ಟ್ರೋಲ್‌ ವಿರುದ್ಧ ತಿರುಗಿ ಬಿದ್ದ ರವೀನಾ ಟಂಡನ್. ಮಿಡಲ್‌ ಕ್ಲಾಸ್‌ ಹುಡುಗಿಯಾಗಿ ರೈಲಲ್ಲಿ ಓಡಾಡಿದ್ದಾರಂತೆ. 

ಮುಂಬೈ: ಮುಂಬೈ ಲೋಕಲ್‌ ರೈಲಿನಲ್ಲಿ ಓಡಾಡುವಾಗ ನಾನೂ ಕಿರುಕುಳ ಅನುಭವಿಸಿದ್ದೇನೆ ಎಂದು ನಟಿ ರವೀನಾ ಟಂಡನ್‌ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಟ್ವೀಟರ್‌ನಲ್ಲಿ ‘ಮಧ್ಯಮ ವರ್ಗದವರ ಸಂಕಷ್ಟಗಳ ಬಗ್ಗೆ ಅರಿತಿದ್ದೀರಾ?’ ಎಂದು ಪ್ರಶ್ನಿಸಿದ ನೆಟ್ಟಿಗರಿಗೆ ರವೀನಾ ತಿರುಗೇಟು ನೀಡಿದ್ದಾರೆ.

ಆರೇ ಅರಣ್ಯ ವಲಯದಲ್ಲಿ ಮೆಟ್ರೋ ಶೆಡ್‌ ಆರಂಭಿಸುವ ಡಿಸಿಎಂ ದೇವೇಂದ್ರ ಫಡ್ನವೀಸ್‌ ಅವರ ನಿರ್ಧಾರವನ್ನು ವಿರೋಧಿಸಿದ್ದಕ್ಕಾಗಿ ರವೀನಾಗೆ ನೆಟ್ಟಿಗರು, ‘ಮುಂಬೈಯ ಮಧ್ಯಮ ವರ್ಗದವರ ಸಂಕಷ್ಟದ ಬಗ್ಗೆ ನಿಮಗೇನು ಗೊತ್ತು?’ ಎಂದು ಪ್ರಶ್ನಿಸಿದ್ದರು.

ಇದಕ್ಕೆ ರವೀನಾ ‘ಸಾಮಾನ್ಯವಾಗಿ ಎಲ್ಲ ಮಹಿಳೆಯರಂತೆ ನಾನೂ ಮುಂಬೈ ಲೋಕಲ್‌ ಬಸ್‌, ಟ್ರೇನ್‌ನಲ್ಲಿ ಓಡಾಡಿ ಕಿರುಕುಳ ಅನುಭವಿಸಿದ್ದೇನೆ. ಕೆಲವು ಕಿಡಿಗೇಡಿಗಳು ರೇಗಿಸುತ್ತಾರೆ, ಗಿಂಟುತ್ತಾರೆ. 92ರಲ್ಲಿ ನಾನು ಮೊದಲ ಕಾರು ಖರೀದಿಸಿದ್ದು. ಅಭಿವೃದ್ಧಿಗೆ ಎಂದಿಗೂ ಸ್ವಾಗತವಿದೆ. ಆದರೆ ಯೋಜನೆಗಾಗಿ ಕಾಡನ್ನು ಕತ್ತರಿಸುತ್ತಿದ್ದಾರೆ. ನಾವು ಪರಿಸರ ಸಂರಕ್ಷಣೆ ಜವಾಬ್ದಾರಿ ಹೊತ್ತುಕೊಳ್ಳಬೇಕು’ ಎಂದು ತಿರುಗೇಟು ನೀಡಿದ್ದಾರೆ

ಮತ್ತೊಂದು ಟ್ವೀಟ್‌ನಲ್ಲಿ 'ಪ್ರತಿಯೊಬ್ಬರು ಜೀವನ ಬೇರೆ ಇರುತ್ತದೆ ಎಲ್ಲರೂ ಹೂವಿನ ಹಾಸಿಗೆ ಮೇಲೆ ಮಲಗಿಕೊಂಡು ಬಂದಿಲ್ಲ. ಜೀವನದಲ್ಲಿ ಒಂದೊಳ್ಳೆ ಗುರಿ ತಲುಪಬೇಕು ಅಂದುಕೊಂಡಿರುವವರು ಖಂಡಿತ ಕಷ್ಟ ನೋಡಿರುತ್ತಾರೆ. ನಿಮ್ಮ ಬಳಿ ಕಾರು ಮತ್ತು ಮನೆ ಖಂಡಿತ ಇರುತ್ತದೆ. ಬೆಳಗ್ಗಿ ಬಿಸಿಲು, ಪ್ರವಾಸ ಮತ್ತು ಅನೇಕ ನೈಸರ್ಗಿಕ ವಿಕೋಪಗಳು ಸಾಮಾನ್ಯ ಮನುಷ್ಯರಿಗೆ ಮೊದಲು ಹೊಡೆತ ಬೀಳುವುದು. ಐಷಾರಾಮಿ ಜೀವನ ಎಂಜಾಯ್ ಮಾಡುತ್ತಿರುವವರು ಮೊದಲ Swiss chaletಗೆ ಹೋಗುವುದು' ಎಂದು ರವೀನಾ ಹೇಳಿದ್ದಾರೆ.

ಹೋದಲ್ಲಿ ಬಂದಲ್ಲಿ ಶ್ರೀನಿಧಿ ಶೆಟ್ಟಿಗೆ ರಮಿಕಾ ಸೇನ್ ಕಾಟ, ಡಾಮಿನೇಟ್ ಆಗ್ತಿದ್ದಾರಾ ಕೆಜಿಎಫ್ ಕ್ವೀನ್..?

ರವೀನಾ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಷ್ಟೊಂದು ಐಷಾರಾಮಿ ಜೀವನ ಹೊಂದಿರುವ ನಟಿ ರೈಲಲ್ಲಿ ಪ್ರಯಾಣ ಮಾಡಿರುವುದು ಸುಳ್ಳು ಸುಮ್ಮನೆ ಅಭಿವೃಧಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ. ಹೀಗಾಗಿ ಮತ್ತೊಂದು ಟ್ವೀಟ್ ಮೂಲಕ ಟ್ರೋಲ್ ಗುರುಗಳಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. 

Scroll to load tweet…

'1991ರವರೆಗೂ ನಾನು ರೈಲಲ್ಲಿ ಪ್ರಯಾಣ ಮಾಡುತ್ತಿದ್ದೆ. ನಿಮ್ಮಂತೆ ಅನೇಕ ಹೆಸರಿಲ್ಲದ ಟ್ರೋಲ್‌ಗಳಿಂದ ಕಿರುಕುಳ ಅನುಭವಿಸಿದ್ದೀನಿ. ಕೆಲಸದ ಆರಂಭದಲ್ಲೇ ನಾನು ಯಶಸ್ಸು ಕಂಡು ನನ್ನ ಮೊದಲ ಕಾರು ಖರೀದಿ ಮಾಡಿದ್ದೀನಿ ಟ್ರೋ ಜಿ. ಒಬ್ಬರ ಯಶಸ್ಸನ್ನು ನೀವು ಹಣ ಮತ್ತು ಸಮೃಧಿಯಿಂದ ಜಡ್ಜ್‌ ಮಾಡಬೇಡಿ. ಅಭಿವೃದ್ಧಿಗೆ ಎಂದಿಗೂ ಸ್ವಾಗತವಿದೆ ಆದರೆ ನಾವು ಮಾಡುವ ಕೆಟ್ಟ ಕೆಲಸಕ್ಕೆ ದೊಡ್ಡ ಮಟ್ಟದಲ್ಲಿ compensation ಕಟ್ಟಬೇಕು. ಇಂಡಿಯಾದಲ್ಲಿ ಅತಿ ಹೆಚ್ಚು ಟೈಗರ್‌ಗಳಿದೆ ನಾವು ರಕ್ಷಣೆ ಮಾಡಬೇಕು ಎಂದು ಹೋರಾಟ ಮಾಡುತ್ತೀವಿ ಆದರೆ ಅದಕ್ಕೆ ಮುಖ್ಯವಾದದ್ದು ಕಾಡುಗಳನ್ನು ಉಳಿಸುವುದು ಅದನ್ನ ಮೊದಲು ಮಾಡಬೇಕು'ಎಂದು ರವೀನಾ ಉತ್ತರಿಸಿದ್ದಾರೆ.

ರವೀನಾ ಜರ್ನಿ:

 ಸಿನಿಮಾ ಕುಟುಂಬದಿಂದ ಬಂದಿದ್ದರೂ ರವೀನಾ ಎಷ್ಟು ಕಷ್ಟಪಟ್ಟು ಮೇಲೆ ಬಂದರು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. 30 ವರ್ಷಗಳ ಹಿಂದೆ ಎಂದರೆ 1991ರಲ್ಲಿ ರವೀನಾ ಟಂಡನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಖ್ಯಾತ ನಿರ್ಮಾಪಕ ರವಿ ಡಂಟನ್ ಮಗಳು ರವೀನಾ ಟಂಡನ್.ಸಿನಿಮಾ ಕುಟುಂಬದಿಂದ ಬಂದರೂ ರವೀನಾ ಸಿನಿಮಾ ಮತ್ತು ಜಾಹೀರಾತು ನಿರ್ಮಾಪಕ ಪ್ರಹ್ಲಾದ್ ಕಕ್ಕರ್ ಅವರ ಕಚೇರಿಯಲ್ಲಿ ಕೆಲಸ ಪ್ರಾರಂಭ ಮಾಡುವ ಮೂಲಕ ಸಿನಿಮಾರಂಗದ ಜರ್ನಿ ಪ್ರಾರಂಭ ಮಾಡಿರುವುದಾಗಿ ಹೇಳಿದ್ದಾರೆ. ಪ್ರಾರಂಭದ ದಿನಗಳಲ್ಲಿ ಸ್ಟುಡಿಯೊ ಕ್ಲೀನ್ ಮಾಡುವ ಕೆಲಸವನ್ನು ಮಾಡಿರುವುದಾಗಿ ಹೇಳಿದ್ದಾರೆ. ಯಾವತ್ತು ನಟಿಯಾಗಬೇಕೆಂದು ಬೆಳೆದಿಲ್ಲ ಎಂದು ರವೀನಾ ಹೇಳಿದ್ದಾರೆ.

Raveena Tandon About Daughters: ಹೆಣ್ಮಕ್ಕಳನ್ನು ದತ್ತುಪಡೆದ ವಿಷಯ ರವೀನಾ ಮುಚ್ಚಿಟ್ಟಿದ್ದೇಕೆ?

ಈ ಬಗ್ಗೆ ಮಿಡ್ ಡೇ ಜೊತೆ ಮಾತನಾಡಿದ ರವೀನಾ ಟಂಡನ್, 'ನಾನು ಸ್ಟುಡಿಯೊ ಫ್ಲೋರ್ ನಲ್ಲಿ ವಾಂತಿ ಕ್ಲೀನ್ ಮಾಡುವ ಮೂಲಕ ನನ್ನ ವೃತ್ತಿ ಜೀವನ ಪ್ರಾರಂಭಿಸಿದೆ. ಪ್ರಹ್ಲಾದ್ ಕಕ್ಕರ್ ಜೊತೆ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಅವರು ಪರದೆ ಹಿಂದೆ ಏನು ಮಾಡುತ್ತಿದ್ದೀರಿ ಎಂದು ಹೇಳುತ್ತಿದ್ದರು. ನೀವು ಪರದೆ ಮುಂದೆ ಇರಬೇಕು ಎನ್ನುತ್ತಿದ್ದರು. ನಾನು ಇಲ್ಲ ಇಲ್ಲ..ನಾನು ನಟಿಯಾಗುವುದಾ ಎಂದು ಹೇಳುತ್ತಿದ್ದೆ. ಡಿಫಾಲ್ಟ್ ಆಗಿ ಚಿತ್ರರಂಗದಲ್ಲಿ ಇದ್ದೀನಿ. ನಾನು ನಟಿಯಾಗುತ್ತೇನೆ ಎಂದು ಯೋಚಿಸಿರಲಿಲ್ಲ' ಎಂದಿದ್ದಾರೆ.