ಟಾಲಿವುಡ್‌ನ ಖ್ಯಾತ ನಿರ್ಮಾಪಕ ದಿಲ್ ರಾಜು (Dil Raju), ರಾಕಿಂಗ್ ಯಶ್ ಅವರಿಗೆ 100 ಕೋಟಿ  (100 Crore) ರೂಪಾಯಿ ಸಿನಿಮಾ ಆಫರ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈಗಾಗಲೇ ಕೆಜಿಎಫ್-2 ಮೂಲಕ ದೇಶ ವಿದೇಶದಲ್ಲಿ ಸದ್ದು ಮಾಡುತ್ತಿರುವ ಯಶ್‌ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಪ್ಯಾನ್ ಇಂಡಿಯಾ ಹೀರೋ ಆಗಿ ಮೆರೆಯುತ್ತಿರುವ ಯಶ್ ತೆಲುಗು ನಿರ್ಮಾಪಕ ದಿಲ್ ರಾಜು ಆಫರ್ ಒಪ್ಪಿಕೊಳ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.  

KGF 2 ಸೂಪರ್ ಸಕ್ಸಸ್‌ನಲ್ಲಿರುವ ಯಶ್ (Yash) ಇನ್ನು ಮುಂದಿನ ಸಿನಿಮಾ ಯಾವುದು ಎಂದು ಅನೌನ್ಸ್ ಮಾಡಿಲ್ಲ. ಹಾಗಾಗಿ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕೆಜಿಎಫ್-2 (KGF 2) ಬಳಿಕ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಕಾಯುತ್ತಿದ್ದಾರೆ. ಅಲ್ಲದೆ ಯಶ್ ತೆಲಗು ನಿರ್ದೇಶಕರ ಜೊತೆ ಸಿನಿಮಾ ಮಾಡಲಿದ್ದಾರೆ, ತಮಿಳು ನಿರ್ದೇಶಕರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನವ ಮಾತು ಸಹ ಕೇಳಿಬರುತ್ತಿದೆ. ಈ ನಡುವೆ ಯಶ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಟಾಲಿವುಡ್ ಖ್ಯಾತ ನಿರ್ದೇಶಕರೊಬ್ಬರು ಯಶ್‌ಗೆ ಆಫರ್ ಮಾಡಿದ್ದಾರಂತೆ. ಅದೂ ಬರೊಬ್ಬರಿ 100 ಕೋಟಿ ರೂಪಾಯಿಗೆ ಎನ್ನುವುದೇ ವಿಶೇಷ.

ಹೌದು, ಟಾಲಿವುಡ್‌ನ ಖ್ಯಾತ ನಿರ್ಮಾಪಕ ದಿಲ್ ರಾಜು (Dil Raju), ರಾಕಿಂಗ್ ಯಶ್ ಅವರಿಗೆ 100 ಕೋಟಿ ( 100 Crore) ರೂಪಾಯಿ ಸಿನಿಮಾ ಆಫರ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈಗಾಗಲೇ ಕೆಜಿಎಫ್-2 ಮೂಲಕ ದೇಶ ವಿದೇಶದಲ್ಲಿ ಸದ್ದು ಮಾಡುತ್ತಿರುವ ಯಶ್‌ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಆದರೂ ಯಾವ ಸಿನಿಮಾವನ್ನು ಇನ್ನು ಒಪ್ಪಿಕೊಂಡಿಲ್ಲ. ಪ್ಯಾನ್ ಇಂಡಿಯಾ ಹೀರೋ ಆಗಿ ಮೆರೆಯುತ್ತಿರುವ ಯಶ್ ತೆಲುಗು ನಿರ್ಮಾಪಕ ದಿಲ್ ರಾಜು ಆಫರ್ ಒಪ್ಪಿಕೊಳ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

ಅಂದಹಾಗೆ ಸೌತ್‌ನಲ್ಲಿ 100 ಕೋಟಿ ರೂಪಾಯಿ ಸಂಭಾವನೆ ಮುಟ್ಟಿರುವುದು ಕೆಲವೇ ಕೆಲವು ನಟರು ಮಾತ್ರ. ತಮಿಳು ನಟರಾದ ರಜನಿಕಾಂತ್, ದಳಪತಿ ವಿಜಯ್ ಹೆಸರು 100 ಕೋಟಿ ರೂಪಾಯಿ ಸಂಭಾವನೆ ಪಟ್ಟಿಯಲ್ಲಿದೆ ಇದೀಗ ಯಶ್ ಹೆಸರು ಕೇಳಿಬಂದಿದ್ದು 100 ಕೋಟಿ ಲಿಸ್ಟ್‌ಗೆ ಸೇರುತ್ತಾರಾ ಎಂದು ಕಾದುನೋಡಬೇಕು. ಅಂದಹಾಗೆ ಈ ಮೊದಲು ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರಿಗೆ ಬಾಲಿವುಡ್ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ 100 ಕೋಟಿ ಆಫರ್ ಮಾಡಿದ್ದರು ಎಂದು ಸುದ್ದಿಯಾಗಿತ್ತು. ಇನ್ನು ನಟ ವಿಜಯ್ ದೇವರಕೊಂಡ ಅವರಿಗೂ ಕರಣ್ ಜೋಹರ್ 100 ಕೋಟಿ ಸಿನಿಮಾ ಆಫರ್ ಮಾಡಿದ್ದರು ಎನ್ನುವ ಸುದ್ದಿ ವೈರಲ್ ಆಗಿತ್ತು. ಇದೀಗ ಯಶ್ ಹೆಸರು ಕೇಳಿಬರುತ್ತಿದೆ. 

ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ನಿರ್ಮಾಪಕ ದಿಲ್ ರಾಜು ಯಶ್‌ಗಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರಂತೆ. ಈಗಾಗಲೇ ತೆಲುಗು ಮತ್ತು ತಮಿಳು ಸಿನಿಮಾ ಮಾಡಿರುವ ದಿಲ್ ರಾಜು ಇದೀಗ ಕನ್ನಡದಲ್ಲಿ ಸಿನಿಮಾ ಮಾಡಲು ಸಜ್ಜಾಗಿದ್ದಾರಂತೆ. ಕನ್ನಡದಲ್ಲಿ ಬ್ಯಾಕು ಟು ಬ್ಯಾಕ್ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈ ಬೆಳವಣಿಗೆ ನೋಡಿದ ದಿಲ್ ರಾಜು ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರಂತೆ. ಹಾಗಾಗಿ ಯಶ್ ಜೊತೆ ಸಿನಿಮಾ ಮಾಡಲು ನಿರ್ಧರಿಸಿದ್ದು ಕನ್ನಡದ ಮತ್ತು ತೆಲುಗು ಎರಡು ಭಾಷೆಯಲ್ಲೂ ಒಟ್ಟಿಗೆ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. 

ಬೆಂಗಳೂರಿನಲ್ಲಿ ನಟ ಪೃಥ್ವಿರಾಜ್; ಶಿವಣ್ಣ-ಯಶ್ ಈ ಸಿನಿಮಾ ಮಾಡಬೇಕು ಎಂದ ಮಲಯಾಳಂ ಸ್ಟಾರ್

ರಾಕಿಂಗ್ ಯಶ್ 100 ಕೋಟಿ ಆಫರ್ ಒಪ್ಪಿಕೊಂಡು ದಿಲ್ ರಾಜು ಜೊತೆ ಸಿನಿಮಾ ಮಾಡುತ್ತಾರಾ ಎಂದುು ಕಾದುನೋಡಬೇಕು. ಆದರೆ ಈ ಬಗ್ಗೆ ಯಶ್ ಅಥವಾ ದಿಲ್ ರಾಜು ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಇನ್ನು ದಿಲ್ ರಾಜು ಸದ್ಯ ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ದಳಪತಿ ವಿಜಯ್ ಜೊತೆ ವರಿಸು ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಅಂದರೆ ವಿಜಯ್ ಹುಟ್ಟುಹಬ್ಬದ ದಿನ ವಿಜಯ್ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ರಿಲೀರ್ ಮಾಡುವ ಮೂಲಕ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದರು. ಈ ಸಿನಿಮಾಗೆ ವಂಶಿ ಪೈಡಿಪಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. 

KGF 2 ತರದ ಸಿನಿಮಾ ಬಾಲಿವುಡ್‌ನಲ್ಲಿ ಮಾಡಿದ್ರೆ ವಿರೋಧಿಸುತ್ತಿದ್ರು; ಕರಣ್ ಜೋಹರ್

ಈ ಸಿನಿಮಾ ಜೊತೆಗೆ ದಿಲ್ ರಾಜು ಯಶ್ ಜೊತೆ ಕನ್ನಡದಲ್ಲಿ ಸಿನಿಮಾ ಮಾಡುವ ಸಾಧ್ಯತೆ ಇದೆ. ದಿಲ್ ರಾಜು ನಿರ್ಮಾಣದಲ್ಲಿ ಬರುವ ಸಿನಿಮಾದಲ್ಲಿ ಯಶ್ ಬಣ್ಣ ಹಚ್ಚುವ ಮೂಲಕ ಮತ್ತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಾರಾ ಎಂದು ಕಾದುನೋಡಬೇಕು.