಯಿಂದ ಸಕತ್ ಫೇಮಸ್ ಆಗಿದ್ದಾರೆ.
ಅದೇನೆಂದರೆ, ಕಿಯಾರಾ (Kiara Advani) ಬೆಳಗಿನ ಉಪಾಹಾರವನ್ನು ತಮ್ಮ ಕೈಯಾರೆ ಮಾಡಿದ್ದಾರಂತೆ. ಸಾಮಾನ್ಯವಾಗಿ ನಟ ನಟಿಯರಿಗೆ ಕಾಲಿಗೊಂದು, ಕೈಗೊಂದು ಆಳು ಇರುತ್ತಾರೆ. ಅದೇ ರೀತಿ ಅಡುಗೆ ಮಾಡಲೂ ಶೆಫ್ಗಳ ದಂಡೇ ಇರುತ್ತದೆ. ಇದೇ ಕಾರಣಕ್ಕೆ ಏನಾದರೂ ಅಡುಗೆಯನ್ನು ಖುದ್ದು ನಟರೇ ಮಾಡಿದರೆ ಅದು ಸುದ್ದಿಯಾಗುತ್ತದೆ. ಅದರಂತೆ ಇದೀಗ ಕಿಯಾರಾ ಮಾಡಿರುವ ಉಪಾಹಾರವೂ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಫೋಟೋ ಅವರು ಶೇರ್ ಮಾಡಿಕೊಂಡಿದ್ದು, ನೆಟ್ಟಿಗರು ಬಹಳ ಭೇಷ್ ಭೇಷ್ ಎನ್ನುತ್ತಿದ್ದಾರೆ.
Kiara Advani: ಮದ್ವೆಯಾದ ಮೇಲೆ ಹರಿದಾಡ್ತಿಗೆ ಬೆತ್ತಲೆ ಫೋಟೋ- ಏನಪ್ಪಾ ಅಂತಿದ್ದಾರೆ ನೆಟ್ಟಿಗರು!
ಕಿಯಾರಾ ಅಡ್ವಾಣಿ Instagram ನಲ್ಲಿ ಸುಂದರವಾದ ಕಥೆಯನ್ನು ಪೋಸ್ಟ್ ಮಾಡಿದ್ದಾರೆ. ಕ್ಲಿಪ್‌ನಲ್ಲಿ, ಕಿಯಾರಾ ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರ ಭಾನುವಾರದ ಉಪಾಹಾರವನ್ನು ತೋರಿಸಿದ್ದಾರೆ. ಅದನ್ನು ತಾವೇ ಮಾಡಿರುವುದಾಗಿ ಹೇಳಿದ್ದಾರೆ. ಪತಿಗಾಗಿ ತಾವು ಕೈಯಾರೆ ಈ ಉಪಾಹಾರ (Breakfast) ಮಾಡಿರುವುದಾಗಿ ಅವರು ತೋರಿಸಿದ್ದಾರೆ. ದೊಡ್ಡ ಸೂಪರ್‌ಮ್ಯಾನ್ ಬೌಲ್‌ನಲ್ಲಿ ಇರುವ ಆಹಾರವನ್ನು ಶೇರ್ ಮಾಡಲಾಗಿದೆ. ಗಂಡನ ಮೇಲಿನ ಈ ಪ್ರೀತಿ ಸದಾ ಇರಲಿ ಎಂದು ನೆಟ್ಟಿಗರು ಶುಭ ಹಾರೈಸಿದ್ದಾರೆ.
ಈಚೆಗಷ್ಟೇ ಕಿಯಾರಾ ಅವರು ಭಾರಿ ಸುದ್ದಿಯಾಗಿದ್ದು, ಅವರ ನಗ್ನ ಫೋಟೋಶೂಟ್ ಪುನಃ ವೈರಲ್ ಆಗಿದ್ದರಿಂದ. ಈ ಜೋಡಿ ಮದುವೆಯ ಲೈಫ್ ಎಂಜಾಯ್ ಮಾಡುತ್ತಿರುವಾಗಲೇ ಕಿಯಾರಾ ಅಡ್ವಾಣಿಯ ಬೆತ್ತಲೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಟಾಪ್ಲೆಸ್ ಆಗಿರುವ ಕಿಯಾರಾ ಎಲೆಯಿಂದ ತಮ್ಮ ದೇಹವನ್ನು ಮುಚ್ಚಿಕೊಂಡಿರುವ ಫೋಟೋ ಇದಾಗಿದೆ. ಅಸಲಿಗೆ ಇದನ್ನು 2 -3 ವರ್ಷಗಳ ಹಿಂದೆ ಕ್ಲಿಕ್ಕಿಸಲಾಗಿದ್ದು, ಅದಾಗ ಭಾರಿ ವೈರಲ್ ಆಗಿತ್ತು. ಈಗ ಮತ್ತೊಮ್ಮೆ ಮದುವೆಯಾದ ಮೇಲೆ ಸಾಮಾಜಿಕ ಜಾಲತಾಣದಲ್ಲಿ (Social media) ಈ ಫೋಟೋ ಸುದ್ದಿಯಾಗುತ್ತಿದೆ. ಬಾಲಿವುಡ್‌ನ ಖ್ಯಾತ ಛಾಯಾಗ್ರಾಹಕ ಡಬೂ ರತ್ನಾನಿ ಅವರ ಸೆಲೆಬ್ರಿಟಿ ಕ್ಯಾಲೆಂಡರ್ ಶೂಟ್ನಲ್ಲಿ ಕಿಯಾರಾ ಅಡ್ವಾನಿ ಬೆತ್ತಲಾದ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಫೋಟೋ ಹಿಂದೆ ವಿವಾದಕ್ಕೂ ಕಾರಣವಾಗಿತ್ತು. ಅದಕ್ಕೆ ಕಾರಣ, ಅಂತರರಾಷ್ಟ್ರೀಯ ಛಾಯಾಗ್ರಾಹಕ ಮಾರಿಬ್ ಅವರು ಮಾಡಲ್ ಒಬ್ಬರನ್ನು ಎಲೆ ಹಿಂದೆ ನಿಲ್ಲಿಸಿ ಫೋಟೋ ತೆಗೆದಿದ್ದರು. 2019ರಲ್ಲೇ ಅದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನೇ ಡಬೂ ನಕಲು ಮಾಡಿದ್ದಾರೆ ಅಂತ ಅವರನ್ನು ಟ್ರೋಲ್ ಮಾಡಲಾಗುತ್ತಿತ್ತು.
30 ವರ್ಷದ ಕಿಯಾರಾ ಜೊತೆ ಶಾರುಖ್ ರೊಮ್ಯಾನ್ಸ್? ಏನಿದು ಹೊಸ ವಿಷ್ಯ?
ಆ ಟ್ರೋಲ್ ವಿಷಯ ಅಲ್ಲಿಗೇ ಮುಗಿದಿದೆ. ಆದರೆ ಈಗ ಫೋಟೋ ಮತ್ತೆ ಮುನ್ನೆಲೆಗೆ ಬಂದಿದ್ದು, ಮದುವೆಯಾದ ಮೇಲೆ ಪುನಃ ಇದನ್ನು ವೈರಲ್ ಮಾಡುವ ಅವಶ್ಯಕತೆ ಏನಿತ್ತು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಈ ಬಗ್ಗೆ ಕಿಯಾರಾ (Kiara Advani ) ತಲೆ ಕೆಡಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಕಿಯಾರಾ ಅಡ್ವಾಣಿಯ ಇನ್ನೊಂದು ಹೆಸರೇ ಬೋಲ್ಡ್‌ನೆಸ್ ಬ್ಯೂಟಿ ಎಂದು. ಈಕೆ 'ಲಸ್ಟ್ ಸ್ಟೋರಿಸ್'ನಲ್ಲಿ ಮಾಡಿದ ಅಭಿನಯವನ್ನು ನೋಡಿದರೆ ಈಕೆ ಎಂಥ ಪಾತ್ರಕ್ಕೂ ಸೈ ಎನ್ನುವಂತಿದೆ. ಆದ್ದರಿಂದ ಎಲೆಯಲ್ಲಾದರೂ ದೇಹ ಮುಚ್ಚಿಕೊಂಡಿದ್ದಾರಲ್ಲ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದರೆ, ತರ್ಲೆ ಹೈಕಳು ಮಾತ್ರ ಎಲೆಯನ್ನು ಸರಿಸಿಬಿಡಿ ಪ್ಲೀಸ್ ಎನ್ನುತ್ತಿದ್ದಾರೆ!